ASCII ಫಾಂಟ್ ನಲ್ಲಿರುವ ಕನ್ನಡವನ್ನು ಓದಲು ಆಗುತ್ತಿಲ್ಲವೇ ?

ASCII ಫಾಂಟ್ ನಲ್ಲಿರುವ ಕನ್ನಡವನ್ನು ಓದಲು ಆಗುತ್ತಿಲ್ಲವೇ ?

ನಾನು ನನ್ನ ಪರ್ಸನಲ್  ಕಂಪ್ಯೂಟರಿನಲ್ಲಿ ಲೀನಕ್ಸ್ ನ ಉಬುಂಟು ವನ್ನು ಹಾಕಿಕೊಂಡು  ಬಳಸುತ್ತಿದ್ದೇನೆ. ಬಹುತೇಕ ಕನ್ನಡ ತಾಣಗಳು ಉಬುಂತುವಲ್ಲಿ ಇರುವುವಾದರೂ ಅಲ್ಲೊಂದು ಇಲ್ಲೊಂದು ವೆಬ್ ಪುಟಗಳು  ಬರಹವನ್ನೋ ನುಡಿಯನ್ನೋ ಅಥವಾ ಮತ್ತಾವುದನ್ನೋ ಬಳಸಿ ಬರೆದವಾದಲ್ಲಿ  ಓದಲೇ ಆಗುತ್ತಿರಲಿಲ್ಲ .  ಬಹುಶಃ ವಿಂಡೋಸ್ ನಲ್ಲಿ ಕೂಡ ಸಂಬಂಧಪಟ್ಟ ಫಾಂಟ್ ಇಲ್ಲದಿದ್ದರೆ ಅಲ್ಲೂ ಕಾಣಿಸಲಿಕ್ಕಿಲ್ಲ.    ಅಂಥ ಸಮಯದಲ್ಲಿ

ಇವತ್ತು  ಗೂಗಲ್ ನಲ್ಲಿ ಹುಡುಕಿದಾಗ ಸಿಕ್ಕ ಕೊಂಡಿ ಇದು.

http://aravindavk.in/ascii2unicode/

ಆ ಪುಟದಲ್ಲಿ  ನುಡಿ/ಬರಹದಲ್ಲಿ ಬರೆದಿದ್ದನ್ನು ಯುನಿಕೋಡ್ ಕನ್ನಡಕ್ಕೆ ಬದಲಾಯಿಸಲು ಸಹಾಯ ಮಾಡುವ ತಂತ್ರಾಂಶ ಇದೆ. ಎಡಗಡೆ ಇರುವ ಜಾಗದಲ್ಲಿ ನುಡಿ/ಬರಹ ದಲ್ಲಿ ಬರೆದ ಪಠ್ಯವನ್ನು ಹಾಕಿ ನಂತರ ಕನ್ವರ್ಟ್ ಅಂತ ಇರುವ ಬಟನ್ ಒತ್ತಿ. ಪಕ್ಕದ ಜಾಗದಲ್ಲಿ ಯುನಿಕೋಡ್ ಗೆ ಬದಲಾವಣೆಗೊಂಡು ಕಾಣಿಸುತ್ತದೆ.

ಅರವಿಂದರಿಗೆ ತುಂಬಾಆಆಆಆಆಆಆ  ಧನ್ಯವಾದಗಳು.

 

 

 

 

Rating
No votes yet

Comments

Submitted by makara Sat, 07/19/2014 - 22:14

ಮಿಶ್ರಿಕೋಟಿಗಳೆ,
ಇದರ ಬಗ್ಗೆ ಸಂಪದದಲ್ಲೇ ಮಾಹಿತಿ ಇತ್ತು. ಅದನ್ನು ಆದರಿಸಿಯೇ ನಾನು ಬರಹದಿಂದ ಬರೆದ ಬರಹಗಳನ್ನು ವರ್ಡ್‌ಗೆ ಬದಲಾಯಿಸಿದ್ದೇನೆ; ನನ್ನ ಕೆಲವು ಬ್ಲಾಗ್ ಮಿತ್ರರಿಗಾಗಿ. ಇದನ್ನು ಬೇರೆಯವರಿಗೂ ತಿಳಿಯುವಂತೆ ಮಾಡಿ ಅರವಿಂದ್ ಅವರ ಶ್ರಮವನ್ನು ಸಾರ್ಥಕಗೊಳಿಸಿದ್ದೀರ.