ಪಾಕಿಸ್ತಾನದ ಪರ ಘೋಷಣೆ ಕೂಗುವವರು ಮತ್ತು ಅವರನ್ನು ಸಮರ್ಥಿಸುವವರು ಪಾಕಿಸ್ತಾನಕ್ಕೆ ಹೋಗಲಿ

ಕಳೆದ ವಾರ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಕ್ರಿಕೆಟ್ ಪಂದ್ಯಾವಳಿಯ ಸಂದರ್ಭದಲ್ಲಿ ಉತ್ತರ ಪ್ರದೇಶದ ಮೀರತ್ನ ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯದ ಕೆಲ ದೇಶದ್ರೋಹಿ ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿ, ಪಾಕಿಸ್ತಾನದ ವಿಜಯದ ಸಂಭ್ರಮಾಚಣೆ ಮಾಡಿರುವುದು ವರದಿಯಾಗಿದೆ. ಈ ಬಗ್ಗೆ ಕೇಳಿದಾಗ ನನಗೆ ನಿಜಕ್ಕೂ ಗಾಬರಿಯಾಯಿತು. ದೇಶದ ಹೃದಯ ಭಾಗದಿಂದಲೇ ದೇಶದ್ರೋಹಿ ಚಟುವಟಿಕೆಗಳು ಪ್ರಾರಂಭವಾಗಿರುವುದು ನಿಜಕ್ಕೂ ದೇಶಕ್ಕೆ ಎಚ್ಚರಿಕೆಯ ಗಂಟೆಯೇ ಸರಿ.
ಇಷ್ಟು ದಿನ ಕೇವಲ ಕಾಶ್ಮೀರದಲ್ಲಿ ಮಾತ್ರ ಪ್ರತ್ಯೆಕತೆಯ ಕೂಗು ಕೇಳುತ್ತಿದ್ದೆವು. ಆದರೆ ಈಗ ದೇಶದ ಇತರ ಕಡೆಗೂ ಇಂತಹ ಬೆಳವಣಿಗೆಗಳು ಕಂಡು ಬರುತ್ತಿರುವುದು ನಿಜಕ್ಕೂ ದುರದೃಷ್ಟಕರ. ಮೀರತ್ ಕೋಮುಗಲಭೆಯ ಅತಿ ಸೂಕ್ಷ್ಮ ಪ್ರದೇಶ. ಮೀರತ್ನ ಸ್ವಾಮಿ ವಿವೇಕಾಂದ ವಿಶ್ವವಿದ್ಯಾಲಯದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳು ಇಂಜಿನಿಯರಿಂಗ್, ಎಂಬಿಎ ನಂತಹ ಕೋರ್ಸುಗಳ ವ್ಯಾಸಂಗಕ್ಕಾಗಿ ಆಗಮಿಸಿದ್ದಾರೆ. ಅವರು ಅಲ್ಲಿ ಬಂದಿರುದಕ್ಕೆ ಮುಖ್ಯ ಕಾರಣ, ಕಾಶ್ಮೀರದಲ್ಲಿ ವಿದ್ಯಾಭ್ಯಾಸ ಮಾಡಲು ಸರಿಯಾದ ವಾತಾವರಣವಿಲ್ಲ, ಪ್ರತ್ಯೆಕತಾವಾದಿಗಳ, ಭಯೋತ್ಪಾಧಕರ ಕೃತ್ಯಗಳಿಂದಾಗಿ ಕಾಶ್ಮೀರ ಅಲ್ಲೋಲಕಲ್ಲೋಲವಾಗಿದೆ. ಹೀಗೆ ಬೇರೆ ರಾಜ್ಯಗಳಿಗೆ ವಿದ್ಯಾಭ್ಯಾಸ ಮಾಡಲು ಬಂದವರು ಆ ಕೆಲಸ ಬಿಟ್ಟು ಪ್ರತ್ಯೆಕತೆಯ, ದೇಶದ್ರೋಹದ ಕೆಲಸ ಮಾಡುವುದು ಎಷ್ಟು ಸರಿ?
ಈ ಕೃತ್ಯಕ್ಕೆ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಬೇಕಿತ್ತು. ಆದರೆ ಬುದ್ಧಿ ಜೀವಿಗಳೆನಿಸಿಕೊಂಡವರು ಮೌನಕ್ಕೆ ಶರಣಾದರು. ಗುಜರಾತ್ ಗಲಭೆ, ಹಿಂದೂ ಸಂಘಟನೆಗಳ ಬಗ್ಗೆ ಮಾತನಾಡುವ ನಮ್ಮ ನಾಡಿನ ಜ್ಞಾನಪೀಠಿ ಸಾಹಿತಿ ಯು ಆರ್ ಅನಂತಮೂರ್ತಿಯವರಿಂದ ಯಾವುದೇ ಹೇಳಿಕೆ ಹೊರಬರಲಿಲ್ಲ. ಹಿಂದೂ ಸಂಘಟನೆಗಳ ವಿರುದ್ಧ ಮಾತನಾಡುವುದರಿಂದ ಯಾವುದೇ ಅಪಾಯವಿಲ್ಲ ಎಂಬ ಜ್ಞಾನ ಅನಂತಮೂರ್ತಿಯವರಿಗಿದೆ. ಏಕೆಂದರೆ ಹಿಂದೂ ಸಂಘಟನೆಯವರು ಯಾವತ್ತೂ ಟೀಕಿಸಿದವರ ವಿರುದ್ಧ ಬಲ ಪ್ರಯೋಗ ಮಾಡುವುದಿಲ್ಲ.
ಅವತ್ತು ಆ ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದಾಗ ಅವರನ್ನು ಬಂದಿಸಿ ಜೈಲಿಗೆ ಅಟ್ಟಬೇಕಿತ್ತು. ಆದರೆ ಆ ವಿದ್ಯಾರ್ಥಿಗಳನ್ನು ಪೊಲೀಸರೇ ತಮ್ಮ ರಕ್ಷಣೆಯಲ್ಲಿ ದೆಹಲಿ ತಲುಪಿಸಿ ಅಲ್ಲಿ ಅವರಿಗೆ ರಕ್ಷಣೆ ನೀಡಿದರು. ಭಾರತೀಯ ಜನತಾ ಪಾರ್ಟಿಯನ್ನು ಹೊರತು ಪಡಿಸಿ ಮತ್ಯಾವ ರಾಜಕೀಯ ಪಕ್ಷಗಳೂ ಅವರ ಈ ಕೃತ್ಯವನ್ನು ಖಂಡಿಸಲಿಲ್ಲ. ಈ ಕುಕೃತ್ಯವನ್ನು ಖಂಡಿಸದ ಇತರ ರಾಜಕೀಯ ಪಕ್ಷಗಳೂ ದೇಶವಿರೋಧಿಗಳೇ ಅಲ್ಲವೇ? ಒಂದು ವೇಳೆ ಪಾಕಿಸ್ತಾನದಲ್ಲಿ ಅಲ್ಲಿನ ಅಲ್ಪಸಂಖ್ಯಾತರು ಭಾರತ ಪರ ಘೋಷಣೆ ಕೂಗಿದ್ದರೆ ಅಲ್ಲಿನ ಸರ್ಕಾರ ಅವರಿಗೆ ಇದೇ ರೀತಿಯ ರಕ್ಷಣೆ ನೀಡುತ್ತಿತ್ತೆ?
ಅಷ್ಟಕ್ಕೂ ಈ ರೀತಿ ದೇಶವಿರೋಧಿ ನಿಲುವು ತಳೆದಿರುವ ಈ ವಿದ್ಯಾರ್ಥಿಗಳಿಗೆ ಮತ್ತು ಇವರಂತಹ ಇತರ ಪ್ರತ್ಯೆಕತಾವಾದಿಗಳಿಗೆ ನಾಚಿಕೆ, ಸ್ವಾಭಿಮಾನ ಇಲ್ಲವೇ? ಪಾಕಿಸ್ತಾನದ ಪರ ಒಲವು ಇದ್ದೋರು ಈ ದೇಶದ ಅನ್ನವನ್ನೇಕೆ ಸೇವನೆ ಮಾಡಬೇಕು? ಈ ದೇಶದ ಸೌಲಭ್ಯಗಳನ್ನೇಕೆ ಬಳಸಿಕೊಳ್ಳಬೇಕು? ಇದು ಹೇಡಿನತ, ನಾಚಿಕೆಗೇಡು ಅಲ್ಲವೇ? ತಾಯಿಯ ಎದೆ ಹಾಲು ಕುಡಿದು ಬೇಳೆದೋರು ಮಾಡುವ ಕೃತ್ಯವಲ್ಲ ಇದು. ಇಂತಹ ದೇಶದ್ರೋಹಿಗಳ ಪರ ನಿಲ್ಲುವವರು ಇವರಿಗಿಂತ ನೀಚರು ಅಲ್ಲವೇ?
ಅಲ್ಲಿನ ವಿಶ್ವವಿದ್ಯಾಲಯ ಈ ವಿದ್ಯಾರ್ಥಿಗಳನ್ನು ಕೇವಲ ಮೂರು ದಿನದ ಮಟ್ಟಿಗೆ ಮಾತ್ರ ಸಸ್ಪೆಂಡ್ ಮಾಡಿದೆ. ಇದು ಸರಿಯಾದ ನಿರ್ಧಾರ ಅಲ್ಲಿ. ಈ ದೇಶದ್ರೋಹಿಗಳನ್ನು ಅಲ್ಲಿಂದ ಶಾಶ್ವತವಾಗಿ ವಜಾ ಮಾಡಬೇಕು. ಯಾಕೆಂದರೆ ಅವರು ಮತ್ತೆ ಅಲ್ಲಿ ಮರಳಿದರೆ ಅದು ವಿಶ್ವವಿದ್ಯಾಲಯದ ಹೆಸರಿಗೆ ಕಳಂಕ ತರುತ್ತದೆ ಮತ್ತು ಅದು ದೊಡ್ಡ ಗಲಭೆಗೂ ಕಾರಣವಾಗಬಹುದು. ಇವರ ವಿರುದ್ಧ ದೇಶಭಕ್ತರು ಕಾನೂನು ಕೈಗೆತ್ತಿಕೊಳ್ಳಬಹುದು ಮತ್ತು ಅದು ದೇಶಕ್ಕೆ ತಪ್ಪು ಸಂದೇಶ ಕೊಡಬಹುದು. ಇದೇ ರೀತಿಯ ತಪ್ಪುಗಳು ದೇಶದ ಇತರೆಡೆಯೂ ಸಂಭವಿಸಬಹುದು.
ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈ ದೇಶದ್ರೋಹಿಗಳ ಪರ ನಿಂತು, ವಿದ್ಯಾರ್ಥಿಗಳ ಮೇಲಿರುವ ದೂರುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಿರುವುದು ಸರಿಯಾದುದಲ್ಲ. ಕಾಶ್ಮೀರಿ ಪ್ರತ್ಯೆಕತಾವಾದಕ್ಕೆ ಅಲ್ಲಿನ ಮುಖ್ಯಮಂತ್ರಿಗಳೇ ಹಸಿರು ನಿಶಾನೆ ತೋರಿಸಿದಂತಾಗುತ್ತದೆ. ಇದು ಮತ್ತಷ್ಟು ದೇಶವಿರೋಧಿ ಚಟುವಟಿಕೆಗಳಿಗೆ ದಾರಿ ಮಾಡಿಕೊಡಬಹುದು.
ಇಂತಹ ದೇಶವಿರೋಧಿ ಕೃತ್ಯಗಳು ಬೆಳೆಯದಂತೆ ಸರ್ಕಾರಗಳು ಗಮನ ವಹಿಸಬೇಕು. ಏಕೆಂದರೆ ಇವೇ ಮುಂದೆ ನಮ್ಮ ದೇಶಕ್ಕೆ ಕಂಟಕವಾಗಬಹುದು. ಪಾಕಿಸ್ತಾನ ಪರ ಮತ್ತು ಭಾರತ ವಿರೋಧಿ ಘೋಷಣೆ ಕೂಗಿದ ಈ ವಿದ್ಯಾರ್ಥಿಗಳ ಕೃತ್ಯವನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದು. ಅವರ ಮೇಲೆ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಲಿ.
- ಬಸವರಾಜ ಕುಳಲಿ
ಎಂ ಟೆಕ್ ವಿದ್ಯಾರ್ಥಿ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ
+91-9620395838