'ಸಂಪದ' ಮೊಬೈಲ್ ಆಪ್ ಕುರಿತು
ಬರಹ
ಮೂರು ವರ್ಷಗಳ ಹಿಂದೆ ನಾನು ನಡೆಸುವಲ್ಲಿ ಸಹಾಯ ಮಾಡುತ್ತಿರುವ ಕಂಪೆನಿ "ಸಾರಂಗ"ದ ವತಿಯಿಂದ ತಾಂತ್ರಿಕ ತರಬೇತಿ ನೀಡುತ್ತಿರುವ ಸಮಯ "ಸಂಪದದ್ದೇ ಮೊಬೈಲ್ ಆಪ್ ಯಾಕೆ ಮಾಡಬಾರದು?" ಎಂಬ ಮಾತು ಬಂದಿತ್ತು. ಆಗ ಕೈಗೆತ್ತಿಕೊಂಡ ಈ ಕೆಲಸ ನಂತರ ಹಲವು ಆವೃತ್ತಿಗಳನ್ನು ಕಂಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಕನ್ನಡಿಗರ ಮೊಬೈಲು, ಟ್ಯಾಬ್ಲೆಟ್ಟುಗಳಲ್ಲಿ ಸಂಪದ ಇದೆಯೆಂಬುದು ಸಂಪದಿಗರೆಲ್ಲರಿಗೂ ಖುಷಿ ತರುವ ಸಂಗತಿ.
ಈಗ, ಸಂಪದಕ್ಕೆ ಹತ್ತು ವರ್ಷಗಳಾದ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಹೊಸತೊಂದು ಆಪ್ ಕನ್ನಡಿಗರೆಲ್ಲರಿಗೂ ಲಭ್ಯವಾಗಿದೆ. ಸಂಪದ ಓದಲು, ಸಂಪದದಲ್ಲಿ ಪಾಲ್ಗೊಳ್ಳಲು ಇದು ಸಹಕಾರಿಯಾಗುವುದೆಂದು ನಮ್ಮ ಅಭಿಲಾಷೆ.