ಭಾರತಿ
ತಾನೇ ಹೆತ್ತ ಮಕ್ಕಳು
ತನ್ನನೇ ಹರಾಜಿಗೆ ಇತ್ತಿರುವಾಗ
ಪ್ರೇಮದೀ ಕುಳಿತಿಹಳು ತಾಯಿ
ಮಕ್ಕಳನು ಮುದ್ದಿಸುತ
ತನ್ನ ಒಂದೊಂದೇ ಆಭರಣ
ಕಳಚಿ ಅಡವಿಟ್ಟು ಹೆತ್ತವಕೆ ತುತ್ತಿಟ್ಟರೂ
ಇನ್ನಷ್ಟು ಬೇಕೆಂಬ ಪಿಪಾಸುಗಳನು
ಬೆಂಬಲಿಸಿ ಪೋರೆದಿಹಳು
ಮುಂದೆ ಚಂದಗಾಣುವವು
ಎಂದು ಕಲ್ಪಿಸುತ,
ಆಕೆಯ ತಲೆ ಹಿಡಿದು ಎಳೆಯುತಿಹನೊಬ್ಬ,
ಕೈ ಕತ್ತರಿಸ ಬೇಕೆಂದು ಭುಜದ ಮೇಲೆ
ಸವಾರಿ ಮಾಡುತಿರುವವನೊಬ್ಬ,
ಮಕ್ಕಳು ನೋಡುತ ನಲಿಯುತಿಹರು,,,
ಆಕೆ ನೋವಾದರೂ ನಗುತಿಹಳು,,
ಹಾಲು ಬತ್ತಿದರೂ ಮಕ್ಕಳು ಚೀಪುವುದು ಬಿಟ್ಟಿಲ್ಲ
ಕೊನೆಗೆ ಮೊಲೆ ಕೊಯ್ದು ರಕ್ತ ಕುಡಿಯಲು
ಮುಂದಾಗಿಹರು, ಮಂದಹಾಸದಲಿ,
ಬೆಂದಿಹಳು ಆಕೆ, ನೊಂದಿಹಳು ಆಕೆ
ಆದರು ಆಕೆಯಲಿ ನಿರಾಶ ಮೌನ,
ಕಿಬ್ಬೊಟ್ಟೆಗೆ ಜಾಡಿಸಿ ಒದ್ದು,
ಕಾಲೆರಡನು ಹಿಸಿಯ ಹೊರಟು
ಆಕೆಯ ದೇಹವನು ಚೂರು ಚೂರಾಗಿಸಿ
ಕಿತ್ತು ಕಿತ್ತು ತಿನ್ನುತಿಹರು
ಹೆತ್ತವ್ವನ ಮಾಂಸವನು,
ಆದರು ಅಳದೆಯೇ ಮಕ್ಕಳನು ಪೊರೆಯುತಿಹಳು,
ಧೈತ್ಯ ಪಾಶ್ಚಿಮಾತ್ಯರು ಧೈರ್ಯದಿ ಬಂದು
ತಮ್ಮನು ಹಡೆದವಳ ಭೊಗಿಸುತ್ತಿದ್ದರೂ
ಬಂಡವಾಳ ಪಡೆದು, ತಿಂದು ತೇಗುತಿಹರು
ಜಾಗತೀಕರಣದ ಆಕೆಯ ಮಕ್ಕಳು
ಮಕ್ಕಳಿಗಾಗಿ ಮಾನವನು ಮಾರಿಯು
ಮಧುರತೆಯ ನೀಡುತಿಹಳು
----------------------------------------------------
ಒಂದಿನಿತೂ ನೋವು ನೀಡದ ಆಕೆ
ಮನದ ಮರೆಯಲ್ಲಿ ಒಮ್ಮೆ
ಕಣ್ಣೀರಿಟ್ಟರೂ ಸಾಕು,
ಅದರ ಶಾಪದಲೇ ನಾವೆಲ್ಲಾ ಸರ್ವನಾಶ
ಮತ್ತೆಂದಿಗೂ ನಮಗಿಂತಹ ತಾಯಿ ಸಿಗಳು !!!!
ನಮ್ಮಂತಹ ಪಾಪಿ ಮಕ್ಕಳನು ಕಾಪಾಡು
"ಅಮ್ಮ ಭಾರತಿ",,,,,,,
ಜೀ ಕೇ ನ,