ಅಸ್ಪಷ್ಟ ಪ್ರಶ್ನೆ

ಅಸ್ಪಷ್ಟ ಪ್ರಶ್ನೆ

ಮನವು ಸತ್ತು ಹೆಣವಾದರೂ
ನೆನವು ಸಾಯುತ್ತಿಲ್ಲ,,,, ಯಾಕೆ ?

ನಿದ್ರೆಯ ಮಂಪರಿನಲ್ಲಿ
ನಡಿಗೆಯ ಮೈಮರೆವೆಯಲ್ಲಿ
ಅಲ್ಲಿ, ಇಲ್ಲಿ, ಎಲ್ಲೆಲ್ಲೂ 
ಕಾಡುವುದೊಂದೆ,,,,, ನೆನಪು !

ದಟ್ಟ ಕಾಡಿನಲ್ಲಿ
ಮರುಭೂಮಿ ಎದುರಾದಂತೆ,
ಸಾಗರದ ಮಧ್ಯದಲ್ಲಿ 
ನೀರೆಲ್ಲ ಖಾಲಿ ಆದಂತೆ,,,,
ನೆನಪು,,,,,ಕಾಡುವುದು ಯಾಕೆ ?

ಮರೆತು ಬಿಟ್ಟೆನು ಎಂದು 
ಬೀಗುವಾಗ,,,,,
ನೆನೆದು ಅಳುವಂತೆ,,,,,,,,,,,,
ನೆನಪಿಗೆ ಸರಿಸಾಟಿ ಯಾವುದು ?

ನೇಸರದ ನಕ್ಷತ್ರಗಳನು 
ಎಣಿಸಿ, ಗುಣಿಸಬಹುದೆನೋ,,,,,
ಆದರೆ,,, 
ನನಪ ಮರೆಯುತ್ತೇನೆ ಎನ್ನುವುದು 
ನೆಪ ಮಾತ್ರ,,,,,

ನೆನಪಿನ ಶ್ರೀಮಂತಿಕೆಯಲಿ,,,,
ಉಳಿದದ್ದೆಲ್ಲ ??????

-------------------------------------------

ಎಸಳು ಉದುರಿ ಬೀಳುವಾಗ 
ಹೂ ಅಳುವುದೇ ?
ಹೂ ಉದುರಿ ಬೀಳುವಾಗ 
ಗಿಡ ಅಳುವುದೇ ?

ಬಿದ್ದ ನೋವನು ಮರೆತು, 
ಇನ್ನಷ್ಟು ಚಂದದ ಹೂಗಳನು 
ನೀಡುವುದು ಗಿಡ,

ಆಸೆ ಚೂರಾಗಿ ಬಿದ್ದರೆ 
ಮನ ಅಳುವುದು ಯಾಕೆ ?
ಗಿಡದಂತೆ ಹಸಿರಾಗದೇಕೆ ?

Comments

Submitted by kavinagaraj Thu, 06/05/2014 - 15:38

ಸ್ಪಷ್ಟಗೊಳ್ಳುವ ಹಾದಿಯಲ್ಲಿ ಪ್ರಾರಂಭದಲ್ಲಿ ಅಸ್ಪಷ್ಟತೆಯೇ! ತೊಳಲಾಟದ ಸೊಗಸಾದ ಬಿಂಬ ಮೂಡಿದೆ.