ಗಣಿತ ಅಧ್ಯಾಪನ

ಗಣಿತ ಅಧ್ಯಾಪನ

ಬಹಳಷ್ಟು10ನೇತರಗತಿಯ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಹೆದರಿಕೆ ಹುಟ್ಟಿಸುವ ವಿಷಯ ‘ಗಣಿತ’. ಇದುಬಹಳಷ್ಟು ಅನುತ್ತೀರ್ಣರಾಗುವ ವಿದ್ಯಾರ್ಥಿಗಳ ಕೆಟ್ಟ ಕನಸು. ಬೆಂಗಳೂರಿನಂತಹ ನಗರದಲ್ಲಿ ಸರಕಾರಿಶಾಲೆಗಳಲ್ಲಿ ಕಲಿಯುವ ಮಕ್ಕಳಲ್ಲಂತೂ ಇದು ಶತಪ್ರತಿಶಹ ಸತ್ಯ. ಸರಕಾರಿಶಾಲೆಯಲ್ಲಿ ಕಲಿಯುವ ಬಹಳಷ್ಟು ಮಕ್ಕಳು ಬಡಪರಿವಾರದಿಂದ ಬಂದಿರುತ್ತಾರೆ ಮತ್ತು ಇವರಲ್ಲಿ ಬಹಳಷ್ಟು ಮಕ್ಕಳ ಪೋಷಕರು ಅಶಿಕ್ಷಿತರಾಗಿರುತ್ತಾರೆ. ಈ ಮಕ್ಕಳನ್ನುಖಾಸಗಿ ಶಾಲೆಗೆ ಸೇರಿಸಲು ಅಥವಾ ಅವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತಹಟ್ಯೂಶನ್ ಕೊಡಿಸಲು ಅಗಿತ್ಯವಿರುವಆರ್ಥಿಕ ಪರಿಸ್ಥಿತಿ ಈ ಪೋಷಕರಿಗೆಇರುವುದಿಲ್ಲ.ಈ ಮಕ್ಕಳಿಗೆ ಬೇಕಾದ ಹೆಚ್ಚುವರಿ ಅಭ್ಯಾಸ ಅಂದರೆ ಉಚಿತ ಟ್ಯೂಶನ್ ವ್ಯವಸ್ಥೆಯನ್ನು 8ನೇ ಅಥವಾ9ನೇ ತರಗತಿಯಿಂದಲೇ ಕೊಡುವುದರಿಂದ ಅವರು10ನೇ ತರಗತಿಯಲ್ಲಿ ಸುಲಭವಾಗಿ ಉತ್ತೀರ್ಣರಾಗುವಂತೆ ಮಾಡಬಹುದು. 

ಕಳೆದ ವರ್ಷ ನಾವು ಜೀವನಭೀಮಾನಗರದ ಸರಕಾರಿ ಶಾಲೆಯಲ್ಲಿ ಈ ಪ್ರಯತ್ನವನ್ನು ಆರಂಭಿಸಿದ್ದೇವೆ. ಬೋಧನಾ ಸಮಯವು ಸೋಮವಾರದಿಂದ ಶುಕ್ರವಾರದವರೆಗೆ 8:30-9:30 ಅಥವಾ3:30-4:30 ಆಗಿತ್ತು. ಈ ಶೈಕ್ಷಣಿಕ ವರ್ಷದಲ್ಲಿ(ಜೂನ್2014ರಿಂದ) ನಾವು ಬೆಂಗಳೂರಿನ ಇಂತಹ 10 ಶಾಲೆಗಳಲ್ಲಿ ಈ ಬೋಧನಾ ಕ್ರಮವನ್ನು ಪ್ರಾರಂಭಿಸುವ ಗುರಿಯನ್ನು ಇಟ್ಟುಕೊಂಡಿದ್ದೇವೆ. ಪ್ರತಿತರಗತಿಗೆ ಕನಿಷ್ಠ2 ಸ್ವಯಂಸೇವಕರು ಬೇಕಾಗುತ್ತಾರೆ. ಆದ್ದರಿಂದ ಪ್ರತಿ ಶಾಲೆಗೆ ಸುಮಾರು10 ಸ್ವಯಂಸೇವಕರು ಬೇಕಾಗುತ್ತಾರೆ. ಈ10ರಲ್ಲಿ ಕನಿಷ್ಠ 6 ಸ್ವಯಂಸೇವಕರಿಗೆ ಕನ್ನಡದಲ್ಲಿ ಕಲಿಸುವ ಸಾಮರ್ಥ್ಯ ಇರಬೇಕು. ಅದ್ದರಿಂದ ನಾವು ಕನ್ನಡದಲ್ಲಿ ಕಲಿಸಲು ಸಕ್ಷಮರಾಗಿರುವ ಸ್ವಯಂಸೇವಕರನ್ನು ಹುಡುಕುತ್ತಿದ್ದೇವೆ.

ಇದೊಂದು ಸಾರ್ವಜನಿಕರಿಂದ ಆರಂಭವಾದ ಪ್ರಯತ್ನ. ಇದರ ಉದ್ದೇಶ ನಮ್ಮ ಸ್ಥಳೀಯ ವಿದ್ಯಾರ್ಥಿಗಳ ಬಗ್ಗೆ ಇರುವ ಕಾಳಜಿ. ನಮ್ಮ ಸ್ವಯಂಸೇವಕರು ಇದರಿಂದ ಯಾವುದೇ ರೀತಿಯ ಸಮ್ಮಾನ ಪತ್ರಗಳನ್ನಗಲೀ ಅಥವಾ ಆರ್ಥಿಕ ನಿರೀಕ್ಷೆಗಳನ್ನಾಗಲೀ ಇಟ್ಟುಕೊಂಡಿರುವುದಿಲ್ಲ.ಇದು ನಮ್ಮ ಸಮಾಜದಲ್ಲಿ ಬದಲಾವಣೆ ಮತ್ತು ಅಭಿವ್ರದ್ಧಿಯನ್ನು ತರಲುಮತ್ತು ನಿಮ್ಮ ವ್ಯಕ್ತಿತ್ವ ವಿಕಸನಕ್ಕಾಗಿರುವ ಅತ್ಯುತ್ತಮ ಅವಕಾಶ.

ಈ ಬದಲಾವಣೆಯನ್ನು ತರುವ ಗುರಿಯಿಟ್ಟುಕೊಂಡು ನಮ್ಮ ಕೈ ಜೋಡಿಸಲು ಇಷ್ಟವಿದ್ದಲ್ಲಿಆಥವಾ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ನವೀನ  Email: naveenkamkar@gmail.com

ದೀಪಕ್ Email: notdeepak@gmail.com

Comments