'ದಸ್ತಕ' - ಗುಲ್ಜಾರ ಸಾಹಬ್ ಕನ್ನಡಕ್ಕೆ : ಲಕ್ಷ್ಮೀಕಾಂತ ಇಟ್ನಾಳ

'ದಸ್ತಕ' - ಗುಲ್ಜಾರ ಸಾಹಬ್ ಕನ್ನಡಕ್ಕೆ : ಲಕ್ಷ್ಮೀಕಾಂತ ಇಟ್ನಾಳ

ಚಿತ್ರ

ಗುಲ್ಜಾರ ಸಾಹಬ್ ಬಧಾಯೀ ಹೋ! ದಾದಾ ಸಾಹೇಬ ಫಾಲ್ಕೇ ಅವಾರ್ಡಗೆ ಅಭಿನಂದನೆಗಳು. ನೋಬೆಲ್ ಸಾಹಿತ್ಯ ಪ್ರಶಸ್ತಿ ದೂರವೇನಿಲ್ಲ! ಅದೂ ಕೂಡ ತಮ್ಮನ್ನು ಹುಡುಕಿ ಬಂದು ಕೊರಳು ಅಲಂಕರಿಸಲಿ. 'ಗುಲ್ಜಾರರ ಹಾಡು ಕೇಳುತ್ತಿದ್ದರೆ, ಸ್ವರ್ಗವು ಕಾಲ ಬುಡದಲ್ಲಿರುತ್ತದಂತೆ!', ಈ ಸಂದರ್ಭದಲ್ಲಿ ಗುಲ್ಜಾರರ 'ದಸ್ತಕ'ಗೀತೆಯ ಅನುವಾದವನ್ನು ಗುಲ್ಜಾರರಿಗೆ ಸಮರ್ಪಿಸುತ್ತ, ತಮ್ಮೊಂದಿಗೆ ಹಂಚಿಕೊಳ್ಳುವ ಸುಸಂದರ್ಭವಿದು

. 'ದಸ್ತಕ' - ಗುಲ್ಜಾರ ಸಾಹಬ್

ಸುಬಹ ಸುಬಹ ಇಕ್ ಖ್ವಾಬ ಕಿ ದಸ್ತಕ ಪರ ದರವಾಜಾ ಖೋಲಾ, ದೇಖಾ

ಸರಹದ್ ಕೆ ಉಸ್ ಪಾರ ಸೆ ಕುಛ್ ಮೆಹಮಾನ್ ಆಯೆ ಹೈಂ

ಆಂಖೋಂ ಸೆ ಮಾನೂಸ್ ಥೆ ಸಾರೆ

ಚೆಹರೆ ಸಾರೇ ಸುನೆ ಸುನಾಯೆ

ಪಾಂವ್ ಧೋಯೆ, ಹಾಥ ಧುಲಾಯೆ

ಆಂಗನ್ ಮೇಂ ಆಸನ ಲಗವಾಯೆ…

ಔರ ತನ್ನೂರ ಪೆ ಮಕ್ಕಿ ಕೆ ಕುಛ್ ಮೋಟೆ ಮೋಟೆ ರೊಟಿ ಪಕಾಯೆ

ಪೋಟ್ಲೀ ಮೇಂ ಮೆಹಮಾನ್ ಮೇರೆ

ಪಿಛಲೆ ಸಾಲೋಂ ಕಿ ಫಾಸ್ಲೋಂ ಕಾ ಗೂಡ್ ಲಾಯೆ ಥೆ

ಆಂಖ ಖುಲಿ ತೊ ದೇಖಾ ಘರ ಮೇಂ ಕೋಯಿ ನಹೀಂ ಥಾ

ಹಾಥ ಲಗಾಕರ ದೇಖಾ ತೊ ತನ್ನೂರ ಅಭಿ ತಕ ಬುಝಾ ನಹೀಂ ಥಾ

ಔರ ಹೋಟೋಂ ಪೆ ಮೀಠೆ ಗೂಡ್ ಕಾ ಜಾಯಕಾ ಅಬ್ ತಕ್ ಚಿಪಕ್ ರಹಾ ಥಾ

ಖ್ವಾಬ್ ಥಾ ಶಾಯದ್! ಖ್ವಾಬ್ ಹೀ ಹೋಗಾ!!

ಸರಹದ್ ಪರ್ ಕಲ್ ರಾತ, ಸುನಾ ಹೈ,

ಚಲೀ ಥೀ ಗೋಲಿ ಸರಹದ್ ಪರ್ ಕಲ ರಾತ್,

ಸುನಾ ಹೈ ಕುಛ್ ಖ್ವಾಬೋಂ ಕಾ ಖೂನ್ ಹುವಾ ಹೈ

'ಚಿಲಕದ ಸದ್ದು' ಅನುವಾದ : ಲಕ್ಷ್ಮೀಕಾಂತ ಇಟ್ನಾಳ

ಕನಸೊಂದರ ಚಿಲಕದ ಸದ್ದು,

ಮುಂಜಾನೆಯ ಚುಮು ಚುಮು ಬೆಳಗಲ್ಲಿ,

ನೋಡಲು, ನಮ್ಮ ಹಾಗೆಯೇ ಇದ್ದರು

ಸರಹದ್ದಿನಾಚೆಯ, ಕೆಲ ಅತಿಥಿಗಳು, ಬಾಗಿಲಲ್ಲಿ,

ಎಲ್ಲೋ ಕೇಳಿದ ಹಾಗಿತ್ತು, ಈ ಚೆಹರೆಗಳ ಬಗ್ಗೆ

ಬರಮಾಡಿ, ಕೈಕಾಲು ತೊಳೆಯಿಸಿ,

ಪಡಸಾಲೆಯಲ್ಲಿ ಕೂಡಿಸಿದೆ ಹಾಸಿ,

ತಂದೂರಲ್ಲಿ ಮೆಕ್ಕೆ ಜೋಳದ ದಪ್ಪ ರೊಟ್ಟಿ ಬೇಯಿಸಿದೆ,

ಪೊಟ್ಟಣಗಳಲ್ಲಿ, ಈ ಅತಿಥಿಗಳು

ವರ್ಷಾಂತರಗಳ ನೆನಪಿನ, ಬೆಲ್ಲ ತಂದಿದ್ದರು!

ಕಣ್ದೆರೆದರೆ, ಮನೆಯಲ್ಲಿ ಯಾರ ಸುಳಿವೂ ಇಲ್ಲ!

ಮುಟ್ಟಿ ನೋಡಿದರೆ, ಅರೆ! ತಂದೂರ ಒಲೆ ಇನ್ನೂ ಆರಿಲ್ಲ,

ಮತ್ತೆ, ಬೆಲ್ಲದಂಟು, ಇನ್ನೂ ಅಂಟಿದೆ ತುಟಿಗಳಲ್ಲಿ  ,!

ಕನಸೋ, ಬಹುಶ:! ಕನಸೇ ಇರಬಹುದು!

ಕೇಳಿದ್ದೆ, ಸರಹದ್ದಿನಲ್ಲಿ ನಿನ್ನೆ ರಾತ್ರಿ,

ಗುಂಡುಗಳು ಹಾರಿದ್ದು,

ಹೌದು, ಕೇಳಿದ ಹಾಗಿತ್ತು,

ಗಡಿಯಲ್ಲಿ, ರಾತ್ರಿ,

ಕೆಲ ಕನಸುಗಳ ಹತ್ಯೆಯಾಗಿದ್ದು!

 

(ಚಿತ್ರ ಕೃಪೆ: ಅಂತರ್ಜಾಲ)

 

Rating
No votes yet

Comments

ಹಿರಿಯರಾದ ಕವಿ ನಾಗರಾಜ್ ಸರ್ ರವರೇ, ಏಕ್ ಹೀ ಲಬ್ಜ್ ಆಪಕಾ, ಕೆಹತಾ ಹೈ ಬಹುತ್. ಹೇಳಬೇಕಾದುದನ್ನು ಹೇಳಿದೆ. ಧನ್ಯವಾದ ಸರ್.

Submitted by H A Patil Mon, 04/28/2014 - 10:05

ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
ಕಣ್ಣಿನ ಶಸ್ತ್ರಕ್ರಿಯೆಯ ಕಾರಣ ಸುಮಾರು ಒಂದೂವರೆ ತಿಂಗಳ ನಂತರ ಇಂದು ಸಂಪದಕ್ಕೆ ಮರಳಿದಾಗ ಕಂಡದ್ದು ತಾವು ಬರೆದ ಕವಿ ಗುಲ್ಜಾರರ 'ದಸ್ತಕ್'' ಕವನದ ಅನುವಾದ, ವರ್ತಮಾನದ ನಮ್ಮ ದೇಶದ ಭಾವಪೂರ್ಣ ಕವಿ ಗುಲ್ಜಾರರಿಗೆ ಸಂದ ದಾದಾ ಸಾಹೇಬ ಫಾಲಕೆ ಪ್ರಶಸ್ತಿ, ನಮ್ಮ ದೇಶದ ವರ್ತಮಾನದ ಸ್ಥಿತಿಯನ್ನು ಬಿಂಬಿಸುವ ಅವರ ಮೂಲ ರಚನೆ 'ದಸ್ತಕ್'', ಆ ಕವನದ ತಮ್ಮ ಸಮರ್ಥ ಅನುವಾದ ಮನ ತಟ್ಟಿತು. <<<< ಕೇಳಿದ್ದೆ ಸರಹದ್ದಿನಲ್ಲಿ ನಿನ್ನೆ ರಾತ್ರಿ.......ರಾತ್ರಿ ಕೆಲ ಕನಸುಗಳ ಹತ್ಯೆಯಾಗಿದ್ದು>>>>. ಬಹಳ ಕಾಡಿದ ಸಾಲುಗಳು. ಗುಲ್ಜಾರ ಇಂದೂ ಮುಂದೂ ಎಂದಿಗೂ ಸಲ್ಲುವ ಕವಿ. ತಾವು ಸಂಪದಕ್ಕೆ ಮರಳಿದ್ದು ಬಹಳ ಸಂತಸ ತಂದಿದೆ. ಧನ್ಯವಾದಗಳು.

ಪ್ರಿಯ ಹೆಚ್ ಎ ಪಾಟೀಲ ಸರ್ ಗೆ ವಂದನೆಗಳು. ತಾವು ಸಂಪದದಲ್ಲಿ ಕಾಣುತ್ತಿಲ್ಲದುದು ಬಹು ಚಿಂತನೆಗೆ ಒಳಪಡಿಸಿತ್ತು. ಮನೆಯ ಹಿರಿಯರೊಬ್ಬರು ಮನೆಯ ಮುಂದೆ ಮಕ್ಕಳನ್ನು ಆಡಿಸುತ್ತ ಕೂಡುವ ಪದ್ಧತಿ ನಮ್ಮ ಬಯಲು ಸೀಮೆಗಳಲ್ಲಿ ಕಾಣಸಿಗುತ್ತದೆ. ಅವರು ಆ ಮನೆಯ ಸಿಗ್ನೇಚರ್ ರೂಪ. ಅವರು ಕ್ಷಣ ಅಲ್ಲಿ ಕಾಣದಿದ್ದರೂ ಎಲ್ಲೋ ಏನೋ ಅರಿಯದವರಿಗೂ ಅವರು ಮಿಸ್ ಆಗಿ ಬಿಡುತ್ತಾರೆ. ಕೆಲವರು ಕೇಳಿಯೇ ಬಿಡುತ್ತಾರೆ, ಇಲ್ಲೊಬ್ಬರು ಹಿರಿಯರು ಇರುತ್ತಿದ್ದರಲ್ಲ! ? ಅಲ್ಲಿ ಇದ್ದ ಒಬ್ಬಿಬ್ಬರಾದರೂ, ಕೂಡಲೇ, 'ಹೌದು, ನಾನೂ ಅದನ್ನೇ ಕೇಳಬೇಕೆಂದಿದ್ದೆ' ಎನ್ನುವರು.ಅಷ್ಟೊಂದು ಪರಿಚಿತ ಮುಖ, ಧ್ವನಿ ನಿಮ್ಮದು ಸಂಪದದಲ್ಲಿ, ನನಗೂ ಹಾಗೇ ಅನಿಸಿತ್ತು, ಒಂದೊಮ್ಮೆ ನನ್ನ ಹಾಜರಿ ಕಡಿಮೆ ಇದ್ದುದರಿಂದ ಕಾಣಿತ್ತಿಲ್ಲದಿರಬಹುದೆಂದು ಅನಿಸಿತ್ತು. ಆದರು ಎಲ್ಲೋ ಯಾಕೋ ಏನೋ, ಸಂಪದದಲ್ಲಿ ನಾನು ಬಂದಾಗಲೆಲ್ಲ ಕಾಣುತ್ತಿದ್ದ ನಿಮ್ಮನ್ನು ನಾನು ಬಹಳ ಮಿಸ್ ಮಾಡಿಕೊಂಡಿದ್ದೆ. ಅಂದಹಾಗೆ ಕೆಲಸದ ಒತ್ತಡದಲ್ಲಿ, ಚುನಾವಣೆಯ ಕರ್ತವ್ಯದಲ್ಲಿ ನಿರತನಾದುದರಿಂದ, ಒಮ್ಮೊಮ್ಮೆ ಸಮಯಾವಭಾವದಿಂದ ನನ್ನದು ಆಗಾಗ ಬಂದು ಹೋಗುವ ಮಟ್ಟಕ್ಕೆ ಎಂಬಂತಾಗಿದೆ, ಸರ್. ವೃತ್ತಿ, ಪ್ರವೃತ್ತಿಗಳು ವಿರುದ್ಧ ದಿಕ್ಕಿಗೆ ಜಗ್ಗುವ ಬದುಕಿನಲ್ಲಿ, ಸಾಹಿತ್ಯದ ರಸ ಹುಡುಕುತ್ತದೆ ಮನ, ಆದರೆ ವೃತ್ತಿಗೆ ಅದು ಒಗ್ಗದು, ಇಂತಹ ದ್ವಂದ್ವಗಳ ಬದುಕು ಹೀಗೆಯೇ ನಡೆಯುತ್ತಿದೆ. ಅಂದಹಾಗೆ 'ಕಣ್ಣು' ಎಂದಿರಿ. ಈಗ ಹೇಗಿದೆ. ಎಲ್ಲ ಸೌಖ್ಯವೋ.ಸಿಗುತ್ತಲಿರೋಣ ಸರ್. ಧನ್ಯವಾದಗಳು ಮತ್ತೊಮ್ಮೆ ..........