ಓಲವು......

ಓಲವು......

ಮಕ್ಕಳೇ ಹಾಗೆ.... ಅಪ್ಪ-ಅಮ್ಮಂದಿರ ಮಾತನ್ನು ಎಂದೂ ಕೇಳರು (ಕೆಲವರನ್ನು ಬಿಟ್ಟು). ಜಗತ್ತೆ ತಮ್ಮ ಸುತ್ತ ಸುತ್ತುತಿದೆ ಎನ್ನುವ ಭ್ರಮೆ! ಹಡೆದು,ತೊಳೆದು, ಮುದ್ದಿಸಿ, ಪ್ರೀತಿಯಿಂದ ಬೆಳಸಿದ ಮಕ್ಕಳಿಗೆ ಅಪ್ಪ-ಅಮ್ಮಂದಿರ ಮಾತಿನ ಒಲವು ಅದ್ಯಾಕೋ ಕಹಿಯಾಗಿಯೇ ಕಾಣುತ್ತದೆ. ಎಂದಿಗೂ ಅವರು ನಮಗೆ ಕೆಡುಕ್ಕನು ಬಯಸುವುದಿಲ್ಲ ಎಂದರಿಯಲು ಕೆಲವೊಮ್ಮೆ ಬಹಳ ದಿನಗಳೇ ಹಿಡಿಯುತ್ತದೆ! ಬಾನಿನ,ಧರೆಯ ಹಾಗೂ ಬೆಳಕಿನ ಒಲವು ಎಲ್ಲರ ಮೇಲೆ ಹೇಗೆ ನಿರಂತರ ಹಾಗೂ ಅಮ್ಮೊಲ್ಯವೋ ಹಾಗೆಯೇ ಪೋಷಕರ ಪ್ರೀತಿ ಮಕ್ಕಳ ಮೇಲೆ.

ಹೀಗೊಬ್ಬ ಅಮ್ಮ ಮತ್ತು ಆಕೆಯ ಮಗ….

.

.

ಇತರೆಲ್ಲ  ಜೀವಿಗಳಿಗಿಂತ ತೀರಾ ಭಿನ್ನ ಮತ್ತು ಅಷ್ಟೇ ಕ್ರ್ರೊರಿಯಾಗಿರುವ ಮಾನವನ ಕಂಡು,ನೊಂದು,ಸಿಟ್ಟಿನಿಂದ ಬೆಂದು ಸೂರ್ಯ ಪಶ್ಚಿಮದಲ್ಲಿ ವಿಲೀನನಾದ. "ಬಾನಿಗೊಂದು ಎಲ್ಲೇ ಎಲ್ಲಿದೆ...." Dr.ರಾಜ್ ರ ಅರ್ಥಪೂರ್ಣ ಹಾಡನ್ನು ಕೇಳಿ, ಬಾನಿನ ಎಲ್ಲೇ ಕಾಣದೆ ಮಗ ಕೆಳಗಿಳಿದು ರೂಮಿಗೆ ಬಂದ. ಮುಂದುವರೆದ ತಂತ್ರಜ್ಞಾನದ ಸಬೂತಿಗೆಂದೇ ಎರೆಡೆರಡು ಮೊಬೈಲ್ಗಳನ್ನು ಹೊಂದಿದ್ದರೂ, ವಾರಕೊಮ್ಮೆಯೂ ಅಮ್ಮನಿಗೆ ಈತ ಫೋನ್ ಮಾಡಲಾರ. ಅದೇನೋ ಇಂದು ಮನಸ್ಸಾಗಿ ಅಮ್ಮನ ನಂಬರಿಗೆ ರಿಂಗಾಯಿಸಿದ. "ಹಲೋ..." ಎಂದ ಆಕೆಯ ದ್ವನಿಯಲ್ಲಿ ಇದು ಮಗನದೇ ಕಾಲ್ ಎಂಬ ನಂಬಿಕೆ ಇತ್ತು. (ಮುಂದುವರೆದ ತಂತ್ರಜ್ಞಾನದ ಸಬೂತಿಗೆ ಮಗ ವಾರಕ್ಕೊಂದು ಸಿಮ್ ಕಾರ್ಡ್ಗಳನ್ನು ಬದಲಾಹಿಸುತಿದ್ದ) ……ಕೇಳಿದ ಪ್ರೆಶ್ನೆಗಳನ್ನೇ ಕೇಳಿ ಬೇಜಾರಾಗಿದ್ದ ಮಗ ,ಮತ್ತದೆ ಪ್ರೆಶ್ನೆಗಳನ್ನು ಬೇಕೋ ಬೇಡದಂತೆ ಕೇಳಿದ. ಮಾಡಿದ ಅಡಿಗೆಯಿಂದಿಡಿದು ಊರಿನ ಮಳೆಯವರೆಗೂ ಅಮ್ಮ ಎಲ್ಲಾ ಪ್ರೆಶ್ನೆಗಳಿಗೂ ಖುಷಿಯಿಂದ ಉತ್ತರಿಸಿದಳು.

ಮುಂದಿನ ತಿಂಗಳಿದ್ದ ಸಂಭಂದಿಯ ಮದುವೆಗೆ ಬರುವುದಾಗಿ, ಟಿಕೆಟ್ ಅನ್ನು ಇಂದೇ ಕಾಯಿದಿರುಸುವುದಾಗಿ ಹೇಳಿದ ಮಗನ ಮಾತಿಗೆ ಸಿಡುಕಿದ ಅಮ್ಮ "ಅವ್ರ ಯಾರ್ ಮದ್ವೆಗೂ, ಯಾವುದೇ functionಗೂ ನೀನು ಹೋಗೋ ಕೂಡದು!" ಅಂತ ಕಡಾ-ಖಂಡಿತವಾಗಿ ಹೇಳಿದಳು. ಅಮ್ಮನ ಆ ಕಟೋರ ಮಾತುಗಳಿಗೆ ಮಗನ ಕೋಪ ನೆತ್ತಿಗೇರಿತು. ಏಕೆ ಹಾಗಂದಳು ಅನ್ನುವುದನ್ನು ಕೇಳದೆ ಮಗ, "ನಾನು ಎಲ್ಲಾ ನಿನ್ನನೇ ಕೇಳಿ ಮಾಡೋಕ್ಕೆ ಇನ್ನು ಏನ್ ಹಾಲ್ ಕುಡಿಯೋ ಮಗು ಅಲ್ಲ... ನಂಗೆ ಯಾರ್ ಮದ್ವೆಗೆ ಹೋಗ್ಬೇಕು, ಹೊಗ್ ಬಾರದು ಅಂತ ಗೊತ್ತು" ಎಂದು ಕಿರುಚಿದ. ಮೀಸೆ ಕಪ್ಪಾಗಿ, ತಾನು ಎಲ್ಲಾ ಬಲ್ಲವನೆಂಬ ಅಹಂ ಆ ಉತ್ತರದಲ್ಲಿತ್ತು!

"ನೀನು ಯಾರ್ದೋ ಮದ್ವೆ ಅಂತ ಇಲ್ ಬಂದು, ಕುಡ್ದು, ಬಿದ್ದ್ ಒದ್ದಾಡಿ ಹೋಗೋದೇನು ಬೇಡ..." ಅಮ್ಮ ಅಂದಳು.

"ಅದೇನ್ ಒಳ್ಳೆ,  ಕೆಲ್ಸದ ಜನ ಕೂಗ್ ಹಂಗೆ  ಕೂಗ್ಥಿಯ!!" ಹೇಳುವ ಮೊದಲು ಕೊಂಚವೂ ಮಗ ಯೋಚಿಸಲಿಲ್ಲ. ಆತನ ಕೂಗಿಗೆ  ರೂಮ ತುಂಬೆಲ್ಲ ಪ್ರತಿದ್ವನಿ ರಾರಾಜಿಸಿತು. ಪಕ್ಕದ ಮನೆಯ ನಾಯಿಯೂ ಬೊಗೊಳುವುದನ್ನು ನಿಲ್ಲಿಸಿತು!

ಆದರೂ, ಅಮ್ಮ ಮುಂದುವರೆಸಿ,"ನಿನ್ ಇಷ್ಟ ಕಣಪ್ಪ, ಬರೋದಾದ್ರೆ ಬಾ" ಬೇಕೋ ಬೇಡದಂತೆ ಹೇಳಿದಳು. ಆಫೀಸ್ನ ತನ್ನ ಸಿನಿಯರ್ ಮೇಲಿನ ಕೊಪಕ್ಕೋ, ಮನೆಗೆ ಬರಲು ಅಮ್ಮ  ಒಪ್ಪದಿದ್ದಕೋ ಏನೋ " ಕಾಲ್ ಅನ್ನು ಕಟ್ ಮಾಡದೇ ಮಗ ಮೊಬೈಲನ್ನು ದೂರಕ್ಕೆ ಎಸೆದ ….. ಫೋನಿಂದ "ಹಲೋ..ಹಲೋ..." ಎಂಬ ಅಮ್ಮನ  ಸದ್ದು ಇನ್ನು ಬರುತ್ತಲೇ ಇದ್ದಿತು.

'ಅವರು ನನ್ನ ಸಂಬಂದಿಗಳಿಗಿಂತ ಜಾಸ್ತಿ ಗೆಳೆಯರು. ಗೆಳೆತನ ಎಂದರೆ ಅಕೆಗೇನು ಗೊತ್ತು. ದಿನಾ ಟಿವಿಯಲ್ಲಿ ಬರೋ ದಾರವಾಹಿಗಳನ್ನು ನೋಡಿ ಹಾಗೆ ಮಾತಾಡುತ್ತಾಳೆ!  ತನ್ನ ಜೇಬಿಂದ ಖಾಸು ಸುರಿಸಿ ತನಗೆ ಬಿಯರ್ ಅನ್ನು ಕುಡಿಸುವ ಅವರು ತನ್ನ ಕಷ್ಟ ಕಾಲಕ್ಕೆ ನೆರವಾಗುವರು’ ಎಂದು ಮಗ ತನ್ನಲ್ಲೇ ಅಂದುಕೊಂಡ. ಕಳೆದ ಬಾರಿ ಅವರ ಮದುವೆಗೆ ಹೋಗಿದ್ದಾಗ ಅವರೊಟ್ಟಿಗೆ ಕುಡಿದು, ಮಾರನೆ ದಿನ ಮನೆಗೆ ಬಂದಿದ್ದ. ಯಾರೋ ಕೆಲಸಕ್ಕೆ ಬಾರದ ಸಂಭಂದಿಗಳು, ಕೆಲಸ ಬಂದಾಗ ಈ ರೀತಿ ತಮ್ಮ ಕೆಲಸವನ್ನು ಮಾಡಿದ್ದಾರೆ. ಬಿದ್ದ ಮೊಬೈಲನ್ನು ಎದ್ದು ಕೈಗೆತ್ತಿಗೊಂಡು ಜೇಬಿನೊಳಗೆ ಹಾಕಿದ. ಆಫೀಸೀನ ಕೆಲ ಗೆಳೆಯರೆಂದು ಕರೆಯಲ್ಪಡುವ ಸಹೋದ್ಯೋಗಿಗಳ ಬರ್ತ್ಡೇ ಪಾರ್ಟಿಗೆಂದು ಮಗ ಹೋಗಲು ರೆಡಿ ಆದ. ಪುನ್ಹ ಒಮ್ಮೆ ಅಮ್ಮನಿಗೆ ಕಾಲ್ ಮಾಡುವ ಮನಸಾದರೂ ಮಾಡದೆ ಹೊರಟ………….

ಅಷ್ಟರಲ್ಲಾಗಲೇ ಗೆಳೆಯರು ಬಂದು ವಿರಾಜಮಾನಿಸಿದ್ದರು.

ಆಫೀಸಿನಲ್ಲಿ ಎಂದೂ ಮಾತನಾಡದವರು ಇಲ್ಲಿ ಗಹಗಹಿಸಿ ನಗುತ್ತಿದ್ದರು! ಅಷ್ಟೆಲ್ಲಾ ಜನರ ಒಂದು  ದೊಡ್ಡ ವೃತ್ತ , ಮತ್ತು ಆ ವ್ತುತದ ಮದ್ಯೆ ಹಲವಾರು ಜೀವಿಗಳ ಆಸ್ತಿಪಂಜರ ಹಾಗೂ ಬಣ್ಣ ಬಣ್ಣದ ಬಾಟಲಿಗಳ ತುಂಬ ಮಾನವನ ಅದ್ಬುತ ಅನ್ವೇಷಣೆ, ಮಧ್ಯ!  ಮಗ ರೂಮಿನ ಒಳಗೆ ಹೋದ  ಕೂಡಲೇ ಸುಸ್ತಾದ ಸಿಪಾಹಿಗಳಂತೆ ಬಿದ್ದಿದ್ದ ಗೆಳೆಯರು "ಹೂ.." ಎನ್ನುತ ಕೂಗ ತೊಡಗಿದರು. ಇದು ತನಗೆ ದೊರೆತ  ಸುಸ್ವಾಗತ ಎಂದರಿತ ಮಗ ಹೋಗಿ ಒಂದು ಗೋಡೆಯನ್ನು ಒರಗಿ ವೃತದ ಡಯಾಮೀಟರ್ ಅನ್ನು ಇನ್ನು ದೊಡ್ದದಾಗಿಸಿದ. 'ಫ್ರೆಂಡ್ಸು,ಅವ್ರು ,ಇವ್ರು ಅಂತ ಹೋಗಿ ಕುಡಿಬೇಡ ಎಂದ ಅಮ್ಮನ ಮಾತು ಮಗನಿಗೆ ಎಲ್ಲೋ ಪ್ರತಿದ್ವನಿಸಿದಂತಾಯಿತು!' ಆದರೂ ಏನೂ ಕೇಳದಂತೆ ಮಗ ಒಂದು ಬಿಯರ್ನ ಬಾಟಲಿಯನ್ನು ತೆಗೆದುಕೊಂಡು ಚೀಯರ್ಸ್....! ಅಂದ.  

ಮುಂದೆನಾಹಿತು ಎಂದರಿಯುವುದರೊಳಗಾಗಲೇ ಸೂರ್ಯ ಮೇಲೆದ್ದಿದ್ದ.

ಜೋರಾಗಿ ತಲೆ ನೋಯುತ್ತಿದ್ದರಿಂದ ಹಾಗೂ ಆಫೀಸಿಗೆ ರಜೆ ಇದ್ದಿದ್ದರಿಂದ ಮಗ ಪುನಃ ಮಲಗಿದ. ಮೊಬೈಲ್ನಲ್ಲಿ ಅಮ್ಮನ ಮಿಸ್ ಕಾಲ್ ಬಂದಿರುವುದನ್ನು ನೋಡಿ, ಹಾಗೆಯೇ ಫೇಸ್ಬುಕ್ನಲ್ಲಿ ಒಂದು ಹೊಸ ವೀಡಿಯೊಗೆ ಟ್ಯಾಗ್ ಆಗಿರುವುದನ್ನೂ ಗಮನಿಸಿದ. ತುಸು ಹೊತ್ತು ಸುಮ್ಮನಾದ ಮಗ, ಸ್ವಲ್ಪ ನಿಮಿಷಗಳ ನಂತರ ಏನೋ  ನೆನಪಾಗಿ ತಕ್ಷಣ ಎದ್ದು, ಆ ವೀಡಿಯೊವನ್ನು ನೋಡಿದ. ಗೆಳೆಯರಂತೆ ವರ್ತಿಸುವ ಸಹೊದ್ಯೋಗಿಗಳು, ತಾವು ಗೆಳೆಯರಲ್ಲ ಎಂಬುದನ್ನು ಪುನಃ ಸಾಬೀತು ಮಾಡಿದ್ದರು. ಮಗ ಕುಡಿದು, ಮಾತಾಡಿ, ಅವರಿಂದ ಗೇಲಿ ಪಟ್ಟ ವೀಡಿಯೊವನ್ನು ಅಚ್ಚುಕಟ್ಟಾಗಿ ಸೆರೆ ಹಿಡಿದು ಟ್ಯಾಗ್ ಮಾಡಿ ಹಾಕಲಾಗಿತ್ತು.ಅದರೊಟ್ಟಿಗೆ ಲೈಕ್ ಹಾಗು ಕಾಮೆಂಟ್ಗಳ ಸುರಿಮಳೆಗೈಯ್ಯಲಾಗಿತ್ತು.  ಮುಂದುವರೆದ ತಂತ್ರಜ್ಞಾನದ ಮೊದಲ ಚಾಟಿ ಏಟು ಮಗನಿಗೆ ತಾಗಿ ಎಲ್ಲಿಲ್ಲದ ಕೋಪ ಮೂಡಿದರೂ, ತಾನು ಕುಡಿದಾಗ ಹೇಗಿರುತೇನೆ ಎನ್ನುವ ಅರಿವಾಯಿತು. ತನ್ನ ಆತ್ಮಾಭಿಮಾನಕ್ಕೆ ಯಾರೋ ಬಂದು ಚುಚ್ಚಿದಂತಾಯಿತು. ‘ಅಮ್ಮನ ಮಾತೂ ಎಂದಿಗೂ ತನ್ನ ಒಳಿತಿಗೆ’ ಎನ್ನುವುದರ ಅರ್ಥ ಇಂದು ಚೆನ್ನಾಗಿ ಗೊತ್ತಾಯಿತು....

ತಕ್ಷಣವೇ ಮಗ ತನ್ನ ದೂರದ  ಸಂಬಂಧಿಗೆ ಫೋನ್ ಮಾಡಿ, ಕಳೆದ ಬಾರಿ ತನ್ನ ಸಂಭಂದಿಯ ಮದುವೆಯಲ್ಲಿ ಎನಾಗಿತೆಂದು ತಿಳಿಯತೊಡಗಿದ. ಗಹಗಹಿಸಿ ನಗುತ್ತ ಆತ, ಅಂದಿನ ದಿನವನ್ನು ಎಳೆ ಎಳೆಯಾಗಿ ಹೇಳಿದ. ಮದುವೆಗೆ ಬಂದವರೆಲ್ಲ ಮಗನನ್ನು ಈ ಸ್ಥಿತಿಯಲ್ಲಿ ನೋಡಿ ಹೌಹಾರಿದರಂತೆ! ತಾನು ಈ ರೀತಿಯೂ ವರ್ತಿಸುತೆನೆಂದು ಮಗನಿಗೆ ನಂಬಲಾಗಲಿಲ್ಲ. ಎಲ್ಲ ಬಲ್ಲವನಂತೆ ಬೀಗುತಿದ್ದ ಮಗನಿಗೆ ತನ್ನ ಮೇಲೆಯೇ ನಾಚಿಕೆ ಆಯಿತು.  ಮುದ್ದಿನ ಮಗನ ಬಗ್ಗೆ ಯಾರಾದರೂ ಈ ರೀತಿ ಮಾತನಾಡಿದರೆ ಯಾವ ಅಮ್ಮನಿಗೆ ತಾನೆ ಕೋಪ ಬರುವುದಿಲ್ಲ? ಆಕೆ "ಬರಕೂಡದು" ಎನ್ನುವುದರಲ್ಲಿ ಎಷ್ಟು ನಿಜವಿತ್ತು ಎನಿಸಿತು.ಆಕೆಯ ಮೇಲೆ ಕಿರುಚದಿದಕ್ಕೆ ಮನವೂ ಕೊಂಚ ನೊಂದಿತ್ತು……..ನಿಮಿಷಗಳು ದಿನಗಳಾಗಿ ಉರುಳಿದವು!

 ತಕ್ಷಣ ತನ್ನ ಫೋನ್ ಸದ್ದು ಮಾಡತೊಡಗಿತು, ಅದು ಅಮ್ಮನದೇ ಕಾಲ್ ಇರಬಹುದು ಎಂದನಿಸಿದ ಮಗ ಹೋಗಿ ನೋಡಿದ , ಅಮ್ಮನ ಹೆಸರು ಫೋನಿನ  ಮೇಲೆ ಮೀನುಗತೊಡಗಿತ್ತು.. ನೆಮ್ಮದಿಯ ನಿಟ್ಟುಸಿರು ಮನದಲ್ಲಿ ಮೂಡಿತು….