ಅವಳ‌ ನೋಟ‌

ಅವಳ‌ ನೋಟ‌

ಚಿತ್ರ

ದೂರದಿಂದಲಿ ಹುರುಪಿನಲಿ  
ಬಂದರೆಲ್ಲಿಗೋ ಜಾರಿದವು
ಮಾತನಾಡಿಸಲು 
ಥಟ್ಟನೇ ಬಿರಿದವು  

ಅಪ್ಪಿಕೊಂಡರೆ 
ಕೆಂಪಾದುವು
ಉಡುಗೆಯನು  ಹಿಡಿಯೆ 
ಸಿಟ್ಟಿನಲಿ ಹುಬ್ಬ ಗಂಟಿಕ್ಕಿದವು

ಪಾದವೇ ಗತಿಯೆನುತ
ಅವಳಡಿಗೆ ಬೀಳಲು 
ಚಣ ಮಾತ್ರದಲಿ
ನೀರು ತುಂಬಿದವು

ಹಾ! ಏನಚ್ಚರಿಯೊ! 
ಇವಳ ಕಣ್ಣುಗಳು 
ನಲ್ಲನ ತಪ್ಪಿಗೆ  ತಕ್ಕ 
ಚತುರತೆಯ ತಾಳಿಹವು!

ಸಂಸ್ಕೃತ ಮೂಲ (ಅಮರುಕನ ಅಮರುಶತಕದಿಂದ - ೪೪/೪೯):

ದೂರಾದುತ್ಸುಕಮಾಗತೇ ವಿವಲಿತಂ ಸಂಭಾಷಿಣಿ ಸ್ಫಾರಿತಂ
ಸಂಶ್ಲಿಷ್ಯತ್ಯರುಣಂ  ಗೃಹೀತವಸನೇ  ಕೋಪಾಂಚಿತ ಭ್ರೂತಲಂ
ಮಾನಿನ್ಯಾಶ್ಚರಣಾನತಿವ್ಯತಿಕರೇ ಬಾಷ್ಪಾಂಬು ಪೂರ್ಣೇಕ್ಷಣಂ
ಚಕ್ಷುರ್ಜಾತಮಹೋ ಪ್ರಪಂಚ ಚತುರಂ ಜಾತಾಗಸಿ ಪ್ರೇಯಸಿ

दूरादुत्सुकमागते विवलितं सम्भाषिणि स्फारितं
संश्लिष्यत्यरुणं गृहीतवसने किञ्चिन् नतभ्रूलतम् ।
मानिन्याश्चरणानतिव्यतिकरे बाष्पाम्बुपूर्णेक्षणं
चक्षुर्जातमहो प्रपञ्चचतुरं जातागसि प्रेयसि ॥४४॥(४९)

 -ಹಂಸಾನಂದಿ

ಕೊ: ಅನುವಾದದಲ್ಲಿ ಸಲಹೆ ನೀಡಿದ ಮತ್ತೆ ಕೆಲವು ಸಂದೇಹಗಳನ್ನು ನಿವಾರಿಸಿದಾ ಮಿತ್ರ ಜೀವೆಂ ಮತ್ತು ಗಣೇಶ ಕೊಪ್ಪಲತೋಟ ಅವರಿಗೆ ನಾನು ಆಭಾರಿ

ಚಿತ್ರ ಕೃಪೆ: ಕಕುಭ ರಾಗಿಣೀ, ರಾಗಮಾಲಾ ವರ್ಣಚಿತ್ರ; ಬ್ರೂಕ್ಲಿನ್ ಮ್ಯೂಸಿಯಂ ಸಂಗ್ರಹದಿಂದ

Rating
No votes yet