ಹಾಗೆ ಮೂಡಿದ ಸಾಲುಗಳು

ಹಾಗೆ ಮೂಡಿದ ಸಾಲುಗಳು

ರೈಲು ಪ್ರಯಾಣದರ ಹೆಚ್ಚಿಸಿದಾಗ ಕೆಲವರು ಒಳ್ಳೆಯ ದಿನಗಳು ಅಂದರೆ ಇದೇನಾ ಎಂದು ಅಣಕವಾಡಿದರು.ಅವರಿಗೆ ನಾನು ಹೇಳುವುದೇನೆಂದರೆ ಈಗ ಸರ್ಕಾರ ಪೆಟ್ರೋಲ್ ಬೆಲೆ ಸ್ವಲ್ಪ ಕಡಿಮೆ ಮಾಡಿದೆ ಹಾಗಂತ ಇದನ್ನ ನೀವು ಒಳ್ಳೆಯ ದಿನ ಅಂತ ಒಪ್ಪುತ್ತೀರ? ಸರ್ಕಾರ ಬಂದು ಕೇವಲ ೮೦ ದಿನಗಳಗಿವೆ.ದಶಕದಿಂದ ದೇಶದ ಆರ್ಥಿಕತೆಗೆ ಮಂಕು ಕವಿದಿದೆ ಅದನ್ನು ಪುನಶ್ಚೇತನಗೊಳಿಸಿ ಹಳಿಗೆ ತರಲು ಸ್ವಲ್ಪ ಸಮಯಬೇಕಲ್ಲವೇ?ಶತಾಯಗತಾಯ ವಿರೋಧಿಸಲೆಬೇಕೆಂದರೆ ಕಾರಣಗಳು ಬೇಕಾದಷ್ಟು ಸಿಗುತ್ತವೆ. -ಎಸ್.ಕೆ

Rating
No votes yet

Comments

Submitted by anand33 Sat, 08/16/2014 - 09:14

ಪೆಟ್ರೋಲ್ ಬೆಲೆ ಕಡಿಮೆ ಮಾಡಿರುವುದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಕಡಿಮೆಯಾಗಿರುವ ಕಾರಣದಿಂದಲೇ ಹೊರತು ಈಗಿನ ಕೇಂದ್ರ ಸರ್ಕಾರದ ಕಾರಣದಿಂದ ಅಲ್ಲ. ಮುಕ್ತ ಮಾರುಕಟ್ಟೆಗೆ ಹೊಂದಿಕೊಂಡು ಬೆಲೆ ಏರಿಳಿತ ಮಾಡುವ ನೀತಿಯ ಅನುಸಾರ ಬೆಲೆ ಇಳಿತ ಮಾಡಲಾಗಿದೆ ಅಷ್ಟೇ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾದರೆ ಮತ್ತೆ ಪೆಟ್ರೋಲ್ ಬೆಲೆ ಏರಬಹುದು. ಹೀಗಾಗಿ ಈಗಿನ ಬೆಲೆ ಇಳಿಕೆಯನ್ನು ಒಳ್ಳೆಯ ದಿನ ಎಂದು ಹೇಳಲಾಗದು. ಡಾಲರ್ ವಿರುದ್ಧ ರೂಪಾಯಿ ಬೆಲೆಯಲ್ಲಿ ಹೇಳಿಕೊಳ್ಳುವಂಥ ಹೆಚ್ಚಳವೇನೂ ಆಗಿಲ್ಲ. ಹೀಗಾಗಿ ಬೆಲೆ ಏರಿಕೆಯ ಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆ ಕಾಣಲಾರದು. ಪೆಟ್ರೋಲ್ ಬೆಲೆಯಲ್ಲಿ ಇಳಿಕೆಯಾಗಿದೆಯೇ ಹೊರತು ಡೀಸೆಲ್ ಬೆಲೆಯಲ್ಲಿ ಆಗಿಲ್ಲ. ಡೀಸೆಲ್ ಬೆಲೆಯಲ್ಲಿ ಇಳಿಕೆಯಾದರೆ ಮಾತ್ರ ಅದರ ಪರಿಣಾಮ ಬೆಲೆ ಇಳಿಕೆಯಲ್ಲಿ ಆಗುತ್ತದೆ. ಡೀಸೆಲ್ ಬೆಲೆಯನ್ನು ಮುಕ್ತ ಮಾರುಕಟ್ಟೆ ದರಕ್ಕೆ ತರುವ ನೀತಿಯ ಅನುಸಾರ ಡೀಸೆಲ್ ಬೆಲೆ ತಿಂಗಳು ತಿಂಗಳು ಹೆಚ್ಚುತ್ತಲೇ ಇದ್ದು ಬೆಲೆ ಏರಿಕೆಯೂ ತಿಂಗಳು ತಿಂಗಳು ಹೆಚ್ಚುತ್ತಲೇ ಇರುತ್ತದೆ. ಹೀಗಾಗಿ ಇದರಿಂದ ಜನರಿಗೆ ಮುಕ್ತಿ ಇಲ್ಲ.