ಬಾಗಿ ನಿಂತ ಲತೆಗೆ.

ಬಾಗಿ ನಿಂತ ಲತೆಗೆ.

ತರುವನರಸಿ ಬಳಲಿತೇನು
ಬಾಗಿನಿಂತ ಲತೆಯು
ಮನವತುಂಬಿ ನಿಂತಿತೇನು
ಮರೆಯಲಾಗದ ವ್ಯಥೆಯು

ಏಕೆ ಚಿಂತೆ ? ಇರುವುದಂತೆ
ನಮ್ಮ ಪ್ರೇಮ ಕಾವಲು
ಬೇಕು-ಬೇಡ, ಬಿಸಿಲು-ಮೋಡ
ಎಲ್ಲ ಅದರ ಮೀಸಲು

ಪ್ರೇಮಗಂಗೆ ಹರಿಯುವಲ್ಲಿ
ಬರುವುದೆಲ್ಲ ಬೆತ್ತಲು
ಪ್ರೇಮದಿವ್ಯ ಬೆಳಗುವಲ್ಲಿ
ಇರುವುದೇನು ಕತ್ತಲು

ಹೇಮಗಂಗೆ ಬೆರೆಯುವಲ್ಲಿ
ನಗೆಯ ತುಂಬು ರಂಗವಲ್ಲಿ
ನನ್ನ ಮನದ ಭಿತ್ತಿಯಲ್ಲಿ
ಎಂದೆಂದಿಗೂ ಅರಳುತಿರಲಿ.

ಮೊದ್ಮಣಿ

Rating
No votes yet

Comments

Submitted by kavinagaraj Thu, 04/10/2014 - 16:34

ಅಭಯ ನೀಡಿ ಹರಸಿದಲ್ಲಿ
ಚಿತ್ತಾರವಲ್ಲಿ ಮನದಾಗಸದಲ್ಲಿ!!
:)
ಸುಂದರಭಾವ ಮೊದ್ಮಣಿಯವರೇ.