ಹೊನ್ನೆಮರಡಿನ ಕಥಾ ಕಮ್ಮಟದ ಸಾರ :

ಹೊನ್ನೆಮರಡಿನ ಕಥಾ ಕಮ್ಮಟದ ಸಾರ :

ಹೊನ್ನೆಮರಡಿನ ಕಥಾ ಕಮ್ಮಟದ ಸಾರ :

           ಇತ್ತೀಚೆಗೆ ಅಂದರೆ 2014ರ ಮೇ1 ರಿಂದ ಮೇ 3ರ ತನಕ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೊನ್ನೆಮರಡು ಶರಾವತಿ ಜಲಾನಯನ ಪ್ರದೇಶದ ಹಿನ್ನೀರಿನ ದಡದಲ್ಲಿ, ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕಥಾ ಕಮ್ಮಟದಲ್ಲಿ ನಾಡಿನ ಬೇರೆ ಬೇರೆ ಜಿಲ್ಲೆಗಳಿಂದ ಉದಯೋನ್ಮುಖ ಕಥಾ ಲೇಖಕರು ಭಾಗವಹಿಸಿ ಹಿರಿಯ ಕಥೆಗಾರರಿಂದ ಸಾಕಷ್ಟು ಮಾಹಿತಿಗಳನ್ನು ಪಡೆದರು. ಮೇ3ರ ಶನಿವಾರ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಕವಿ ಸದಾನಂದರು ಅದೇತಾನೇ ಸ್ಥಳದಲ್ಲಿ ರಚಿಸಿದ ಮತ್ತೇಭವಿಕ್ರೀಡಿತ ವೃತ್ತದ ಎರಡು ಪದ್ಯಗಳನ್ನು ವಾಚಿಸಿ ಪ್ರಾರ್ಥನೆ ಮಾಡಿದರು. ಮೂರುದಿನಗಳ ಈ ಶಿಬಿರದಲ್ಲಿ ಹಾಜರಿದ್ದ ಕವಿ ಕಮ್ಮಟದ ಸಾರವನ್ನು ಯುವ ಬರೆಹಗಾರರಿಗೆ ಮಾರ್ಗಸೂಚಿಯಂತೆ ಛಂದೋಬದ್ಧವಾಗಿ ಅಪರೂಪವಾಗಿರುವ ವೃತ್ತದಲ್ಲಿ ನೀಡಿದ್ದಾರೆ.

ಹೊನ್ನೆಮರಡಿನ ಕಥಾಕಮ್ಮಟದ ಸಾರ : (ಮತ್ತೇಭವಿಕ್ರೀಡಿತ ವೃತ್ತ)

ಕತೆಯಂ ಕಟ್ಟುವ ಕಾರ್ಯ ಕಮ್ಮಟದೊಳಿಲ್ಲೀ ಸ್ಪೂರ್ತಿಯಂ ಗೊಂಡವರ್ |
ಸ್ಥಿತಿಯಂ ಕಾಣಿಸುವಂತೆ ಕನ್ನಡದ ಕಂಪನ್ನೆಲ್ಲರಾಘ್ರಾಣಿಸಲ್ ||
ಗತಿಯಂ ರೂಢಿಸಿಕೊಂಡು ಹೊನ್ನೆಮರಡಿಂ ಸಾಗುತ್ತ ಸಪ್ರೇಮದಿಂ |
ಕೃತಿಯಂ ಮಾಳ್ಪವರಿಂಗೆ ನೈಜದರಿವಂ ನೀಡ್ವಂತದೀ ಕಮ್ಮಟಂ ||1||

ಬರೆಯಲ್ಬೇಕಿದೆ ಸತ್ಯನಿತ್ಯದರಿವಂ ತಾಕಂಡು ವಿಸ್ತಾರದೊಳ್ |
ಒರೆಯಲ್ಬಂದೊಡೆ ಕೇಳಿದೋದಿದವರಂ ತಾತನ್ನ ಸಂಮೋಹದಿಂ ||
ನೆರೆಗೊಂಡಿರ್ದರೆ ಶಬ್ಧಕಾವ್ಯ ಗುಣವಂ ಹೊತ್ತಿರ್ದರತ್ಯಾಶಯಂ |
ಧರೆಯೊಳ್ನಿಲ್ಲುವುದಂದ ಚಿಂತನೆಗಳಿಂದಂ ಶಾಶ್ವತಂ ಕನ್ನಡಂ ||2||

                                          - ಸದಾನಂದ  

Comments

Submitted by kavinagaraj Mon, 05/05/2014 - 09:04

ಎಲ್ಲಾ ಪುಟಗಳ 8 ಪೋಸ್ಟುಗಳ ಭಾಗವನ್ನು ನಿಮ್ಮ ಇದೊಂದೇ ಪೋಸ್ಟು ಆಕ್ರಮಿಸಿಕೊಂಡಿದೆ. ನಿರ್ವಾಹಕರಿಗೆ ತಿಳಿಸಿ ಹೆಚ್ಚಿನ 7 ಪೋಸ್ಟುಗಳನ್ನು ತೆಗೆಸಬಹುದು.
ಸಮಯೋಚಿತ ರಚನೆಗೆ ಅಭಿನಂದನೆಗಳು.