ಶಬ್ದಾತೀತ

ಶಬ್ದಾತೀತ

ಶಬ್ದಗಳ ರಾಶಿಯನ್ನು ಮುಂದಿಟ್ಟು
ಭಾವನೆಗಳನ್ನು ಅದರಲ್ಲಿ ಹರಿಬಿಟ್ಟು
ಕಟಿದೆ ಕಡಿಗೋಲು ಜೋತು ಬಿಟ್ಟು
ಶಬ್ದಾತೀತ ಭಾವಗಳ ತಿಕ್ಕಾಟ ಜೋರಿತ್ತು

ಮನಸ್ಸೆಂಬ ಮಸರಿನ ಗಡಿಗೆ ಒಡೆದಿತ್ತು
ಬೆಳ್ಳಂಬೆಳಗೆ ಶುರುವಾಯಿತು ತಾಕಲಾಟ
ಕಡಿಗೋಲು ಕಟಿತದ ಪರಮಾವಧಿಯಲ್ಲಿತ್ತು
ಆಂತರ್ಯದಲ್ಲಿ ಬೆಣ್ಣೆ ಹರಳುಗಟ್ಟಿತ್ತು

ಬಿಸಿತಾಗಿಸಿ ಪರಿವರ್ತಿಸಿದೆ ತುಪ್ಪಕ್ಕೆ
ಗಮಗಮಿಸುತ್ತ ತಯಾರಿತ್ತು ಭೋಜನಕ್ಕೆ
ರುಚಿ ಪರೀಕ್ಷಿಸಲು ಪಾಕಜ್ಞನಿಗೆ ವಾಕರಿಕೆ
ಅದಕ್ಕೆ ನಿಮ್ಮ ಮುಂದಿಟ್ಟೆ