ಮನಂ ಎಂಬ ಪುನರ್ಜನ್ಮದ ಪ್ರೇಮ ಕಥೆ..!
ಮನ ಮಿಡಿಯೋ ಮನಂ...!
ದಿವಂಗತ ನಾಗೇಶ್ವರ್ ರಾವ್ ಕೊನೆ ಚಿತ್ರ
ಅಕ್ಕಿನೇನಿ ಫ್ಯಾಮಿಲಿ ಪ್ರೋಡಕ್ಷನ್ ಸಿನಿಮಾ
ವಂಶವೃಕ್ಷದ ಎಂಟರ್ ನಲ್ ಲವ್ ಸ್ಟೋರಿ
ಅತಿಥಿ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಅಭಿನಯ
----
ಟಾಲಿವುಡ್ನಲ್ಲಿ ಲೆಕ್ಕ ಹಾಕ್ತಾ ಹೋದ್ರೆ ಸುಮಾರು ಸೂಪರ್ ಸ್ಟಾರ್ ಫ್ಯಾಮಿಲಿಗಳಿವೆ. ಅವರಲ್ಲಿ ಅಕ್ಕಿನೇನಿ ನಾಗೇಶ್ವರ್ ರಾವ್ ಕುಟುಂಬವೂ ಒಂದು. ಇವರ ಪುತ್ರ ನಾಗಾರ್ಜುನ್. ನಾಗಾರ್ಜುನ್ ಪುತ್ರ ನಾಗಚೈತನ್ಯ. ಈ ಮೂವರೂ ಒಂದೇ ಚಿತ್ರದಲ್ಲಿ ಅಭಿನಯಿಸುತ್ತಾರೆಂಬ ಕಲ್ಪನೆನೂ ಯಾರಿಗೂ ಇರಲಿಲ್ಲ. ಆದರೆ, ಮನಂ ಚಿತ್ರದಲ್ಲಿ ಅಂತಹ ಒಂದು ಪ್ರಯೋಗ ಆಗಿದೆ. ದುರದುಷ್ಠವಶಾತ. ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ಕೊನೆ ಚಿತ್ರವೂ ಇದಾಯಿತು. ಈಗ ರಿಲೀಸೂ ಆಗಿದೆ. ಅಭಿಮಾನಿಗಳು ಚಿತ್ರಕ್ಕೆ ಒಳ್ಳೆ ರಿವ್ಯೂ ಕೊಟ್ಟಿದ್ದಾರೆ....
------
ಅಕ್ಕಿನೇನಿ ಫ್ಯಾಮಿಲಿ ಚಿತ್ರ ಇದು. ಕಾರಣ. ಇಡೀ ಫ್ಯಾಮಿಲಿ ಸದಸ್ಯರೆಲ್ಲ ಚಿತ್ರದಲ್ಲಿದ್ದಾರೆ. ಅಕ್ಕಿನೇನಿ ನಾಗೇಶ್ವರ್ ರಾವ್ ಪ್ರಮುಖ ಪಾತ್ರಧಾರಿ. ನಾಗಾರ್ಜುನ್ ಕತೆ ಸೆಂಟರ್ ಆಫ್ ಅಟ್ರ್ಯಾಕ್ಷನ್. ನಾಗ್ ಚೈತನ್ಯ ಮನಂ ಚಿತ್ರ ನಿರೂಪಣೆಗೆ ಮೊದಲ ಸಿಗೋ ನಾಯಕ....
ಮನಂ ಅಂದ್ರೆ ‘ನಾವು’ ಅಂತ ಕನ್ನಡದ ಅರ್ಥ. ಅರ್ಥಕ್ಕೆ ಎಲ್ಲೂ ಕುಂದು ಬರೋದಿಲ್ಲ. ನೋಡುಗರು ಇದು ನಮ್ಮ ಕತೆ ಅಥವಾ ನಾವು ಹೀಗೆಯಿದ್ದೇವೆ. ನಮ್ಮ ಫ್ಯಾಮಿಲಿನೂ ಹೀಗೆ ಇದೆ. ಅನ್ನೋಮಟ್ಟಿಗೆ ರಿಲೇಟ್ ಮಾಡಿಕೊಡ್ತಾರೆ. ಹಾಗಿದೆ, ಮನಂ ಚಿತ್ರ ಕಂಟೆಂಟ್. ಹಾಗಂತ ಇದು ಕೂಡು ಕುಟುಂಬದ ಕತೆ ಅಲ್ಲ. ಬೇರೆ..ಬೇರೆ ಕುಟುಂಬದ ಸದಸ್ಯರೇ ಮತ್ತೊಮ್ಮೆ ಹುಟ್ಟಿಬರೋ ವಿಶಿಷ್ಠ ಕಲ್ಪನೆಯ ಕತೆ ಇದು. ಆದರೆ, ಇಲ್ಲಿ ಹಿಂದಿನ ಜನ್ಮದ ಲವ್. ಮುಂದಿನ ಜನ್ಮದಲ್ಲೂ ಮುಂದುವರೆಯೋದೇ ಕತೆಯ ಹಾಟ್ ಬೀಟ್...
ಮನಂ ಕಥೆ ಏನೂ..?
ನಿರ್ದೇಶಕ ವಿಕ್ರಂ ಕುಮಾರ್ ಕಾಂಪ್ಲಿಕೇಟೆಡ್ ಕತೆಯ್ನನ ಇಲ್ಲಿ ಸಿಂಪಲ್ ಆಗಿ ಹೇಳಿದ್ದಾರೆ. ಇದನ್ನ ಇನ್ನೂ ಕೊಂಚ ಬಿಡಿಸಿ ಹೇಳೋದಾದ್ರೆ, ಒಂದು ಜನ್ಮದಲ್ಲಿ ನಾಗಾರ್ಜುನ್ ಮತ್ತು ಶ್ರೇಯಾ ಗಂಡ-ಹೆಂಡ್ತಿ. ಕೆಳ ಜಾತಿಯಲ್ಲಿ ಹುಟ್ಟಿರೋ ಶ್ರೇಯಾರನ್ನ ಮೆಚ್ತಾರೆ ನಾಗಾರ್ಜುನ್. ಇವರಿಗೆ ಹುಟ್ಟುವ ಮಗನೇ ಅಕ್ಕಿನೇನಿ ನಾಗೇಶ್ವರ್ ರಾವ್.. ಇದು ಒಂದು ಕಡೆ. ಇನ್ನೊಂದು ಕಡೆಗೆ ನಾಗ ಚೈತನ್ಯ ಮತ್ತು ಸಮಂತಾ ಗಂಡ-ಹೆಂಡ್ತಿ. ಇವರಿಗೆ ಹುಟ್ಟುವ ಮಗನೇ ನಾಗಾರ್ಜುನ್. ಇದು ಒಟ್ಟು ಕತೆ.
ಮರು ಜನ್ಮದ ಅಗಾಧ ಪ್ರೇಮ ಕಥೆ
ಇಲ್ಲಿ ಟ್ವಿಸ್ಟ್ ಏನೂ ಅಂದ್ರೆ ನಾಗಚೈತನ್ಯ ಮತ್ತೆ ಹುಟ್ಟುತ್ತಾನೆ. ಸಮಂತ್ ಕೂಡ ಮತ್ತೆ ಜನ್ಮ ಪಡೆಯುತ್ತಾಳೆ. ಆದರೆ, ಹಿಂದಿನ ಜನ್ಮದಲ್ಲಿ ಹುಟ್ಟಿರೋ ನಾಗಾರ್ಜುನ್ ಇನ್ನೂ ಇರ್ತಾನೆ. ದೊಡ್ಡ ಬಿಸಿನೆಸ್ ಮ್ಯಾನ್ ಆಗಿರುತ್ತಾನೆ. ಮತ್ತೆ ಹುಟ್ಟಿದ ತಮ್ಮ ತಂದೆ-ತಾಯಿಯನ್ನ ಭೇಟಿಯಾಗ್ತಾನೆ. ಹಿಂದಿನ ಜನ್ಮದಲ್ಲಿ ಕಳೆದು ಹೋದ ಅವರ ಮಧ್ಯೆ ಪ್ರೀತಿಯನ್ನ ಮತ್ತೆ ಈ ಜನ್ಮದಲ್ಲೂ ಹುಟ್ಟುವಂತೆ ಮಾಡ್ತಾನೆ.
ಇದೇ ಸೇಮ್ ಕತೆ ಅಕ್ಕಿನೇನಿ ನಾಗೇಶ್ವರ್ ರಾವ್ ಅವರದು. ಇವರ ತಂದೆ ನಾಗಾರ್ಜುನ್ ಮತ್ತು ಶ್ರೇಯಾ ಮತ್ತೆ ಹುಟ್ಟಿರುತ್ತಾರೆ. ಆದರೆ, ಇಲ್ಲಿ ನಾಗೇಶ್ವರ್ ರಾವ್ ಅವರಿಗೆ 90 ವರ್ಷ ಆಗಿರುತ್ತದೆ. ರೋಡ್ ಪಕ್ಕದಲ್ಲಿ ಅಕ್ಕಿನೇನಿ ನಾಗೇಶ್ವರ್ ರಾವ್ ‘ಅಮ್ಮ..!’ ಅಂತ ಕೂಗ್ತಾ ಬಿದ್ದಿರುತ್ತಾರೆ. ಅದನ್ನ ಕೇಳಿ ಹತ್ತಿರಕ್ಕೆ ಬರೋರು ಶ್ರೇಯಾ. ಆದರೆ, ಇದೇ ವೇಳೆ ಇದೇ ಜಾಗಕ್ಕೆ ನಾಗಾರ್ಜುನ್ ಎಂಟ್ರಿ ಆಗುತ್ತದೆ. ಆಗ ಶ್ರೇಯಾ ಹೃದಯ ಪಡೆದುಕೊಳ್ಳುತ್ತದೆ. ಇದೇ ಟೈಮ್ಗೆ ಶ್ರೇಯಾ ಎದೆನೂ ಪಡೆದುಕೊಳ್ಳುತ್ತದೆ. ಇದಾದ ಮೇಲೆ ಇಬ್ಬರೂ ಅಕ್ಕಿನೇನಿ ನಾಗೇಶ್ವರ್ ರಾವ್ ಬಳಿಗೆ ಬರ್ತಾರೆ.
ಪ್ರಜ್ನಾ ಹೀನ ಸ್ಥಿತಿಯಲ್ಲಿರೋ ಅಕ್ಕಿನೇನಿ ನಾಗೇಶ್ವರ್ ರಾವ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ತಾರೆ. ನಾಗಾರ್ಜುನ್ ಮತ್ತು ಶ್ರೇಯಾರನ್ನ ಕಂಡ ಅಕ್ಕಿನೇನಿ ನಾಗೇಶ್ವರ್ ರಾವ್, ಅಪ್ಪ..ಅಮ್ಮ ಅಂತ ಹೇಳ್ತಾರೆ. ಅಲ್ಲಿಗೆ ಇಲ್ಲೂ ಒಂದು ಫ್ಲಾಷ್ ಬ್ಯಾಕ್ ಕತೆ ಇದೆ ಅಂತ ಪ್ರೇಕ್ಷಕರಿಗೆ ತಿಳಿಯುತ್ತದೆ. ಹೀಗೆ ಮನಂ..ಮಿಡಿಯುತ್ತಲೇ ಹೋಗುತ್ತದೆ.
ಮೊಲಾರ್ಧದಲ್ಲಿ ಮೊಮ್ಮಗ ನಾಗಚೈತನ್ಯ ಮತ್ತು ಪುತ್ರ ನಾಗಾರ್ಜುನ್ ಕತೆ ಇರುತ್ತದೆ. ದ್ವಿತಿಯಾರ್ಧದಲ್ಲಿ ನಾಗೇಶ್ವರ್ ರಾವ್ ಕತೆ ಓಪನ್ ಆಗುತ್ತದೆ. ಆದರೆ, ಕ್ಲೈಮ್ಯಾಕ್ಸ್ ನಲ್ಲಿ ಜನ್ಮಜನ್ಮಾಂತರದ ಕತೆಗಳು ಪರಸ್ಪರ ಅರ್ಥವಾಗುತ್ತವೆ. ಸಾವಿಗೆ ಎಲ್ಲ ಜನ್ಮದಲ್ಲೂ ಕಾರಣವಾದ ಅದೇ ಜಾಗದಲ್ಲಿಯೇ, ಇಂಟರ್ ಲಿಂಕ್ ಇರೋ ಒಂದೇ ಫ್ಯಾಮಿಲಿ ಮತ್ತೆ ಮೀಟ್ ಆಗುತ್ತದೆ. ಆದರೆ, ಈ ಭಾರಿ ಯಾರು ಸಾಯೋದಿಲ್ಲ. ದುರ್ಘಟನೆ ಜರುಗಿದರೂ..
ವಿಶಿಷ್ಠ ಕಥೆ ಮತ್ತು ನಿರೂಪಣೆ
ಈ ಥರದ ಕತೆ ಇಲ್ಲಿವರೆಗೂ ಬಂದಿಲ್ಲ. ಇದನ್ನ ನಿರ್ದೇಶನ ಮಾಡೋದು ತುಂಬಾ ಕಷ್ಟ. ಆಗಿರೋ ಈ ಕಥೆ 1920 ರಿಂದ 2020 ಮಧ್ಯೆ ಜರುಗುತ್ತದೆ. ಅಂದ್ರೆ ನೂರು ವರ್ಷದ ಅಂತರದಲ್ಲಿ ಸಾಗೋ ಒಂದೇ ಕುಟುಂಬದ ಒಟ್ಟು ಎಟರಲ್ ಲವ್ ಸ್ಟೋರಿನೇ ಈ ಮನಂ. ಅನೂಪ್ ರುಬಿನ್ಸ್ ಸಂಗೀತದಲ್ಲಿ ಮನ ತಟ್ಟುವ ಹಾಡುಗಳಿವೆ. ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ‘ಪ್ರೇಮ್ ನಗರ’ ಚಿತ್ರದ ‘ನೇನ್ ಪುಟ್ಟಾನು ಲೋಕಂ ಮೆಚ್ಚಿಂದಿ’ ಹಾಡು ಕೂಡ ಇಲ್ಲಿ ಮರು ಬಳಕೆಯಾಗಿದೆ. ಪಿ.ಎಸ್.ವಿನೋದ್ ಛಾಯಾಗ್ರಹಣದಲ್ಲಿ ಎಲ್ಲ ಕಾಲಘಟ್ಟದಲ್ಲೂ ದೃಶ್ಯವೈಭವ ಕಂಡು ಬರುತ್ತದೆ. ಎಲ್ಲರೂ ಚೆನ್ನಾಗಿಯೇ ತಮ್ಮ..ತಮ್ಮ ಜವಾಬ್ಧಾರಿಯನ್ನ ನಿಭಾಯಿಸಿದ್ದಾರೆ. ಅಕ್ಕಿನೇನಿ ನಾಗೇಶ್ವರ್ ರಾವ್ ಅಭಿನಯ ವಂತೂ ಮನಸಲ್ಲಿ ಉಳಿಯುತ್ತದೆ. ಚಿತ್ರದಲ್ಲಿ ಅವರ ಬೀರಿರೋ ಆ ಮುಗ್ಧ ನಗು ಶಾಶ್ವತವಾಗಿ ಉಳಿದು ಹೋಗುತ್ತದೆ.
-ರೇವನ್ ಪಿ.ಜೇವೂರ್
Comments
ಉ: ಮನಂ ಎಂಬ ಪುನರ್ಜನ್ಮದ ಪ್ರೇಮ ಕಥೆ..!
ಚೆನ್ನಾಗಿದೆ.