ಮೈಸೂರು ಪಾಕು ಮೈಸೂರು ಮಲ್ಲಿಗೆ !
ಚಿತ್ರ


ರವಿಯೋಡುತಲಿದ್ದ ಪಡುವಣದ ಕಡಲಲ್ಲಿ
ಮುಳುಗುತೇಳುತ ಪವಡಿಸುವ ಕನಸಲ್ಲಿ!
ಕಠಿಣ ಬಾಳಹಾದಿಯ ನಿತ್ಯಸಂಘರ್ಷದಲ್ಲಿ
ಮನೆ ತಲುಪುವುದು ತಡವಾಗುವುದಲ್ಲಿ !
ಕಾದು ಸೋತಿಹಳು ಮನದೊಡತಿಯಲ್ಲಿ
ಮಾತಿರದ ಮೂಕ ತಲೆಬಾಗಿಲಿನಲ್ಲಿ!
ಹಲವು ಸೂಕ್ಷ್ಮ ಯೋಚನೆಗಳ ಭರದಲ್ಲಿ
ಮನೆಯೊಡೆಯ ಬರುತಲಿಹ ಕಾತರದಲ್ಲಿ!
ಬಾಳಗೆಳತಿಯ ಮುನಿಸ ಕಳೆವಾಸೆಯಲ್ಲಿ
ಕೊಂಡನವನು ಹಾದಿಯಂಗಡಿಯಲ್ಲಿ!
ಇಬ್ಬರಲು ಪ್ರೇಮದ ನಗೆಯು ಉಕ್ಕುವುದಲ್ಲಿ
ಮೈಸೂರು ಪಾಕು ಮೈಸೂರು ಮಲ್ಲಿಗೆಯಲ್ಲಿ!
(ಚಿತ್ರಗಳು: ಅಂತರ್ಜಾಲದಿಂದ)
Rating
Comments
ಉ: ಮೈಸೂರು ಪಾಕು ಮೈಸೂರು ಮಲ್ಲಿಗೆ !
ಒಂದು ಮಲ್ಲಿಗೆ ಮಲ್ಲಿ ಗೆ! ಮೈಸೂರು ಪಾಕು ಮೈ ಸೂರಿಗೆ!!