ಮಳೆ ಸುರಿಯಲಿ
ಭುಗಿದೇಳುತ ಬಿಸಿ ಹೊಗೆಯುಗುಳುತ
ಪ್ರತಿಫಲಿಸುತ ಕಣ್ಕೊರೆಯುತ
ಚಲಿಸುವ ವಾಹನ ವೇಗದಿ ಚೀರುತ
ನೆತ್ತಿಯು ಸುಡುತ ರವಿ ಮೇಲೇರುತ
ಅರಚುತ ಪಾದವ ಕಾದಿಹ ರಸ್ತೆ
ಪಟ್ಟಣ ಪರ್ವತ ಪರಿತಪಿಸುತ
ಬಿರು ಬಿಸಿಲಿಗೆ ಬೇಯುತ ಬೇಡಿವೆ
ಇಳೆ ಕಾದಿದೆ ಹೊಳೆ ಕೇಳಿದೆ ಮಳೆ
ದಣಿದಿದೆ ದರಣಿ ಸುರಿಯಲಿ ಮಳೆಹನಿ
ಬಾಯಾರಿದೆ ಭುವನದಿ ಜೀವನ
ಸುರಿಯಲಿ ಮಳೆಹನಿ ಸುರಿಯಲಿ ಮಳೆಹನಿ
ಹಸಿರುಸಿರಲಿ ಚಿಗುರಲಿ ಮರಗಿಡ
ಇಳೆ ತಣಿಯಲಿ ಮನ ತಣಿಯಲಿ
ತನು ತಣಿಯಲಿ ಮೀಯಲಿ ತನು ಮನ ಮಳೆಯಲಿ
ಮಳೆ ಸುರಿಯಲಿ ಮಳೆ ಸುರಿಯಲಿ.
Rating
Comments
ಉ: ಮಳೆ ಸುರಿಯಲಿ
>>..ಇಳೆ ತಣಿಯಲಿ ಮನ ತಣಿಯಲಿ
ತನು ತಣಿಯಲಿ ಮೀಯಲಿ ತನು ಮನ ಮಳೆಯಲಿ...
ವಿದ್ಯಾಕುಮಾರ್ ಅವರೆ, ನಿಮ್ಮ ಬೇಡಿಕೆ ತಲುಪಿ ಈ ಸಂಜೆ ಮಳೆ ನಮ್ಮಲ್ಲಿ ಚೆನ್ನಾಗಿ ಸುರಿಯಿತು.