ಮುಂಬೈ ಆಕಾಶವಾಣಿಯ ಏಪ್ರಿಲ್, 26 ರ, ಕನ್ನಡ ಕಾರ್ಯಕ್ರಮ, ಸುಂದರವಾಗಿ ಮೂಡಿಬಂತು !

ಮುಂಬೈ ಆಕಾಶವಾಣಿಯ ಏಪ್ರಿಲ್, 26 ರ, ಕನ್ನಡ ಕಾರ್ಯಕ್ರಮ, ಸುಂದರವಾಗಿ ಮೂಡಿಬಂತು !

ಮುಂಬೈ ಆಕಾಶವಾಣಿಯ ಎಪ್ರಿಲ್, ೨೬ ನೇ ಶನಿವಾರದಂದು ಪ್ರಸಾರವಾದ ಕಾರ್ಯಕ್ರಮದ ಬಗ್ಗೆ ಒಂದೆರಡು ಮಾತುಗಳು.
ನಾವು ಸುಮಾರು ವರ್ಷಗಳಿಂದ ಶ್ರೀಮತಿ ಕುಂದಾ ರೇಗೆ, ಬಿ. ಎ. ಸನದಿಕಾಲದಿಂದಲೂ ಕೇಳುತ್ತಾ ಬಂದಿದ್ದೇವೆ. ಕಿವಿಗೆ ಕೇಳಿಸದಷ್ಟು ಕರಕರ ಶಬ್ದಗಳ ಮಧ್ಯೆ ಕನ್ನಡ ಪ್ರೇಮಕ್ಕೆ ಒಂದು ನಿದರ್ಶನವೆಂಬಂತೆ ಇಂದಿಗೂ ಅದೇ ಮಟ್ಟದಲ್ಲಿ ಅದು ಬಿತ್ತರಗೊಳ್ಳುತ್ತಿದೆ. ನಾವು ಕೇಳುತ್ತಲೂ ಇದ್ದೇವೆ.

೨೦೧೩ ರ ಫೆಬ್ರವರಿ ತಿಂಗಳಿನ ೧೩ ರಂದು ಜರುಗಿದ ಕವಿಗೋಷ್ಟಿಯ ಮೊದಲಭಾಗವನ್ನು ಆಲಿಸಿದೆವು. ಕೇವಲ ೩೦ ನಿಮಿಷಗಳಲ್ಲಿ ಪ್ರಸ್ತುತಿಯಲ್ಲಿ ಹಿತಮಿತವಾದ ವಿವರಣೆಗಳೊಂದಿಗೆ ಅಹಲ್ಯಾ ಬಲ್ಲಾಳ್ ಅಭಿನಂದನೀಯರು. ಮೂಡಿಬಂದ ಸುಂದರ ಕಾರ್ಯಕ್ರಮಕ್ಕೆ ನಮ್ಮ ಅಭಿನಂದನೆಗಳು. ಆಗಾಗ ಕಿವಿಗೆ ಕೇಳಿಸುವಷ್ಟು ಬರುತ್ತಿದ್ದ ಪುಟ್ಟ ಕಾರ್ಯಕ್ರಮಗಳು ರಾಜ್ಕುಮಾರ್ ರವರ ಗೀತೆಗಳೊಂದಿಗೆ ಹೇಗೋ ಮುಕಾಯವಾಗುತ್ತಿದ್ದ ಕಾರ್ಯಕ್ರಮ ದಿಢೀರನೆ ಬಣ್ಣ ಬದಲಾಯಿಸಿದ್ದು ನಮಗೆ ಮುದಕೊಟ್ಟಿದೆ.
ಮೊಟ್ಟ ಮೊದಲಯನೆದಾಗಿ, ಹಿರಿಯ ಕವಿ, ಶಿವಮುಂಜೆ ಪರಾರಿಯವರ ಕವಿತೆ ಮುದಕೊಟ್ಟಿತು. ಎರಡನೆಯ ಕವಿ, ಬಿ. ಎಸ್. ಕುರ್ಕಾಲ್ ರ,

೧. 'ಸಿರಿಮೊಗದಲ್ಲಿ ಎಲ್ಲ ದೇವರಕಂಡೆ, ಸನ್ನಿಧಾನವು ನಿನ್ನ ವೈಕುಂಠ ಎನಗೆ,'

೨. ಪರಮಿಗಳು (ಪಾತರಗಿತ್ತಿಗಳ ಬಗ್ಗೆ) 'ಅಂಬರ ಮಾರ್ಗದಿ ಅರಸುತ ಬಂದಿಹ'

೩. 'ನನ್ನೆದೆ ಅರಳುವುದು, ಕುಲುಕುಲು ನಗುವ ಮುಗ್ಧ ನಗುವ ಕಂಡು ನನ್ನೆದೆ ಅರಳುವುದು'.

೪. 'ಬೀಳ ಬೇಡ ಜೇಡರ ಬಲೆಗೆ ಮಲಲ ಓ ಮಲಾಲ'

ಎಂದು ಎಚ್ಚರಿಸುವ ಮಹತ್ವದ ಗೀತೆ, ತಲೆಬಾನ್ ಬಂಡು ಕೋರರ ವಿರುದ್ಧ ತನ್ನ ಪ್ರಾಣವನ್ನೇ ಒತ್ತೆಯಿಡುವ ಪರಿಸ್ಥಿತಿ ಬಂದಾಗ ಅಲ್ಲಾನ ದಯದಿಂದ, ಸಹೃದಯದರ ಆಶೀರ್ವಾದದಿಂದ, ಬದುಕುಳಿದ ಹದಿಹರೆಯದ ಹುಡುಗಿ, ಮಲಾಲಗೆ ಹಿತವಚನ ಕೊಡುವ ಕವಿ, ಕೆಟ್ಟ ವ್ಯವಸ್ಥೆಯ ವಿರುದ್ಧ ನಡೆಸಿದ ದಿಟ್ಟ ಹೋರಾಟವನ್ನು ನಿಲ್ಲಿಸದಿರು, ಎಂದು ಎಚ್ಚರಿಸುತ್ತಾರೆ. ತಲೆಬಾನಿಗರ ಬೆಣ್ಣೆಯ ಮಾತಿಗೆ ಮರುಳಾಗದಿರು, ಮುದ್ದು ಮಲಲ,’ ಎಂದು ಎಚ್ಚರಿಸುವ ಕವಿವಾಣಿ ನಿಜಕ್ಕೂ ಶ್ಲಾಘನೀಯ !

ಕಾರ್ಯಕ್ರಮದ ನಿರೂಪಕಿ, ಅಹಲ್ಯಾಬಲ್ಲಾಳ್ ಈ ಮಧ್ಯೆ , ’ಬೇಸರವೇ ಬೇಡ ಈ ಮನಸ್ಸಿಗೆ’, ’ವ್ಯವಸ್ಥೆಯ ವಿರುದ್ಧ ಗುಲಾಮರು ನಾವು’, ಎಂದು ವ್ಯಂಗ್ಯವಾಗಿ ಹೇಳಿ ಇಂದಿನ ವ್ಯವಸ್ಥೆಯ ಕರಾಳರೂಪವನ್ನು ನಮ್ಮ ಮುಂದೆ ತೆರೆದಿಟ್ಟ ರಾಷ್ಟ್ರ ಕವಿ ಜಿ. ಎಸ್.ಎಸ್. ರವರನ್ನು ಉದಾಹರಿಸಿದ ಮಾತುಗಳು ಅರ್ಥಗರ್ಭಿತವಾಗಿತ್ತು. ಪೂರ್ಣಿಮಾಶೆಟ್ಟಿಯವರು ತಮ್ಮ ಹೃದಯಸ್ಪರ್ಷಿ, 'ಹೃದಯ ವೀಣೆ' ಎಂಬ ಕವಿತೆಯನ್ನು ಓದಿದರು.

ಒಟ್ಟಿನಲ್ಲಿ ಸುಶೀಲ ದೇವಾಡಿಗರ ಈವಾರದ ಕಂತಿನ ಪ್ರಸ್ತುತಿ ಚೆನ್ನಾಗಿತ್ತು.

Comments

Submitted by venkatesh Sun, 04/27/2014 - 19:54

'೨೦೧೩ ರ ಫೆಬ್ರವರಿ ತಿಂಗಳಿನ ೧೩ ರಂದು ಜರುಗಿದ ಕವಿಗೋಷ್ಟಿಯ ಎರಡನೆಯ ಭಾಗ'ವನ್ನು ಮೇ ತಿಂಗಳ ಮೊದಲ ಶನಿವಾರದ ದಿನ ಮಧ್ಯಾನ್ಹ 12-30 ಕ್ಕೆ ಆಲಿಸಿ.