ನೋಟ

ನೋಟ

ಚಿತ್ರ

ಬಳಲಿ ಸೊರಗುತ ಒಲವ ಪಸೆಯಲಿ ಅರಳಿ ಮುಚ್ಚುವ ಮೊಗ್ಗಿನಂ-

ತೊಮ್ಮೆ ನೋಡುತ ಮತ್ತೆ ನಾಚುತ ಬದಿಗೆ ಹೊರಳಿಸಿ ದಿಟ್ಟಿಯ 

ಎದೆಯೊಳಿರುತಿಹ ಒಲವಿನೊಸಗೆಯ ನೋಟದಲೆ ಹೊರಸೂಸುತ

ಹೇಳೆ  ಮುಗುದೆಯೆ ಯಾವ ಚೆಲುವನ ನಿನ್ನ ಕಂಗಳು ಕಂಡವೇ?

ಸಂಸ್ಕೃತ ಮೂಲ (ಅಮರುಕನ ಅಮರು ಶತಕ - ೪):

ಅಲಸವಲಿತೈಃ ಪ್ರೇಮಾರ್ದ್ರಾದ್ರೈರ್ಮುಹುರ್ಮುಕುಲೀಕೃತೈಃ
ಕ್ಷಣಮಭಿಮುಖೈರ್ಲಜ್ಜಾಲೋಲೈರ್ನಿಮೇಷಪರಾಙ್ಮುಖೈಃ
ಹೃದಯನಿಹಿತಂ ಭಾವಾಕೂತಂ ವಮದ್ಭಿರಿವೇಕ್ಷಣೈಃ
ಕಥಯ ಸುಕೃತೀ ಕೋಯಂ ಮುಗ್ಧೇ ತ್ವಯಾದ್ಯ ವಿಲೋಕ್ಯತೇ

अलसवलितैः प्रेमार्द्रार्द्रैर्मुहुर्मुकुलीकृतैः
क्षणमभिमुखैर्लज्जालोलैर्निमेषपराङ्मुखैः ।
हृदयनिहितं भावाकूतं वमद्भिरिवेक्षणैः
कथय सुकृती कोऽयं मुग्धे त्वयाद्य विलोक्यते ॥४॥

-ಹಂಸಾನಂದಿ

ಚಿತ್ರ: ಬ್ರಿಟಿಷ್ ಮ್ಯೂಸಿಯಂ ಸಂಗ್ರಹದಲ್ಲಿ ಇರುವ  ರಾಗ ಮಧುಮಾಧವಿಯ ರಾಗಮಾಲಾ ಚಿತ್ರ  

Rating
No votes yet