ಚಾಂದನಿ ಚಮಕ್....`ಖೈದಿ'ಯಲ್ಲಿ ವಾಪಾಸ !

ಚಾಂದನಿ ಚಮಕ್....`ಖೈದಿ'ಯಲ್ಲಿ ವಾಪಾಸ !

ಚಾಂದಿನಿ ಚಮಕ್...
ಖೈದಿಯಲ್ಲಿ ವಾಪಾಸ ಆದಳು ಚಾಂದಿನಿ
ಸೈಕೋ ಹೀರೋ ಧನುಷ್ ಜತೆ ಚಾಂದಿನಿ
ಗುರುದತ್ ನಿರ್ದೇಶನದ ಚಿತ್ರ ಖೈದಿ
ತಾಳೆ ಹೂ ಎದೆಯಿಂದ ಹಾಡು ರಿಮಿಕ್ಸ್
ಇದೇ ಮೇ-9 ಕ್ಕೆ ಚಿತ್ರಕ್ಕೆ ಮುಹೂರ್ತ

----
ಕನ್ನಡದಲ್ಲಿ ಬಂದು ಹೋದ ನಟಿಯರ ಪೈಕಿ ಚಾಂದಿನಿ ಒಬ್ಬರು. ನೇರವಾಗಿ ಹೀಗೆ ಚಾಂದಿನಿ ಅಂದ್ರೆ ಕಂಡಿತ ಯಾರಿಗೂ ಹೊಳೆಯೋದಿಲ್ಲ. ಉಪೇಂದ್ರ ನಿರ್ದೇಶನದ ‘ಎ’ ಚಿತ್ರದ ಚಾಂದಿನಿ ಅಂದ್ರೆ ತಟ್ಟನೆ ಕಣ್ಮುಂದೆ ಬರುತ್ತದೆ, ಆ ಸುಂದರಿಯ ಮುಖ. ಹೌದು ಅದೇ ಚಾಂದಿನಿ ಮತ್ತೆ ಬಣ್ಣ ಹಚ್ಚಿದ್ದಾರೆ.

ಚಾಂದಿನಿ ಸದ್ಯ ಮುಂಬೈನಲ್ಲಿದ್ದಾರೆ. ಅಲ್ಲಿ ಜಾಹೀರಾತು ಜಗತ್ತಿನಲ್ಲಿ ಮುನ್ನಡೆಯುತ್ತಿದ್ದಾರೆ. ಆದರೆ, ಬಣ್ಣದ ನಂಟು ಹೋದ ಹಾಗೆ ಕಾಣೋದಿಲ್ಲ. ಕಾರಣ,ಚಾಂದಿನಿ ಈಗ ಮತ್ತೊಮ್ಮೆ ಕನ್ನಡ ಚಿತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ. ಇತ್ತೀಚಿಗೆ ನಡೆದ ಫೋಟೋ ಶೂಟ್​ನಲ್ಲಿ ಭಾಗಿಯಾಗಿ ಸಖತ್ ಫೋಜ್ ಕೂಡ ಕೊಟ್ಟಿದ್ದಾರೆ..

ಚಾಂದಿನಿ ಬರ್ತಿರೋ ಚಿತ್ರದ ಹೆಸ್ರು ಖೈದಿ. ಹಾಗಂತ, ವಿಷ್ಣುವರ್ಧನ್ ಅವರ 1984 ಖೈದಿ ಚಿತ್ರದ ರೀಮೆಕಾ ...? ಇದು
ಅಂತ ಕೇಳಬೇಡಿ. ಈ ಖೈದಿ ಬೇರೆ. ಆ ಖೈದಿನೇ ಬೇರೆ. ಈ ಚಿತ್ರದಲ್ಲಿ ಚಾಂದಿನಿ ಸ್ಲಂ ಕತೆಗೆ ಕಥಾನಾಯಕಿ. ಆದರೆ, ಚಾಂದಿನಿ ಡ್ರೀಮ್​ ಸಿಕ್ವೆನ್ಸ್​ ನಲ್ಲಿ ಸಖತ್ ಗ್ಲಾಮರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೇನೆ ಫೋಟೋ ಶೂಟ್​ ನಲ್ಲಿ ಗ್ಲಾಮರಸ್ ಆಗಿ ಫೋಸ್ ಕೊಟ್ಟಿದ್ದಾರೆ.

ಚಾಂದಿನಿಗೆ ಇಲ್ಲಿ ಸಾಥ್ ಕೊಟ್ಟಿರೋ ಹೀರೋ ಹೆಸ್ರು ಧನುಷ್. ಈಗಾಗಲೇ ಫೋಟೋ ನೋಡಿರೊ ನಿಮ್ಗೆ, ಈ ಮುಖವನ್ನ
ಎಲ್ಲೋ ನೋಡಿದ ಹಾಗೆ ಅನಿಸುತ್ತದೆ. ನಿಜ, ಸೈಕೋ ಚಿತ್ರದ ನಾಯಕ ಈ ಧನುಷ್. ಸೈಕೋ ಆದ್ಮೇಲೆ ಕಳೆದೆ ಹೋಗದ್ದ ಧನುಷ್, ಇತ್ತೀಚಿಗೆ ‘ನಮಸ್ತೆ ಇಂಡಿಯಾ’ ಅನ್ನೋ ಒನ್​ ಟೇಕ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅದು ಇನ್ನೂ ರಿಲೀಸ್ ಆಗಬೇಕಿದೆ.ಅದು ಬಿಟ್ರರೇ, ಖೈದಿ ಚಿತ್ರದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದಾರೆ...

ಖೈದಿ ಚಿತ್ರದ ಡೈರೆಕ್ಟರ್ ಯಾರು..? ಖೈದಿ ಚಿತ್ರಕ್ಕೆ ಗುರುದತ್ ನಿರ್ದೇಶಕರು. ಈ ಗುರುದತ್ ಬೇರೆ ಯಾರೂ ಅಲ್ಲ. ಸೈಕೋ ಚಿತ್ರದ ನಿರ್ಮಾಪಕರೆ. ಕತೆ-ಚಿತ್ರಕತೆ-ನಿರ್ದೇಶನ ಎಲ್ಲವೂ ಇವರದೇ. ಆದರೆ, ಚಿ.ಗುರುದತ್​ಗೂ ಈ ಗುರುದತ್ ಒಂದೇನಾ..? ಅಂತ ಕೇಳಬೇಡಿ. ಆ ಗುರುದತ್​ ಗೂ..ಈ ಗುರುದತ್​​ಗೂ ಎಲ್ಲೂ ಸಂಬಂಧವಿಲ್ಲ....

ಚಿತ್ರದ ಶೂಟಿಂಗ್ ಯಾವಾಗ..? ಚಿತ್ರದ ಶೂಟಿಂಗ್ ಇದೇ ಮೇ-9 ರಿಂದ ಶುರುವಾಗಲಿದೆ. ಈಗಾಗಲೇ, ಕತೆ-ಚಿತ್ರಕತೆ ಸಿದ್ಧಗೊಂಡಿದೆ.ಜೆಸ್ಟಿನ್ ಉದಯ್ ಚಿತ್ರಕ್ಕೆ ಸಂಗೀತ ನೀಡ್ತಾಯಿದ್ದಾರೆ.ಬಹುತೇಕ ಹಾಡುಗಳೂ ಈಗ ಸಿದ್ಧಗೊಂಡಿದೆ.

ತಾಳೆ ಹೂ ಎದೆಯಿಂದ ಹಾಡು ರಿಮಿಕ್ಸ್; 1984 ರಲ್ಲಿ ಬಂದ ಖೈದಿ ಚಿತ್ರದಲ್ಲಿ ‘ತಾಳೆ ಹೂ ಎದೆಯಿಂದ’ ಹಾಡು ಸಖತ್ ಫೇಮಸ್ ಆಗಿತ್ತು. ಚಿತ್ರವನ್ನೂ ಜನ ಅಷ್ಟೇ ಮೆಚ್ಚಿಕೊಂಡಿದ್ದಾರೆ. ಅದೇ ಒಂದು ನೇಮ್ ಅಂಡ್ ಫೇಮ್​ಈ ಚಿತ್ರದಲ್ಲಿ ಬಳಸಿಕೊಳ್ಳಲು ನಿರ್ದೇಶಕ ಗುರುದತ್, ಖೈದಿಯ ಅದೇ ತಾಳೆ ಹೂ ಎದೆಯಿಂದ ಹಾಡನ್ನ ರಿಮಿಕ್ಸ್ ಮಾಡಿದ್ದಾರೆ. ಇದು ಕೂಡ ಒಂದು ರೀತಿ ಅಟ್ರ್ಯಾಕ್ಟಿವ್ ಆಗಿದೆ. ಆದರೆ, ಇದರ ಹೊರತಾಗಿ ಚಿತ್ರಕ್ಕೆ ಚಾಂದಿನಿ ಸೆಂಟರ್​ ಆಫ್ ಅಟ್ರ್ಯಾಕ್ಷನ್...

-ರೇವನ್ ಪಿ.ಜೇವೂರ್​​