ತೃಪ್ತ - ಲಕ್ಷ್ಮೀಕಾಂತ ಇಟ್ನಾಳ

ತೃಪ್ತ - ಲಕ್ಷ್ಮೀಕಾಂತ ಇಟ್ನಾಳ

               

ತೃಪ್ತ     

ಊರ ದಾರಿಯಲಿ ಹುಡುಕುತ್ತ ಬಂದ
ಬಾಲ್ಯದ ಗೆಳೆಯನೊಬ್ಬ,
ನನಗೆ ಕುಸ್ತಿ ಕಲಿಸಿದ ಪೈಲ್ವಾನ ಅವ
ಸಣಕಲನೀಗ,
ಸಾಯಲೂ ದುಡ್ಡಿಲ್ಲ,
ಸತ್ತರೆ ಮಣ್ಣಿಗೂ!
ಏನಾದರೂ ಮಾಡು ಎಂದ,
ನಾನೋ, ಹೆಳವ ಅವನ ಮುಂದೆ, ಜೇಬಿಲ್ಲದ ಫಕೀರ
ಮತ್ತೊಮ್ಮೆ  ನನ್ನನ್ನು ಮುಟ್ಟದೇ ಚಿತ್ ಮಾಡಿದ್ದ!

ಕಣ್ಣುಗಳ ಕಟ್ಟೆ ಒಡೆಯಿತು,  ತಬ್ಬಿಕೊಂಡು ಅತ್ತುಬಿಟ್ಟೆ
ಇಷ್ಟು ಸಾಕೆಂದ! ಹೊರಟೇ ಬಿಟ್ಟ!

ಸುದ್ದಿ ಕೇಳಿದೆ, ಅವ ಈಗ ನೆನಪಷ್ಟೆ!

 

!

Rating
No votes yet

Comments

Submitted by nageshamysore Sat, 07/12/2014 - 09:50

ಇಟ್ನಾಳರೆ ನಮಸ್ಕಾರ,
.
ತೃಪ್ತಿಯಾಳ ಅಗಲದುದ್ದಕ್ಕೂ ಹುಡುಕಿದರೂ ಅಲ್ಲಿಯೂ ಅತೃಪ್ತಿಯೆ ಸಿಗಬಹುದಾದ ಕಾಲಧರ್ಮದಲ್ಲಿ ಈ ಕವನದ ಗೆಳೆಯನ ತೃಪ್ತಿಯ ಅಪಾರ ಅಳತೆಗೆ ಸಿಗದ ವ್ಯಾಪ್ತಿಯುಳ್ಳದ್ದು - ನಿಮ್ಮೀ ಕವನದ ಹಾಗೆ!

Submitted by lpitnal Mon, 07/14/2014 - 13:37

In reply to by naveengkn

ನವೀನ ಜಿ ಕೆ ರವರೇ, ಹೌದು, ತಮ್ಮ ಮೌನವೇ ಎಲ್ಲವನ್ನೂ ಹೇಳುತ್ತಿದೆ. ಪ್ರತಿಕ್ರಿಯೆಗೆ ಹಾಗೂ ಮೌನದ ಮೆಚ್ಚುಗೆಗೆ ಧನ್ಯವಾದಗಳು