ಮತ್ತೆ ಬರುವೇ ನಾ,,,,,ಇಂದು ಸತ್ತು!

ಮತ್ತೆ ಬರುವೇ ನಾ,,,,,ಇಂದು ಸತ್ತು!

ಹೋರಾಡಿ, ಹಾರಾಡಿ, 
ತೂರಾಡಿ, ಕೂಗಾಡಿ 
ಬದುಕಲಿ ಬಡಿದಾಡಿ,
ಬದುಕನ್ನೇ ಗೆದ್ದೇ ಎನ್ನುವಷ್ಟರಲೀ 
ಬೇಕೆಂದಿದೆ ಹೃದಯ ಮುಕ್ತಿಯನು,

ಯವ್ವನ ಇದ್ದಾಗ ಎದೆ ನಿಗುರಿಸಿ 
ಹಣ್ಣಾಗಿ ಬೀಳುವಾಗ 
ಉರುಳಾಡಿ ಕಾಡಿ ಬೇಡಿದರೂ 
ಸಿಗುವುದೇ ಮುಕ್ತಿ ?
ಯುಕ್ತಿಯೇ ಚುಚ್ಚಿ ಕೇಳುತಿದೆ, 

ಮತ್ತೆ ಬಾ,,,, 
ಬಂದು ನನ್ನನು ಒಲಿಸು,
ಸುತ್ತಲು ಹತ್ತು ಕಾಮನೆಗಳನು ನಾನಿತ್ತರೂ,,
ನೆತ್ತರು ಕೊತ ಕೊತ ಕುಡಿಯುತಿದ್ದರೂ,,
ಮನದೊಳಗೆ ಬೆತ್ತಲಾಗಿ 
ಮುಕ್ತಿಗಾಗಿ ಭಕ್ತಿಯಲಿ ಬುಸುಗುಟ್ಟು,
ಬದುಕೇ ಆಹ್ವಾನವಿತ್ತಿದೆ!! ಹೀಗೆಂದು,,

ಮತ್ತೆ ಬರುವೇ ನಾ ಮುಕ್ತಿಯ ಆಸೆಯನಿತ್ತು,,
ಇಂದು ಸತ್ತು,

‍ಜೀ ಕೇ ನ‌

Comments

Submitted by kavinagaraj Mon, 05/05/2014 - 09:16

ಪುನರ್ಜನ್ಮ ಮತ್ತು ಮೋಕ್ಷದ ಬಯಕೆಗಳಲ್ಲಿ ನಂಬಿಕೆ ಇರಿಸಿದ ಅಭಿವ್ಯಕ್ತಿ ಚೆನ್ನಾಗಿದೆ. ಮುಕ್ತಿಗಾಗಿ ನಡೆಯುವ ಪಥದಲ್ಲಿ ನಡಿಗೆ ಮುಂದಿನ ಜನ್ಮದಿಂದಲ್ಲ, ಈಗಿನಿಂದಲೇ ಆರಂಭವಾಗಬೇಕು. ಇರುವುದನ್ನು ಉಪಯೋಗಿಸಿಕೊಳ್ಳೋಣ, ಮುಂದಿನ ದಾರಿಯೂ ಇನ್ನೂ ಸುಗಮವಾಗುತ್ತದೆ. ನವೀನರೇ, ನಿಮ್ಮ ವಿಚಾರಗಳು ಸರಿದಿಸೆಯಲ್ಲಿ ಸಾಗುತ್ತಿವೆ. ಮುಂದುವರೆಯಲಿ.