ಕಾಡುವ ಕಿಣ್ವಗಳು
ಅವ್ವನ ಬೆರಳಿನ ತುದಿಗಂಟಿದ ಗಂಟು
ಬಡತನದ ನಿರ್ವಾತ ಮೌನ ಬಿಕ್ಕಳಿಕೆ
ಹಸಿವೂ ಕಾಡುವ ಕತ್ತಲಿನ ಕ್ರೌರ್ಯಕೆ
ದುಡಿದು ದಣಿವ ಅಪ್ಪನ ಕಳೆದ ಪ್ರೇಯಸಿಯ
ಮರೆಸುವ ಹುನ್ನಾರಕ್ಕೆ
ಅವ್ವನದ್ದೆ ಮಧುರ ಮೌನ ಉಪವಾಸ
ನಾಚಿಕೆ ಇಲ್ಲದೆ ಹರಿವ ನೀರು
ತಣಿಸಿತೆ ದಾಹವ? ದೇಹವಿಲ್ಲದೆ !
ಕಾಮದೊಳಗಿನ ಜಗವಾಳೊ ಶಕ್ತಿಗೆ
ಇಟ್ಟ ಹೆಸರು, ಏನಿದ್ದರೇನು?
ಮಹಾ ಮರ್ಕಟನ ಗಯ್ಯಾಳಿತನಕ್ಕೆ
ಮುತ್ತಿಟ್ಟು ಮೆಟ್ಟುವ ಕೀರ್ತನೆ
ಕಾಡುವ ಮರವಿಲ್ಲದ ಕಾಡು,
ಏದುಸಿರು, ಅಷ್ಟೇ ಸತ್ಯ, ಮುಂದೆ ??
ಕೊನೆಯ ಹೆಜ್ಜೆಯಲ್ಲಿ ಗುರಿ ಇದಲ್ಲ ಎಂದು
ಹಪಹಪಿಸಿದರೆ, ಹೊಣೆಯಾಗಲು ಯಾರು
ಮಾನವರು ಇಲ್ಲಿ,?
ದಿನ ಕುಣಿದಾಟ, ನಾಟಕದ ನರ್ತನ
ಒಬ್ಬರದು ಬಯಲು, ಇನ್ನೊಬ್ಬನದು ಬಂಗಲೆ,
ಸತ್ವ ಒಂದೇ,,,,, ಬೆತ್ತಲೆ ಬದುಕು
ದೇವನ ಹುಡುಕಿ, ದಣಿವಾಗಿ,
ಸಾರವ ಹುಡುಕಿ, ಸೂರು ಕಳೆದುಕೊಂಡು,
ಅವನ ಮರ್ಮಕೆ ತಲೆ ಬಾಗದೆ ಹೋಗುವೆಯಾ ನೀ???
ಹೋಗುವೆಯಾದರೆ,,,, ಜಗವೆಲ್ಲ ಸುಳ್ಳು,
ಕಿತ್ತ ತಂತಿಯ ಮಹತ್ವ ನುಡಿಸುವ ನಂದೀಶನಿಗೇ ಗೊತ್ತು,
ಗಂಟಲು ಹರಿದು ಹೋದರೆ, ಹಾಡುವುದು ಯಾರಿಗೆ ?
ಒಳಗಿನ ರಾಗ ಸತ್ತು, ಹೊರಗೆ ಬೆಳ್ಳಗೆ,
ಬಿಳಿ ಹಾಲನು ಎಸೆಯುವರು, ಸತ್ವ ಕಳೆದುಕೊಂಡು
ಬಣ್ಣ ಮಾತ್ರ ಉಳಿಸಿಕೊಂಡರೆ,
ಸುತ್ತು ಹಾಕಿ, ಕಿತ್ತು ಕಿತ್ತು ಕೂಡಿಟ್ಟರು
ಅದೇ ಅವ್ವನ ಮಡಿಲು ಸಿಕ್ಕದೂ,
ಕಳೆದು ಕೊರಗಿ, ಕೂಗುವ ಮುನ್ನ,,,,,
ಅವ್ವನ ಬೆರಳಿಗಂಟಿದ ಗಂಟನು ಅರಿತರೆ?? !!
-- ಜೀ ಕೇ ನ
Comments
ಉ: ಕಾಡುವ ಕಿಣ್ವಗಳು
ಒಳ ಬೇಗುದಿಯ ಹೊರಚೆಲ್ಲಿದಂತೆ!!
In reply to ಉ: ಕಾಡುವ ಕಿಣ್ವಗಳು by kavinagaraj
ಉ: ಕಾಡುವ ಕಿಣ್ವಗಳು
ಪ್ರತಿಕ್ರಿಯೆಗೆ ಧನ್ಯವಾದಗಳು ಕವಿಗಳೇ