ಹುತ್ತದ ಸುತ್ತ..

Submitted by ಗಣೇಶ on Sun, 07/13/2014 - 21:09
ಚಿತ್ರ

ಸೆಕ್ಯುರಿಟಿ ಗಾರ್ಡ್‌ನ ಕಣ್ಣುತಪ್ಪಿಸಿ ಕಾರ್ ಪಾರ್ಕಿಂಗ್ ಏರಿಯಾಕ್ಕೆ ಈ "ಕಪ್ಪೆ ಮರಿ"(ಚಿತ್ರ ೧)  ಬಂದಿತ್ತು. ಅದನ್ನು ಕೈಯಲ್ಲಿ ಎತ್ತಿಕೊಂಡು "ನಿಮ್ಮ ಏರಿಯಾದಲ್ಲೇ ನಮ್ಮ ಬಿಲ್ಡಿಂಗ್ ಎದ್ದಿರುವುದು. ನಿನ್ನ ಅಪ್ಪ, ಅಮ್ಮನಿಗೆ ಬೇರೆ ಏರಿಯಾಗೆ ಹೋಗಲು ಹೇಳು. ಪುನಃ ಎಲ್ಲಾದರೂ ಇಲ್ಲಿಗೆ ಬಂದರೆ ಅಪ್ಪಚ್ಚಿಯಾಗುವೆ" ಎಂದು ಎಚ್ಚರಿಕೆ ಹೇಳಿ, ಸುರಕ್ಷಿತ ಸ್ಥಳದಲ್ಲಿ ಬಿಟ್ಟು ಬಂದೆನು.
 ರಸ್ತೆಯ ಎರಡೂ ದಿಕ್ಕಿನಲ್ಲಿ ವೇಗವಾಗಿ ವಾಹನಗಳು ಹೋಗುತ್ತಿದ್ದವು. ನಾಯಿಯೊಂದು ನನ್ನ ಪಕ್ಕದಲ್ಲಿ ಬಂದು ನಿಂತು ದೀನವಾಗಿ ಕಣ್ಣಲ್ಲೇ "ರಸ್ತೆ ದಾಟುವುದು ಹೇಗೆ?" ಪ್ರಶ್ನಿಸಿತು. "ಈ ವೇಗದೂತರಿಗೆ ಮಾನವರ ಬಗ್ಗೆಯೇ ಕಾಳಜಿಯಿಲ್ಲ. ಇನ್ನು ನಿನಗೆ ನಾನೇನು ಉತ್ತರಕೊಡಲಿ.." ಅಂದೆ ಕಣ್ಣಲ್ಲೇ..
ಇನ್ನೂ ೩-೪ ತಲೆಮಾರು ಜನಗಳಿಗೆ ನೆರಳು ನೀಡಬಲ್ಲ ತಾಕತ್ತಿದ್ದ ಮರವನ್ನು ಧರೆಗುರುಳಿಸಿದ್ದರು. ಕೊನೆಯುಸಿರೆಳುಯುತ್ತಾ "ನನ್ನಿಂದಾದ ತಪ್ಪೇನು?" ಎಂದು ಮರವನ್ನು ಉಳಿಸಲಾಗದೇ ಹೇಡಿಯಂತೆ ಅಲ್ಲಿ ನಿಂತಿದ್ದ ನನ್ನನ್ನು ಕೇಳಿತು. "ಅಭಿವೃದ್ಧಿಗೆ ನಿನ್ನಂತಹವರ ಬಲಿಯಾಗಲೇಬೇಕು" ಎಂದು ಮುಖತಿರುಗಿಸಿ ಬಂದೆ.
 ಮರಗಿಡ ಬಿಡಿ, ಇನ್ನು ಬಡಪ್ರಾಣಿಗಳು, ಬಡವರು ಬೆಂಗಳೂರಲ್ಲಿ ವಾಸಿಸಲು ಸಾಧ್ಯವಿಲ್ಲ ಎಂದು ಯೋಚಿಸುತ್ತಾ ಬರುವಾಗ ರಸ್ತೆ ಪಕ್ಕದಲ್ಲೇ ಇದ್ದ ಈ ಹುತ್ತ (ಚಿತ್ರ ೨) ಕಂಡಿತು. ಈ ಏರಿಯಾದಲ್ಲಿ ಈಗಿನ ದರದಂತೆ ಸ್ಕ್ವೇರ್ ಫೀಟ್‌ಗೆ ಎರಡು ಸಾವಿರ ರೂ. ಬಿ.ಬಿ.ಎಂ.ಪಿ ಕಣ್ತಪ್ಪಿಸಿ ರಸ್ತೆಯಲ್ಲೇ ಹುತ್ತಕಟ್ಟಿಕೊಂಡು ಹಾಯಾಗಿದ್ದಾವಲ್ಲಾ! :) ಇನ್ನೊಂದು ಕಡೆ ಹುತ್ತಕ್ಕೆ ದಾರ ಸುತ್ತಿ ಪೂಜೆ ಇತ್ಯಾದಿ ಮಾಡಿದ್ದು ಕಂಡಿತು. ಪುಟಾಣಿಯಿಂದ ಆಳೆತ್ತರದ ಹುತ್ತಗಳಿದ್ದರೂ ಒಂದಕ್ಕಿಂತ ಒಂದು ಭಿನ್ನ. ಆರ್ಕಿಟೆಕ್ಟ್ ಯಾರೋ? ಮೇಸ್ತ್ರಿ ಯಾರೋ? :)
ಬಗ್ಗಿ ಎದ್ದು ವಿವಿಧ ಏಂಗ್‌ಲ್‌ನಲ್ಲಿ ಹುತ್ತದ ಫೋಟೋ ತೆಗೆಯುತ್ತಿದ್ದೆ.  " ಏನ್ರೀ ಗಣೇಶರೆ, ಸರ್ಪದೋಷ ಏನಾದರೂ ತಾಗಿದೆಯಾ? ಹುತ್ತಕ್ಕೆ ಸುತ್ತು ಹಾಕುತ್ತಿದ್ದೀರಾ?" ಅಂತ ಕೇಳಿದವರು ಯಾರು ಅಂತ ನೋಡಿದರೆ ಹಳೇ ಮಿತ್ರ ನಾಗೇಂದ್ರರು. "ನೀವು ಸಿಗದೇ ಬಹಳ ದಿನವಾಯಿತಲ್ಲಾ, ಇಲ್ಲೇನಾದರೂ ಸೇರಿಕೊಂಡಿದ್ದೀರಾ ಅಂತ ಹುಡುಕುತ್ತಿದ್ದೆ" ಅಂದೆ.:) ಹಾಗೇ ನಮ್ಮ ಮಾತು ಮನೆ, ಮಕ್ಕಳು, ಮಳೆ, ಬೆಳೆ, ಹಾವು, ಹುತ್ತ, ಮೂಢನಂಬಿಕೆ ಸುತ್ತ ಸುತ್ತಿತು. ಹಾವುಗಳು ಇರಬಹುದು, ಜಾಗ್ರತೆ ಮಾಡಿಕೊಳ್ಳಿ ಎಂದು ಹೇಳಿ ಅವರು ಹೋದರು. ಹುತ್ತದಲ್ಲಿ ಹಾವು ಇರುತ್ತೋ ಇಲ್ಲವೋ, ಹಾವಿನ ಬಗ್ಗೆ ಭಕ್ತಿ ಇರುವುದರಿಂದ ಹುತ್ತದ ಉಳಿವು.
 ಸಿಮೆಂಟು ಇಟ್ಟಿಗೆಯಲ್ಲಿ ಕಟ್ಟಿದ ಮನೆ, ಬ್ರಿಡ್ಜ್‌ಗಳೇ ಮಳೆನೀರಿಗೆ ಕೊಚ್ಚಿ ಹೋಗುವುದು. ಹುತ್ತ ಮಾತ್ರ ಎಲ್ಲಾ ನೀರನ್ನು ಭೂಮಿಯಡಿಗೆ ಸಾಗಿಸಿ ತಲೆ ಎತ್ತಿ ನಿಂತಿರುವುದು. ಭೂಮಿ ಮೇಲೆ ಆಳೆತ್ತರ ಇರುವ ಈ ಹುತ್ತಗಳು ಭೂಮಿಯಡಿಯಲ್ಲಿ ಇನ್ನೆಷ್ಟು ಆಳಕ್ಕಿರಬಹುದೋ ಎಂಬ ಕುತೂಹಲ....
 ಹುತ್ತದೊಳಗೆ ಕೈಹಾಕಿ...
 ನೋಡಲು ಹೋಗಲಿಲ್ಲ- ಗೂಗ್‌ಲ್ ಸರ್ಚ್ ಮಾಡಿದಾಗ ಕೆಲವು ವಿಷಯಗಳು ಸಿಕ್ಕಿದವು-
http://www.dump.com/biggestant/
http://inhabitat.com/building-modelled-on-termites-eastgate-centre-in-zi...
http://www.prajavani.net/show_page.php?nid=212062
http://www.daijiworld.com/news/news_disp.asp?n_id=127337
 

Rating
No votes yet

Comments

nageshamysore

Mon, 07/14/2014 - 03:33

ಗಣೇಶ್ ಜಿ ನಮಸ್ಕಾರ. ಹುತ್ತದೊಳಗೇನಿದೆಯೆಂಬ ಕುತೂಹಲ ತಣಿಸುವ ಸಚಿತ್ರ ಮಾಹಿತಿ - ಅದರಲ್ಲೂ ವಿಡಿಯೋ ಲಿಂಕಿನ ಹುತ್ತದ ಹಿಂದಿನ ಇಂಜಿನಿಯರಿಂಗ್ ಮಾಹಿತಿಯಂತೂ ಅದ್ಭುತ !

ನಾಗೇಶರೆ, ಹುತ್ತದ ಹಿಂದಿನ ಇಂಜಿನಿಯರಿಂಗ್ ಮಾಹಿತಿಯ ಹಾಗೇ ಈ ಲಿಂಕ್ ಸಹ ನೋಡಿ- ಕಲೆಯೋ ಕೊಲೆಯೋ ನೀವೇ ನಿರ್ಧರಿಸಿ- http://digg.com/video/what-you-get-when-you-pour-molten-aluminum-into-an...

kavinagaraj

Mon, 07/14/2014 - 08:40

ಬಹಳ ಇಷ್ಟವಾಯಿತು. ನೀವು ಕಪ್ಪೆಮರಿಯನ್ನು ಸುರಕ್ಷಿತ ಸ್ಥಳದಲ್ಲಿ ಬಿಟ್ಟು ಬಂದದ್ದು ಅತೀವ ಸಂತಸ ನೀಡಿತು. ಧನ್ಯವಾದ ಮತ್ತು ಅಭಿನಂದನೆಗಳು, ಗಣೇಶರೇ.

naveengkn

Mon, 07/14/2014 - 09:22

ಗಣೇಶರೇ, ಹುತ್ತವನ್ನು ಜಾಲಾಡಿದ‌ ಹುಮ್ಮಸ್ಸು ಚೆನ್ನಾಗಿದೆ, ಕಪ್ಪೆ ಮರಿಯನ್ನು ಸುರಕ್ಷಿತ‌ ಸ್ಥಳಕ್ಕೆ ಬಿಟ್ಟು ಒಳ್ಳೆ ಕೆಲಸ‌ ಮಾಡಿದಿರಿ, ಧನ್ಯವಾದಗಳು,,,,

ಆ ದಿನವೇ ಪ್ರಥಮ ಬಾರಿಗೆ ಕಪ್ಪೆಯನ್ನು ನೋಡಿದ ನಮ್ಮ ಫ್ಲಾಟ್‌ನ ೩-೪ ಪುಟಾಣಿ ಮಕ್ಕಳಿಗೆ ಖುಷಿಯೋ ಖುಷಿ. ತೆಗೆದುಕೊಂಡು ಹೋಗಲು ಒಪ್ಪಲೇ ಇಲ್ಲ. ಅದರ ಅಮ್ಮನ ಬಳಿ ಹೋಗಿ ಮಾಮ್ ತಿಂದ ಮೇಲೆ ತರುವೆ ಎಂದು ಹೇಳಿದಾಗ ಬಿಟ್ಟರು. ಕವಿನಾಗರಾಜ್ ಹಾಗೂ ನವೀನರಿಗೆ ಧನ್ಯವಾದಗಳು. ಕಪ್ಪೆ ಬಗ್ಗೆ ಮಕ್ಕಳಿಗಾಗಿ ಒಂದು ಕೊಂಡಿ- https://www.youtube.com/watch?v=oMFxQsaT274&feature=youtu.be