ಶೈಕ್ಷಣಿಕ ಸಾಲವೆಂಬ (Educational loan) ಶೂಲದ ಸುತ್ತ ಮುತ್ತ ..!

ಶೈಕ್ಷಣಿಕ ಸಾಲವೆಂಬ (Educational loan) ಶೂಲದ ಸುತ್ತ ಮುತ್ತ ..!

ಶೈಕ್ಷಣಿಕ ಸಾಲವೆಂಬ(Educational loan) ಶೂಲದ ಸುತ್ತ ಮುತ್ತ ..!

ಸಾಲ ಎಂಬ ಸುಳಿಯಲ್ಲಿ ಸಿಕ್ಕಿಲ್ಲದೆ ಇರುವವರು ಯಾರಾದರು ಇದ್ದಾರೆಯೇ? ಹೀಗೊಂದು ಯೋಚನೆ , ನನ್ನ ತಲೆಯಲ್ಲಿ ಮಿಂಚಿನಂತೆ ಆಗಾಗ ಬಂದು ಹೋಗುತ್ತಿತ್ತು. 
ಸರಿ, ಆ ನಮ್ಮ  ಆರಾಧ್ಯ ದೇವ ತಿಮ್ಮಪ್ಪನೆ ಸಾಲ ಮಾಡಿದ್ದಾನೆ ನಮ್ಮದು ಏನು ಮಹಾ! ಅಲ್ವಾ,  ಅಂತ ಯೋಚನೆ ಎಲ್ಲರಂತೆ ನನಗೂ  ಕೂಡ ಅನ್ನಿಸಿ ಸುಮ್ಮನಾಗದರೊಳಗೆ  ನೆನಪಾಗಿದ್ದು - ಆತ ಸಾಲ ಮಾಡಿದ್ದು ಮದುವೆಯಾಗಲೇ ಹೊರತು ನಮ್ಮ ನಿಮ್ಮ ಹಾಗೆ ಓದಲು ಅಲ್ಲಾ !

ಇಂದು ನಾವು ಪಡೆಯುವ ಶೈಕ್ಷಣಿಕ ಸಾಲಗಳ ಬಡ್ಡಿ, ಗೃಹ(Home loan) ಸಾಲಗಳಿಗಿಂತ ಅಧಿಕ  ಮತ್ತು ಅದು  ವ್ಯೆಯಕ್ತಿಕ (Personal loan) ಸಾಲಗಳಿಗೆ ವಿಧಿಸುವಷ್ಟೇ ಬಡ್ಡಿ !  ಏನಿದು ವಿಪರ್ಯಾಸ ಅಲ್ಲವಾ?
ದೇಶದ ಪ್ರಗತಿ, ಏನಾದರೂ ವೇಗವಾಗಿ ಆಗಬೇಕಂದರೆ  ಅದು ಶೈಕ್ಷಣಿಕ ಕ್ಷೇತ್ರದಿಂದ  ಸಾಧ್ಯವೇ ಹೊರತು  ಮತ್ಯಾವ ಬೇರೆ ಕ್ಷೇತ್ರದಿಂದ  ಅಲ್ಲಾ  ಎನ್ನುವುದು ನನ್ನ ಅಭಿಪ್ರಾಯ. ಇಂತಹ ಕ್ರಾಂತಿಯಾಗಬೇಕಿದ್ದಲ್ಲಿ  ಅತಿ ಹೆಚ್ಚು ಪ್ರೋತ್ಸಾಹದ ಅವಶ್ಯಕತೆಯಿದೆ, ಅದರಲ್ಲೂ ಗ್ರಾಮೀಣ ಭಾಗದ ವಿಧ್ಯಾರ್ಥಿಗಳಿಗೆ. ಕಾರಣ ನಮ್ಮ ದೇಶದಲ್ಲಿ ಸುಮಾರು 70% ಜನರು ಹಳ್ಳಿಗಳಲ್ಲಿ ವಾಸಿಸುತ್ತಾರೆ ಅದರಲ್ಲೂ  ಇವರೆಲ್ಲಾ ಭಾಗಶಹ ಕೃಷಿಕರು.  ಇಂದಿನ ಕೃಷಿಕರ ಸ್ತಿಥಿ  ತಿಳಿದೇ ಇದೆ, ಮಳೆ ಬಂದರೆ ಬೆಳೆ, ಬೆಳೆಯಾದರೆ ಸಿಗದ ಬೆಂಬಲ ಬೆಲೆ, ಮಳೆ ಜಾಸ್ತಿಯಾದರೆ ಅತಿವೃಷ್ಟಿ ಇಲ್ಲವಾದರೆ ಅನಾವೃಷ್ಟಿ, ಈ ಅನಿಶ್ಚಿತತೆಯಲ್ಲಿರುವ ನಮ್ಮ ರೈತರು ಹೇಗೆ ತಾನೇ ತಮ್ಮ ಮಕ್ಕಳನ್ನು ಉನ್ನತ ವ್ಯಾಸಂಗಕ್ಕೆ ಕಳಸಿಯಾರು?
ಸರಿ ಶೈಕ್ಷಣಿಕ ಸಾಲ (Education Loan) ಪಡೆದು ಯಾರು ಬೇಕಾದರೂ ಓದಬಹುದು ಅಲ್ಲವಾ  ಎಂದು ಪ್ರಶ್ನೆ ನಿಮ್ಮಲ್ಲಿ ಮೂಡಬಹುದು,   ಕೇಳಿ ನನ್ನ ಒಂದು ಕಥೆಯನ್ನು..
ನನ್ನ ತಂದೆ ಅವರಿವರ ಹತ್ತಿರ ಕೇಳಿ ಪಡೆದು  ಮಾಡಿದ ಸಾಲದಿಂದ, ಹಾಗೂ ಈ ಕಷ್ಟಗಳನ್ನೂ ಅರಿತಿದ್ದ ನನ್ನ ಮನಸ್ಸು ಆಗಾಗ ನನ್ನ ಎಚ್ಚರಿಸುತ್ತಿದ್ದರಿಂದ  ನಾನು ಕೂಡ ಡಿಪ್ಲೋಮಾ ವನ್ನು ಒಳ್ಳೆಯ ಅಂಕಗಳಿಂದ ಪಾಸು ಮಾಡಿದ್ದೆ ಮತ್ತು ಜಿಂದಾಲ್ ಎಂಬ ಕಂಪನಿಯಲ್ಲೂ  ಕೆಲಸ ಮಾಡಲು ಅವಕಾಶವನ್ನು ಕ್ಯಾಂಪಸ್ ಇಂಟರ್ವ್ಯೂನಲ್ಲಿ ಗಿಟ್ಟಿಸಿಕೊಂಡಿದ್ದೆ ,  ನಂಗೆ ಅಂದು ಸಿಕ್ಕಿದ್ದ ಕೆಲಸಕ್ಕೆನೆ  ಸೇರಿಕೊಂಡು ನಮ್ಮ ಕಷ್ಟಗಳನ್ನೂ ತೀರಿಸಿಕೊಳ್ಳಬಹುದು ಎಂದು ಯೋಚನೆ  ಮಾಡಿದ್ದೆ.  ಆದರೆ ಒಂದು ಸಂಜೆ ನನ್ನ ತಂದೆ ನನಗೆ ಹೇಳಿದ್ದು ಹೀಗೆ, "ನೀನು ಚೆನ್ನಾಗಿ ಓದುತಿದ್ದಿಯಾ ನೀನಿನ್ನೂ ಓದು, ಬೇಕಿದ್ದರೆ ಇರೋ ಆಸ್ತಿಯೆಲ್ಲವನ್ನೂ 
ಮಾರಿದರೆ ಆಗುತ್ತೆ  ಮತ್ತು  ಇಂತಹ ಸಾವಿರ ಪಟ್ಟು ಆಸ್ತಿಯನ್ನು ನೀನು ಸಂಪಾದಿಸಬಹುದೆಂದು "    ಅವರ ಪ್ರೋತ್ಸಾಹದ ಮಾತುಗಳು   ಮತ್ತು ಆಶೀರ್ವಾದದ ಮೇರೆಗೆ ನಾನು ಇಂಜಿನಿಯರಿಂಗ್ ಮಾಡಲು ಒಪ್ಪಿಕೊಂಡೆ.
ಎಜುಕೇಶನ್ ಲೋನ್ ಸಿಗುತ್ತದೆ ಎಂಬ ಭರವಸೆಯ ಮೇರೆಗೆ  ಮತ್ತು ಕೆಲವರು ಮಾಡಿದ ಸಹಾಯದಿಂದ  ನಾನು ಕಾಲೇಜ್ ಸೇರಿಕೊಂಡೆ,  ನಮ್ಮ ಊರಿನ ಪಕ್ಕದಲ್ಲೇ ಇದ್ದ ಒಂದು ಬ್ಯಾಂಕ್  ನಲ್ಲಿ  ಸಾಲ ಕೇಳಲು ಹೋದಾಗ ನೀವು ಈ ಮುಂಚೆ ಕೃಷಿಗಾಗಿ ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಕಟ್ಟಿಲ್ಲ  ತಡವಾಗಿ ಕಟ್ಟಿದ್ದಿರಾ, ನಿಮ್ಮ ಮಗನಿಗೆ ಲೋನ್ ಸಿಗುವುದಿಲ್ಲ ಎಂದು ಬ್ಯಾಂಕಿನ ಒಬ್ಬ ಜವಾನ  ಯಾವುದೊ ರಾಜಕೀಯ ಕಾರಣಗಳಿಂದ  ನನ್ನ ತಂದೆಗೆ ಹೇಳಿದ್ದ,  ಆ ಸಂದರ್ಭದಲ್ಲಿ ಈ ಅವ್ಯವವಸ್ತೆಯ ಬಗ್ಗೆ ಪ್ರತಿಭಟಿಸಬೇಕು ಅನ್ನಿಸಿದರು ಕೂಡ  ಸನ್ನಿವೇಶದ ಕೈ ಗೊಂಬೆಯಾಗಿ ಸುಮ್ಮನಾದೆ. ಸರಿ ಎಂದು   ಮುಂದಿನ ಬ್ಯಾಂಕಲ್ಲಿ  ವಿಚಾರಿಸಿದಾಗ  ಆ ಬ್ಯಾಂಕಿನ  ಮ್ಯಾನೇಜರ್  ಹಲವಾರು ಬಾರಿ ಕೇಳಿಕೊಂಡಾಗ ಒಪ್ಪಿದರಂತೆ, ಸರಿ ಇನ್ನೇನು ಸಾಲ ಸಿಕ್ಕೆ ಬಿಡ್ತು  ಎಂದು ಅವರಿಗೆ ನನ್ನೆಲ್ಲಾ ಡಾಕ್ಯುಮೆಂಟ್ಸ್ಗಳನ್ನೂ  ಕೊಟ್ಟು ಮತ್ತು  2 ಲಕ್ಷ ಸಾಲ ಬೇಕೆಂಬ ಕೋರಿಕೆಯ ಪತ್ರವನ್ನು ಕೊಟ್ಟೆ ,  ಯಾವುದೇ ಬ್ಯಾಂಕ್ ಶಿಕ್ಷಣಕ್ಕಾಗಿ 4 ಲಕ್ಷಗಳವರೆಗೂ ಯಾವುದೇ ಕ್ರಯಪತ್ರ (Mortgage) ಮಾಡಿಸಿಕೊಳ್ಳದೆ  ಕೊಡಬಹುದು ಎಂದು ನಾನು ಇಂಟರ್ನೆಟ್ನಲ್ಲಿ ನೋಡಿದ್ದೇ , ಹಾಗಾಗಿ ನಂಗೆ ಲೋನ್ ಸಿಕ್ಕೇಬಿಟ್ಟಿತು ಎನ್ನುವ ಖುಷಿಯಲ್ಲಿದ್ದಾಗಲೇ  ಕಾಡಿತ್ತು ಶಾಕ್ !
ನೀವು ನಿಮ್ಮ ಜಮೀನನ್ನು ನಮ್ಮ ಬ್ಯಾಂಕಿಗೆ ಅಡಮಾನ(Mortgage) ಮಾಡಿ ಕೊಟ್ಟರೆ ಮಾತ್ರ ನಿಮಗೆ ಲೋನ್ ಕೊಡುತ್ತೇವೆಂದು ಹೇಳಿದಾಗ, ಸರಿಯೆಂದು ಅದನ್ನು  ಮಾಡಿಕೊಟ್ಟು  ನನ್ನ ಎಜುಕೇಶನ್ ಲೋನಿನ ಮೊದಲ ಕಂತು ಪಡೆಯುವದರೊಳಗೆ ಒಂದು ವರ್ಷವೇ ಮುಗಿದಿತ್ತು.  ಈ ಎಲ್ಲಾ ಹಂತಗಳನ್ನು ಹಾದು ಹೋಗುವುದೊರಳಗೆ ನನ್ನ ಮನಸ್ಸು ನೊಂದು ಒಂದು ತೀರ್ಮಾನಕ್ಕೆ ಬಂದಿತ್ತು..  ಮತ್ತೆಂದು ನಾನು ಸಾಲ ಮಾಡಿ ಉನ್ನತ ಶಿಕ್ಷಣಕ್ಕೆ  ಹೋಗಬಾರದೆಂದು.
ಕೊನೆಗೆ ನನ್ನ ಮನಸ್ಸಲ್ಲಿ ಉಳಿದ ಪ್ರಶ್ನೆ ರೈತರ ಮಕ್ಕಳಾಗಿ ನಾವು ಹುಟ್ಟಿದ್ದೇ ತಪ್ಪಾ? ಈ ಅವ್ಯವಸ್ತೆಗಳು, ನನ್ನಂತ ಅದೆಷ್ಟೋ  ಮಂದಿಯನ್ನು ಅವರವರ ಉನ್ನತ ಶಿಕ್ಷಣದ ಆಸೆಗಳನ್ನು ಬದಿಗೊತ್ತಿದೆ  ಅಲ್ಲವೇ ?
ಇದಕ್ಕೆಲ್ಲಾ  ಉತ್ತರ  ಶೈಕ್ಷಣಿಕ ಸಾಲ (Education Loan), ಈ ಸಾಲಗಳು ನಿಜಕ್ಕೂ ವಿಧ್ಯಾರ್ಥಿಗಳ ಸ್ನೇಹಿಯಲ್ಲ  ಇದರ ಬಡ್ಡಿ RBI ನಿಗದಿಪಡಿಸುವ ಬೇಸ್ ರೇಟ್ +  3.5 - 5 %  ಇರುತ್ತದೆ, ಅಂದರೆ ಅಂದಾಜು 14 %  ಇದು ಶಿಕ್ಷಣಕ್ಕಾಗಿ  ಪಡೆಯುವ ಸಾಲಕ್ಕೆ!!!   ಬಿದ್ದು ಹೋಗುವ ಮನೆಗಳನ್ನು ಕಟ್ಟಲು ಕೊಡುವ ಸಾಲಕ್ಕಿಂತಲೂ ತುಟ್ಟಿಯಾಯಿತಲ್ಲ, ಈ ಪರಿಸ್ಥಿತಿ 
ಜನ-ಸಾಮಾನ್ಯರ ಮಕ್ಕಳನ್ನು ಓದಿಸಲು ಉತ್ತೆಜನವಾ?  ಅಥವಾ ಇದರ ಬಗ್ಗೆ ಹಿಂದಿನ ಸರ್ಕಾರಗಳಂತು ಒಳ್ಳೆ ಯೋಜನೆಗಳನ್ನು ಇಲ್ಲಿಯತನಕ ಜಾರಿಗೊಳಿಸಿಲ್ಲಾ  ಇನ್ನಾದರೂ ಈ ಬಗ್ಗೆ ಕಾಳಜಿಯಿಂದ ಹೊಸ ನೀತಿಯನ್ನು ಸೃಷ್ಟಿಸುವ ಅವಶ್ಯಕತೆಯಿದೆ ಮತ್ತು ವಿಧ್ಯಾರ್ಥಿಗಳಿಗೆ ತೊಂದರೆ ಆಗದೆ ಇರುವ  ರೀತಿಯಲ್ಲಿ  ಸರಳವಾದ ವಿಧಾನವನ್ನು ಸಾಲ ವಿತರಿಸಲು ಅನುಸರಿಸಬೇಕು.
  

ಸೂಚನೆ : ಅಕ್ಷರಗಳು ತಪ್ಪಿದ್ದಲ್ಲಿ ಕ್ಷಮಿಸಿ :) 

http://gnanadarshu.blogspot.com/2014/06/EducationalLoans-inIndia.html
 

ಧನ್ಯವಾದಗಳು

 

Comments

Submitted by Darshan Kumar Wed, 06/11/2014 - 23:03

In reply to by ಉಉನಾಶೆ

ನಮ್ಮ ನಿಮ್ಮಂತೆ ಎಜುಕೇಶನ್ ಲೋನ್-ಗಾಗಿ ಒದ್ದಾಡಿದವರ ಸಂಖ್ಯೆ ಬಹಳಷ್ಟು ಇದೆ ಮತ್ತು ಇಂದಿನ ಬಡ್ಡಿ ದರಗಳು ಕೂಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆಯೂ ಕೂಡ ಇಲ್ಲ !