ಭಿಕ್ಷೆ
ಚಿತ್ರ
ದೇವ ನಿನ್ನ ಕರುಣೆಯ ಜೀವಿಗಳು ನಾವು
ನೀ ಆಡಿಸಿದ ಹಾಗೆ ಆಡುವ ಗೊಂಬೆ ನಾವು
ನೀ ಕೊಡುವ ಚಾಟಿಯು ನಮಗೆ ದ:ಖವು
ನೀ ಕೊಡುವ ಕಾಣಿಕೆಯು ಸುಖವು
ಸುಖ ಇದ್ದಾಗ ನಿನ್ನ ನೆನವು ಮರೆಯುವರು
ಕಷ್ಟ ಬಂದಾಗ ನಿನ್ನ ಮೊರೆ ಹೋಗುವರು
ಸಂಕಟ ಬಂದಾಗ ವೆಂಕಟರಮಣ ಎನ್ನುವರು
ನಾವೆಲ್ಲೆರು ನಿನ್ನಿಂದ ಸುಖವ ಬೇಡುವ ಭಿಕ್ಷುಕರು
ಈ ಜಗತ್ತಿನಲ್ಲಿ ಸುಖ-ದು:ಖ ಎಲ್ಲವೂಕ್ಷಣಿಕ
ನಿನ್ನ ಬಿಟ್ಟು ಇಲ್ಲಿ ಯಾವುದೂ ಶಾಶ್ವತವಲ್ಲ
ನಿನ್ನಿಂದ ಎಲ್ಲರೂ ಸುಖವನ್ನೇ ಬಯಸುವರು
ಒಟ್ಟಿನಲ್ಲಿ ನಾವೆಲ್ಲರು ಒಂದು ರೀತಿಯ ಭಿಕ್ಷುಕರು
ತಮ್ಮ ಸ್ವಾರ್ಥಕ್ಕೋಸ್ಕರ ಏನು ಮಾಡಲು ಸಿದ್ದರಿರುವರು
ತಮ್ಮ ಸುಖಕ್ಕಾಗಿ ಬೇರೆಯವರ ಶಾಂತಿ ಹಾಳುಮಾಡುವರು
ಇದರಿಂದ ಬೇಸತ್ತು ಹುಡುಕುತ್ತಾ ಹೂರಟೆ ಮನ: ಶಂತಿ
ಆದರೆ ಹಬ್ಬಿತ್ತು ಅಶಾಂತಿ ಎಲ್ಲ ಕಡೆ
ಹೆತ್ತ ತಂದೆ -ತಾಯಿ ದೂರವಿಟ್ಟು
ಕಾಯಕ ಯೋಗಿ ಆಗದೆ ಬಯಸಿದೆನು ಸುಖವ
ದೇವ ನಿನ್ನ ನೆನೆಯದೆ ಮೂರ್ಖನಾದೆನು
ಕೊಡು ದೇವ ಮುಕ್ತಿ ಎಂಬ ಭಿಕ್ಷೆಯನು.
Rating
Comments
ಉ: ಭಿಕ್ಷೆ
ರವೀಂದ್ರ ಎನ್ ಅಂಗಡಿಯವರಿಗೆ ವಂದನೆಗಳು
ಭಿಕ್ಷೆ ಒಂದು ಅರ್ಥಗರ್ಭಿತ ವರ್ತಮಾನದ ಸ್ಥಿತಿ ಬಿಂಬಿಸುವ ಕವನ, ಗುಣಶೇಖರ ಮೂರ್ತಿಯವರ ಪ್ರತಿಕ್ರಿಯಾತ್ಮಕ ಕವನ ನಿಮ್ಮ ಕವನದ ಗಹನತೆಯನ್ನು ಹೆಚ್ಚಿಸಿದೆ, ಹೀಗೆಯೆ ನಿಮ್ಮ ಕ್ರಿಯಾಶೀಲ ಬರವಣಿಗೆ ಮುಂದುವರಿಯಲಿ. ಧನ್ಯವಾದಗಳು.
In reply to ಉ: ಭಿಕ್ಷೆ by H A Patil
ಉ: ಭಿಕ್ಷೆ
ನಮಸ್ಕಾರ ಸರ್
ನಿಮ್ಮ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.