ಮೂಕ ವೇದನೆ

ಮೂಕ ವೇದನೆ

ಮುಂದಿನ ವಾರ ಅಮ್ಮನವರ ಜಾತ್ರೆ, ಭಕ್ತಿಯನ್ನು ಭಾವಪರವಶವಾಗಿ ತೋರಿಸಬೇಕು,,, ಅಮ್ಮ ಮರುಳಾಗಿ ಒಲಿಯಬೇಕು,,,

ಕುರಿಯ ಹುಡುಕಾಟ,,

ಅದು ದಷ್ಟಪುಷ್ಟ ಗಂಡು ಕುರಿ,,,,,, ತನ್ನ ಏಕಾಂಗಿ ಪ್ರೇಯಸಿ ಕುರಿಯೊಂದಿಗೆ ಸರಸ ಮಾತುಗಳ ಸಲ್ಲಾಪದಲ್ಲಿ ತೊಡಗಿದ್ದ ಸಮಯ,,,,ಅಷ್ಟರಲ್ಲೇ ಯಜಮಾನ ಕರೆದ,,,,,,, ಇದೀಗ ಬಂದೆ ಚಿನ್ನ ಎಂದು ಪ್ರೇಯಸಿ ಕುರಿಯ ತುಟಿಗೆ ಮುತ್ತಿಕ್ಕಿ ಅವನ ನಿರ್ಗಮನ,,,,,,, ಯಜಮಾನನ ಕೈಲಿ ನಾಲ್ಕು ಬಣ್ಣದ ಹಾಳೆಗಳು,,,,, ಬಂದವನೊಂದಿಗೆ ಗಂಡು ಕುರಿಯನ್ನು ಕಳುಹಿಸಿ ಕೊಟ್ಟ,,,,,,,
ಇಲ್ಲಿ ಪ್ರೇಯಸಿಯು ಎಲೆಗಳ ಮರೆಯಲ್ಲಿ ಆತನ ಬರುವಿಕೆಗಾಗಿ ಕಾತುರ,,,,, ತನ್ನೊಡಲಲ್ಲಿ ಬೆಳೆಯುತ್ತಿರುವ ನಿನ್ನ ಪ್ರತಿರೂಪ ನಾ ನಿನಗೆ ತೋರಬೇಕು,,,, ಬೇಗಾ ಬಾ,,, ಆಕೆಯ ಆಲಾಪನೆ,,, ಅಲ್ಲ ಆಕ್ರಂದನ ,,,,,

ಗಂಡು ಕುರಿಯ ಕೊರಳಲ್ಲಿ ಮಾಲೆ,,,,,  ಎದುರಲ್ಲೇ ಬಗೆ ಬಗೆಯ ಎಲೆಗಳ, ಎಸಲುಗಳ ರಾಶಿ,,,,,  ಅದನ್ನು ಸವಿಯಲು ಆತನ ಮನಸ್ಸೋಲ್ಲದು,,,,ಆಕೆ ನನಗಾಗಿ ಕಾಯುತ್ತಿರಬಹುದು,,,, ನನ್ನ ಯಜಮಾನನೇಕೆ ನನ್ನನ್ನು ಇಲ್ಲಿಗೆ ಕಳುಹಿದ, ಕಂಡು ಕೇಳರಿಯದ ಜಾಗಕ್ಕೆ,,,, ಕೇಳುವುದು ಯಾರನ್ನ,,,, ನನ್ನಾಕೆ ಏನು ಮಾಡುತ್ತಿರಬಹುದು ಈಗಾ?,,,, ಮೊದ್ದು ಅವಳು ಯಾವ ಎಲೆಯನ್ನು ಹೇಗೆ ತಿನ್ನಬೇಕು ಗೊತ್ತಿಲ್ಲ ಅವಳಿಗೆ (ಸ್ವಗತ ಮುಗುಳ್ನಗು),,,, ನಾ ಈ ಮಾಲೆಯಲ್ಲಿ ಹೇಗೆ ಕಾಣುತ್ತಿರಬಹುದು,,,,ಅವಳ ಬಳಿ ಹೋದ ತಕ್ಷಣವೇ ಅವಳ ಕಣ್ಣಲ್ಲಿ ನನ್ನ ಪ್ರತಿಬಿಂಬ ನೋಡಬೇಕು,,,,

ಜನರ ಗುಂಪಿನ ಆರ್ತಾನಾದ,,,,ದೇವಿ ಕಾಪಾಡು,,, ಅಮ್ಮ ಕಾಪಾಡು,,,,ಚಂಡೆ ಮದ್ದಲೆ ಸದ್ದು,,,,,, ಮಧ್ಯದ ವಾಸನೆ,,,,ಕುಣಿತಾ,,,,, ದೇವಿ ಕಣ್ಣು ಬಿಡುವ ಸಮಯ,,, ಕರೆತನ್ನಿ ಬಲಿಯನ್ನು,,,,ಬೇಗ, ಬೇಗ,,,
ಅಬ್ಬಾ ಅದೇನು ಜನ,,, ಎಲ್ಲರು ನನ್ನತ್ತ ಬರುತ್ತಿದ್ದಾರೆ,,, ಅಯ್ಯೋ ನನ್ನ ಹಿಡಿದರು,,, ಬಿಡಿ, ಬಿಡಿ,,, ನನ್ನಾಕೆ ಕಾಯುತ್ತಿದ್ದಾಳೆ ಅವಳ ಒಡಲಲ್ಲಿ ನನ್ನ ರೂಪವ ಹೊತ್ತು,,,,,,ನಾನು ಹೋಗಬೇಕು,,,, , ಕುತ್ತಿಗೆಯ ಮೇಲೆ ಏನು ಮಾಡುತ್ತಿದ್ದೀರಿ,,, ಅಯ್ಯೋ ರಕ್ತ,,,, ಅಯ್ಯೋ,,,,,ನೋವು,,,,, ,ಕತ್ತಲೆ,,,,,,,, ಸಂಪೂರ್ಣ ಕತ್ತಲೆ,,,,

ದೇವಿ ಸಂತೃಪ್ತಳಾದಳು,,,, ಎಂದ ಪೂಜಾರಿ,,,,ಹಬ್ಬ ಜೋರಾಗಿದೆ,,,,ಕುರಿಯ ಮಾಂಸದ ರುಚಿಯಾದ ಅಡುಗೆ,,,, ಬಾಯಿ ಚಪ್ಪರಿಸಿದರು,,,,

ಇಲ್ಲಿ ಪ್ರೇಯಸಿ ಕಾಯುತ್ತಲೇ ಇದ್ದಾಳೆ,,,,,"ಕಣ್ಣರಿಯದಿದ್ಡೋಡೆ ಕರುಳರಿಯದೇ ?",,,,,, ಆಕೆಯ ಪ್ರಾಣ ಪಕ್ಷಿ ????

ನಾಲ್ಕು ದಿನದ ನಂತರ,,,,

ನಗರದ ಬೀದಿಗಳಲ್ಲಿ ಒಂಟಿ ಆನೆಯ ಹಾವಳಿ,,,,, ನಾಲ್ಕು ಜನರನ್ನು ಕೊಂದ ಕಾಡಾನೆ,,,,

ಜನರ ಉಲಿಕೆ,,,,,,,"ಪಾಪ ಸತ್ತವರಲ್ಲೋಬ್ಬನು ಮೊನ್ನೆ ತಾನೇ ಮದುವೆ ಮಾಡಿಕೊಂಡಿದ್ದನಂತೆ,,,,,,, ಅಯ್ಯೋ ಇನ್ನೊಬ್ಬನಿಗೆ ಒಂದು ವರ್ಷದ ಮಗುವಂತೆ",,,,,, ಪಾಪ,,,,,

ಸತ್ತವರ ಮನೆಯಲ್ಲಿ,,,,,,"ಅದೇನು ಅಂತ ಕಾಲಿಟ್ಲೋ ತಾಟಗಿತ್ತಿ, ನನ್ನ ಮಗನ್ನೇ ತಿನ್ದುಕೊಂಡಳು,,,,,, ಅದೇನು ಅಂತ ಹೆತ್ತುಬಿಟ್ಲೋ, ನನ್ನ ಕರುಳಿನ ಕುಡಿನೇ ನಾಶ ಆಯಿತು",,,,,

ಪೂಜಾರಿ,,,,,,,ಈ ವರ್ಷ ಜಾತ್ರೆಲ್ಲಿ ಯಾರ್ ಏನು ಅಪಚಾರ ಮಾಡಿದರೋ,,,, ದೇವಿ ಮುನಿಸಿಕೊಂಡವಳೇ,,,,,, ಅದಕ್ಕೆ ಊರಿಗೆ ಆನೆ ಬಂದೈತೆ,,,,,

--ಯಾರು ತಿಳಿಯಬಲ್ಲರು ಮೂಕ ವೇದನೆ ??

-- ನವೀನ್ ಜೀ ಕೇ 
 

Comments

Submitted by lpitnal Mon, 03/24/2014 - 21:36

ನವೀನ್ ಜೀ ಕೇ ರವರೇ, ತುಂಬ ಚನ್ನಾಗಿದೆ. ಮೂಕ ವೇದನೆ ಮೆಚ್ಚುಗೆಯಾಯಿತು.ಧನ್ಯವಾದ

Submitted by naveengkn Tue, 03/25/2014 - 09:21

In reply to by lpitnal

ಇತ್ನಾಳರಿಗೆ ನಮಸ್ತೆ,,,,,, ಪ್ರತಿಕ್ರಿಯೆಗೆ ಧನ್ಯವಾದಗಳು,,,,, ನಮಗವು ಸಾಕು ಪ್ರಾಣೀಗಳು,,,,ನಾವು ಅವಕ್ಕೆ "ಕ್ರೂರ‌" ಪ್ರಾಣಿಗಳು,,,,,,,

Submitted by kavinagaraj Tue, 03/25/2014 - 10:19

ಹಿಂಸೆ - ಯಾವುದೇ ರೂಪದ ಹಿಂಸೆ- ಖಂಡನೀಯ.

Submitted by naveengkn Tue, 03/25/2014 - 20:06

In reply to by kavinagaraj

ಅದು ಸತ್ಯ‌ ಕವಿಗಳೇ,,,, ಬೇಲಿಯೆ ಎದ್ದು ಹೊಲ‌ ಮೇಯುತ್ತದೆ ಕೆಲವೊಮ್ಮೆ,,,,,,

‍‍‍ಪ್ರತಿಕ್ರಿಯೆಗೆ ಧನ್ಯವಾದಗಳು,,