ಜಗಮೋಹನ್ ಲಾಲ್ ಸಿನ್ಹಾ‍‍ _ಇಂದಿರಾಗಾಂಧಿ_ ತುರ್ತುಪರಿಸ್ಥಿತಿ

ಜಗಮೋಹನ್ ಲಾಲ್ ಸಿನ್ಹಾ‍‍ _ಇಂದಿರಾಗಾಂಧಿ_ ತುರ್ತುಪರಿಸ್ಥಿತಿ

ಚಿತ್ರ

ಜಗಮೋಹನ್ ಲಾಲ್  ಸಿನ್ಹಾ  ಭಾರತದ ನ್ಯಾಯಾಂಗ ವ್ಯವಸ್ಥೆ ಹೆಮ್ಮೆಪಟ್ಟುಕೊಳ್ಳುವ ನ್ಯಾಯದೀಶರು. 

ಭಾರತದ ನ್ಯಾಯಂಗ ವ್ಯವಸ್ಥೆಯೆ ಸದಾ ಕಾಲ ತಲೆ ಎತ್ತಿ ನಿಲ್ಲಬಹುದಾದ ನ್ಯಾಯನಿರ್ಣಯ ನೀಡಿದ್ದ, ಅಲಹಾಭಾದ್ ಹೈಕೋರ್ಟಿನ ನ್ಯಾಯಾದೀಶ.  ೧೯೭೫ ರಲ್ಲಿ  ಸ್ಟೇಟ್ ಆಫ್ ಉತ್ತರ ಪ್ರದೇಶ್ v/s ರಾಜನಾರಯಣ್ ಕೇಸು ಎಂದು ಪ್ರಖ್ಯಾತವಾದ ಕೇಸಿಗೆ ತಮ್ಮ ಉತ್ತಮ ನ್ಯಾಯ ನಿರ್ಣಯದ ಮೂಲಕ ಭಾರತದ ನ್ಯಾಯಂಗ ವ್ಯವಸ್ಥೆಯಲ್ಲಿ ಸಂಚಲನ ಮೂಡಿಸಿದವರು ಇವರು. 

೧೯೭೧ ರಲ್ಲಿ ರಾಜನಾರಯಣ್ ರವರು ಇಂದಿರಾಗಾಂದಿಯವರ ವಿರುದ್ದ ಹೂಡಲಾಗಿದ್ದ , ಚುನಾವಣ ತಕರಾರಿನ ಧಾವೆ ಸತತ ನಾಲಕ್ಕು ವರ್ಷಗಳ ಕಾಲ ನಡೆದು, ಮೇ ೨೩ , ೧೯೭೫ ರಂದು ಕೊನೆಗೊಂಡಿತ್ತು.  ಕಡೆಗೊಮೆ ರೂಮ ನಂ ೨೪ ಅಲಹಾಬಾದ್ ಹೈಕೋರ್ಟ್ , ಇಲ್ಲಿ ನ್ಯಾಯಾದೀಶರು ಕೇಸಿನ ನಿರ್ಣಯ ಓದಲು ಕುಳಿತಾಗ ಕೋರ್ಟ್ ಎನ್ನುವುದು ಅಕ್ಷರ ಸಹ ಕಿಕ್ಕಿರಿದಿತ್ತು. 

ತಮ್ಮ ೨೫೮ ಪುಟಗಳ ನ್ಯಾಯ ನಿರ್ಣಯ ಓದುವ ಮೊದಲು ನ್ಯಾಯದೀಶರು ಸಾಕಷ್ಟು ಕ್ರಮ ಕೈಗೊಂಡಿದ್ದರು. ನ್ಯಾಯದಿಪತಿಗಳು ನ್ಯಾಯಲಯ ಪ್ರವೇಶಿಸಿದಾಗ ಮಾತ್ರ ಎದ್ದು ನಿಲ್ಲುವುದು ನ್ಯಾಯಾಲಯದ ಕ್ರಮ ಹಾಗು ಪದ್ದತಿ, ಆದ್ದರಿಂದ ಇಂದಿರಾಗಾಂದಿಯವರು ನ್ಯಾಯಲಯ ಪ್ರವೇಶಿಸಿದಾಗ ಯಾರು ಎದ್ದು ನಿಲ್ಲಬಾರದೆಂದು ಸೂಚನೆ ನೀಡಿದ್ದರು. ಅಲ್ಲದೆ ಕೋರ್ಟಿನೊಳಗೆ ಪ್ರಧಾನಿಯವರ ಬೆಂಗಾವಲು ಪಡೆಯಾಗಲಿ, ಅಥವ ಮಿಲಿಟರಿಯಾಗಲಿ ಪ್ರವೇಶಿಸಬಾರದೆಂದು ಬದಲಿಗೆ, ವಕೀಲರೆಲ್ಲ ಮಾನವ ಸರಪಳಿ ನಿರ್ಮಿಸಿ ಇಂದಿರಾಗಾಂಧಿವವರಿಗೆ ರಕ್ಷಣೆ ನೀಡಬೇಕೆಂದು ಸೂಚಿಸಿದ್ದರು. ಇದು ಆಗ ನ್ಯಾಯಲಯದಲ್ಲಿ ನೆರೆದಿದ್ದ ಆಗಿನ ನ್ಯಾಯವಾದಿಗಳು ಈಗಿನ ನ್ಯಾಯದೀಶರುಗಳು ತಿಳಿಸಿರುವ ವಿಷಯಗಳು. 

ಕಡೆಗೊಮ್ಮೆ  ೧೨೩(೭) ಕಾಲಂ ಅಡಿಯಲ್ಲಿ ಇಂದಿರಾಗಾಂದಿಯವರು ತಪ್ಪಿತಸ್ಥರೆಂದು, ಅವರ ಚುನಾವಣೆ ಗೆಲುವು ಅಕ್ರಮವೆಂದು ಹಾಗಾಗಿ ಅವರ ಲೋಕಸಭಾ ಸದಸ್ಯತ್ವ ಅಸಿಂದುವೆಂದು ಮಹತ್ವದ ನಿರ್ಣಯವನ್ನು June 12, 1975 ರಂದು ಓದಿ ಹೇಳಿದರು. 

 ಮುಂದಿನ ಘಟನೆಗಳು ಭಾರತದ ಇತಿಹಾಸ. 

ಇಂತಹ ನ್ಯಾಯಮೂರ್ತಿ ಜಗಮೋಹನ್ ಲಾಲ್ ಸಿನ್ಹಾ ರವರು ಜನಸಿದ್ದು  12-may-1920 
ಮತ್ತು ಮರಣ ಈಚೆಗೆ ಅಂದರೆ  20 march 2008  , ಸುಮಾರು 88 ವರ್ಷಗಳ ತುಂಬು ಜೀವನ ನಡೆಸಿದ ಜಗಮೋಹನ್ ಲಾಲ್ ರವರು ಅಲಹಾಬಾದಿನ ತಮ್ಮ ಮನೆಯಲ್ಲಿ ಮರಣಹೊಂದಿದರು.  

ಆದಾರ :

http://kannada.webdunia.com/newsworld/news/national/0803/22/1080322034_1...

http://en.wikipedia.org/wiki/Jagmohanlal_Sinha

ಚಿತ್ರ : http://upload.wikimedia.org/wikipedia/commons/thumb/4/40/Justice_Jagmoha...

Rating
No votes yet

Comments