ಅವಧೂತ ಅನಂತ್ ನಾಗ್...!
ಅನಂತ್ ನಾಗ್. ಚಾರ್ಮಿಂಗ್ ಹೀರೋ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಬಲ್ಲ ಮಹಾನ್ ನಟ. ಈ ನಟ, ಹೊಸಬರ ಪ್ರಾಯೋಗಿಕತೆಗೆ ತೆರೆದುಕೊಳ್ಳುತ್ತಾರೆ. ಪಾತ್ರದೊಳಗೇ ಪಾತ್ರವಾಗಿ ಅದಕ್ಕೇನೆ, ನೈಜತೆ ತಂದುಕೊಡ್ತಾರೆ. ನೋಡುಗ ಪ್ರೇಕ್ಷಕರಿಗೂ ಅನಂತ್ ನಾಗ್ ಪಾತ್ರವಾಗಿ ಕಾಣಿಸುವುದಿಲ್ಲ. ಜೀವಂತ ವ್ಯಕ್ತಿತ್ವದಂತೆ ಮನಸ್ಸಿಗೆ ಇಳಿದು ಬಿಡ್ತಾರೆ. ಅದುವೇ ‘ಅನಂತ್’ ಶಕ್ತಿ...
-----
ಅನಂತ್ ನಾಗ್. ಎಲ್ಲ ಪಾತ್ರಕ್ಕೂ ಜೀವ ತುಂಬಲ್ಲ ನಟ. ಮಾತು ಕಮ್ಮಿ. ಭಾವಾವೇಷವೂ ಕಡಿಮೆ. ಆದರೆ, ಅಭಿನಯದಲ್ಲಿ ಪರಿಣಾಮ ಜಾಸ್ತಿ. ಇಲ್ಲಿವರೆಗೂ ನಿರ್ವಹಿಸಿದ ಪಾತ್ರಗಳು ಸರ್ವ ಕಾಲಕ್ಕೂ ಸೂಕ್ತ. ಆಗಿನಿಂದ ಹಿಡಿದು. ಈಗಿನವರಿಗೂ ಸಲ್ಲಬ್ಬಲ ಏಕೈಕ ನಟ. ಆದ್ರೂ, ಆಯ್ಕೆ ಮಾಡೊ ಪಾತ್ರಗಳು ಏಜ್ಗೆ ತಕ್ಕನಾಗಿಯೇ ಇರುತ್ತವೆ. ಆದರೆ, ಇಲ್ಲಿವರೆಗೂ ಅನಂತ್ ನಾಗ್, ಚಿತ್ರಗಳಲ್ಲಿ ಹಾಡಿದಿಲ್ಲ. ಅಬ್ಬರದಿಂದ ಡೈಲಾಗ್ ಹೊಡೆದದ್ದು ಇಲ್ಲ. ಉಪದೇಶವನ್ನೂ ಮಾಡಿದ್ದಲ್ಲ. ಅನಂತ್ ನಾಗ್ ಈಗ ಯೋಗರಾಜ್ ಭಟ್ಟರ ನಿರ್ಮಾಣದ ಚಿತ್ರದಲ್ಲಿ ಅನಂತ್ ನಾಗ್ ಆ ಅವಧೂತರಾಗಿ, ಉಪದೇಶ ಮಾಡಿದ್ದಾರೆ. ಮದಿರೆಯ ಸುತ್ತ ವೇದಾಂತ ಹೇಳ್ತಾನೇ, ಎಲ್ಲೇ ಇದ್ದರೂ ನೀನು..ನೀನಾಗಿರು ಅಂತ ಹೇಳ್ತಾ ಹೋಗಿದ್ದಾರೆ.
ಮಧುವಿನಲು...ಮದಿರೆಯಲು,
ಸದನದಲು, ಸಲುಗೆಯಲು, ನೀನು ನೀನಾಗಿರು....
ಹೀಗೆ ಸಾಗೋ ಸಾಲುಗಳನ್ನ ಬರೆದವ್ರು ಯೋಗರಾಜ್ ಭಟ್ಟರಲ್ಲ. ಬದಲಿಗೆ ಅವರ ಶಿಷ್ಯ ಕ್ರಿಶ್ ಜೋಷಿ. ಶಾಯಿರಿ ಥರದ ಈ ಸಾಲನ್ನ ಸ್ವತ: ಅನಂತ್ ನಾಗ್ ಆಡಿದ್ದಾರೆ. ಹಾಡಿದ್ದಾರೆ. ಆದರೆ, ಅನಂತ್ ನಾಗ್ ಈ ಹಿಂದೆ ಪಂಚರಂಗಿ ಚಿತ್ರದಲ್ಲಿ ಕೆಲವೇ ಕೆಲವು ಸೀನ್ಗಳಲ್ಲಿ ಬಂದು ಬದುಕಿನ ಸತ್ಯ ಹೇಳೋ ಕೆಲಸ ಮಾಡಿದ್ದರು. ಹಾಡಲ್ಲಿ ಇಡೀ ಜೀವನದ ಕತೆ ಹೇಳಿದ್ದರು. ಆ ಹಾಡಿಗೆ ಸ್ತತ: ಯೋಗರಾಜ್ ಭಟ್ಟ ಧ್ವನಿಯಾಗಿದ್ದರು. ಪರಪಂಚದ ಈ ಸತ್ಯ ಭರಿತ ಸಾಹಿತ್ಯಕ್ಕೆ ಸ್ವತ: ಅನಂತ್ನಾಗ್ ಧ್ವನಿಯಾಗಿದ್ದಾರೆ.
ಮಗು ಮನೆಗಿರುವ ಸಂಭ್ರಮ,
ಮದುವೆ ಮನೆಗಿಲ್ಲ, ಅಲ್ಲಿ ಸಾವಿರ
ಸುಳ್ಳು,ಇಲ್ಲಿ ಹಸಿ ಸತ್ಯ, ಪರಪಂಚ
ಇದು ಪರಪಂಚ....
ಚಿತ್ರದಲ್ಲಿ ಬರೋ ಈ ಸಾಲುಗಳು ಹಾಡಾಗಿದ್ದರೂ...ಹಾಡಲ್ಲ. ಮಾತಾಗಿದ್ದರೂ ಮಾತಲ್ಲ. ಅವಧೂತನಂತೆ ಕಾಣಿಸೋ ಅನಂತ್ನಾಗ್ ಅವರ ಕ್ಯಾರೆಕ್ಟರ್ನ್ನ ಎತ್ತಿ ಹಿಡಿಯೋ ಬರಹಗಳಿವು.ಜೀವನದ ಅನುಭವನ್ನ ‘ಬಾರ್’’ಗೆ ಹೋಲಿಸಿ ಬುದ್ದಿ ಹೇಳೋ ಒಬ್ಬ ಜೀವಂತ ಅನುಭವಿ. ಇಲ್ಲಿವರೆಗೆ ಭಟ್ಟರು ಇಂತಹ ಸತ್ಯಗಳನ್ನ ಪಾತ್ರಗಳ ಮೂಲಕ ಹೇಳೋ ಕೆಲಸ ಮಾಡ್ತಿದ್ದರು. ಈಗ ಅವರ ಶಿಷ್ಯ ಕ್ರಿಶ್ ಜೋಶಿ ಆ ಪರಪಂಚವನ್ನ ಮುಂದುವರೆಸಿದಂತಿದೆ. ಇನ್ನೇನೂ ಜುಲೈ ತಿಂಗಳಲ್ಲಿ ತೆರೆಗೂ ಬರಲಿರೊ ಪರಪಂಚ ಚಿತ್ರದಲ್ಲಿ ಇಂತಹ ಸುಮಾರು ವಿಶೇಷತೆಗಳಿವೆ. ನಟ ದಿಗಂತ್ ಇದೇ ಚಿತ್ರದಲ್ಲಿ ಅರೆ ಬೆತ್ತಲಾಗಿ ಜೀವವನ್ನ ಹುಡುಕಿಕೊಂಡು ಹೋಗ್ತಾರೆ. ಬಾರ್ ಗರ್ಲ್ಆಗಿ ರಾಗಿಣಿ ಮೈ ಮತ್ತು ಮನಸ್ಸು ಬಿಚ್ಚಿ ಡ್ಯಾನ್ಸ್ ಮಾಡಿದ್ದಾರೆ. ಇನ್ನೂ ಸಾಕಷ್ಟು ಸಂಗತಿಗಳಿವೆ. ಚಿತ್ರ ಬರೋವರೆಗೂ ವೇಟ್ ಮಾಡಿ..
-ರೇವನ್ ಪಿ.ಜೇವೂರ್
Comments
ಉ: ಅವಧೂತ ಅನಂತ್ ನಾಗ್...!
ನಿಜಕ್ಕೂ ಅನಂತನಾಗ್ ಒಬ್ಬ ಅದ್ಭುತ ಕಲಾವಿದ.