ಕಂಡು ಕಾಣದಂತಿಹನು (ಶ್ರೀ ನರಸಿಂಹ 83)
ಸಕ್ಕರೆಯ ಕಣಗಳ ಕರಗಿಸಿಟ್ಟಿಹ ನೀರ ನೋಡಲು ನೀನು
ಕರಗಿರುವ ಸಕ್ಕರೆಯೂ ನಿನ್ನ ಕಣ್ಣುಗಳಿಗೆ ಕಾಣುವುದೇನು
ಕಾಣದದು ಎಂದು ಅದರಿರುವನೆ ನೀ ಸುಳ್ಳೆನ್ನಲಾಗುವುದೆ
ರುಚಿಯ ನೋಡಲದರಿರುವು ನಿನ್ನನುಭವಕೆ ಬಾರದಿಹುದೆ
ಪರಮಾತ್ಮನಿರುವಂತೆ ತುಂಬಿಹುದು ಸೃಷ್ಟಿಯೊಳು ಎಲ್ಲಡೆ
ಕಾಣಲಾಗದು ಅವನಿರುವ ಹೊರಗಣ್ಣಿನಿಂದಲಿ ನೀ ನೋಡೆ
ಕಾಣನವನೆನುತ ಸುಳ್ಳೆಂದುಕೊಳ್ಳದಿರು ಅವನಿರುವಿಕೆಯ
ನೋಡಬಹುದವನಿರುವ ನೀ ಸವಿಯೆ ಭಕ್ತಿರಸದ ರುಚಿಯ
ಅವನಿರುವನೆ ಸಂಶಯದಿ ನೋಡುತ ನೀ ಕುತರ್ಕಗಳ ಮಾಡದಿರು
ಕೊಡುವ ತನ್ನಿರುವಿನರಿವ ಶ್ರೀನರಸಿಂಹ ಸಾಧನೆಯ ಹಾದಿಯಲಿರು
Rating
Comments
ಉ: ಕಂಡು ಕಾಣದಂತಿಹನು (ಶ್ರೀ ನರಸಿಂಹ 83)
ಅನುಭವವೇ ಗುರು! ಧನ್ಯವಾದ, ಸತೀಶರೇ.
In reply to ಉ: ಕಂಡು ಕಾಣದಂತಿಹನು (ಶ್ರೀ ನರಸಿಂಹ 83) by kavinagaraj
ಉ: ಕಂಡು ಕಾಣದಂತಿಹನು (ಶ್ರೀ ನರಸಿಂಹ 83)
ಧನ್ಯವಾದಗಳು ನಾಗರಾಜ್ ರವರೇ .......ಸತೀಶ್