ಬಾಲೀಶ

ಬಾಲೀಶ

 

ಕೆಲವು ಒಮ್ಮೆ ನಡೆಯುವ ಕೆಲವು ಘಟನೆಗಳು ವಿಚಿತ್ರ ಅನಿಸಿದರು , ಅದು ಒಂದು ವಿಶೇಷ ಅನುಭವ ಅಂತು ಸತ್ಯವೇ ಆಗಿರುತೆ. ಇಲ್ಲಿ ಪ್ರಸ್ತುತ ಆಗುತ್ತೀರುವ ಘಟನೆ ಸಣ್ಣದಾದರೂ ನನ್ನಗೆ ವಿಶೇಷ ಅನುಭವ ಅನ್ನೋದು ಸತ್ಯ

ನಾನು ಯಾವುದೊ ಸೆಮಿನಾರ್ ಮೇರೆಗೆ ಚೆನ್ನೈಗೆ   ಹೋಗಬೇಕೈತು. ನಾನು ಸೆಮಿನಾರ್ ಮುಗಿಸಿ ವಾಪಸು ರೈಲಿನಲ್ಲಿ ಬರಬೇಕಾಗಿ ಇತ್ತು. ನಾನು ಮಧ್ಯಾನದ ೨ ಘಂಟೆ ರೈಲಿನಲ್ಲಿ  ಬ್ಯಾಂಗಲೋರ್ ಗೆ ಬರಲು ಕೂತ್ತೆ. ನಾನು ಇದ್ದ ಬೋಗಿ ಗೆ ನಡು ವಯಸ್ಸಿನ ದಂಪತಿಗಳು ನನ್ನ ಮುಂದಿನ ಆಸಿನದಲ್ಲಿ ಬಂದು ಕುಳ್ತಿಕೊಂಡರು. ರೈಲು ಅಲ್ಲಿಂದ ಹೊರಟಿತು. ನನ್ನ ಮುಂದೆ ಆಸಿನರಾಗಿದ ದಂಪತಿಗಳು ಆಯಾಸದಿಂದ ಇರುವಂತೆ ಕಂಡಿತು. ಇಬ್ಬರು ಕೂಡ ಸುಖ ನಿದ್ರೆಯಲ್ಲಿ ತಲ್ಲಿನರಾದರು. ರೈಲು ಮುಂದಿನ ನಿಲ್ದಾಣಕ್ಕೆ ಬಂದು ನಿಂತ್ತಿತು.

ನಮ್ಮ ಬೋಗಿ ಗೆ ಒಬ್ಬರು ವಯಸ್ಸಾದ ವ್ಯಕ್ತಿ ಮತ್ತೆ ಅವರೊಂದಿಗೆ ಯುವಕನ್ನೋಬ ಬಂದರು. ನನ್ನ ಪಕ್ಕದ ಆಸನದಲ್ಲಿ ಅವರಿಬ್ಬರೂ ಬಂದು ಕುಳಿತುಕೊಂಡರು. ರೈಲು ಮುಂದೆ ಸಾಗಿತು. ರೈಲು ಹೊರಟಂತೆ ಸಿಟಿ ದೂರವಾಗಿ ಬಯಲು ಪ್ರದೇಶ ಬಂದಿತು.

ನನ್ನ ಪಕ್ಕದಲ್ಲಿ ಇದ್ದ ಯುವಕ "ಅಲ್ಲಿ ನೋಡು ಅಜ್ಜ ಗಿಳಿ , ಅಲ್ಲಿ ನೋಡು ಅಜ್ಜ ಹಸು , ಅಲ್ಲಿ ನೋಡು ಅಜ್ಜ ಅದು ಇದು ಅಂತ " ಒಂದೇ ಸಮನೆ ಮಾತು ಆಡುತ ಇದ್ದ. ಅವನ ಧ್ವನಿ ಎಲ್ಲರ ನೆಮ್ಮದಿ ಕೆಡಿಸುವಂತೆ ಇತ್ತು. ಇದರಿಂದ ಕುಪಿತವಾಗಿ ನನ್ನ ಮುಂದೆ ಇದ್ದ ಆ ದಂಪತಿಗಳು ನಿದ್ದೆ ಮಾಡಲು ಆಗ, ನನ್ನ ಪಕ್ಕದಲ್ಲಿ ಇದ್ದ ಅಜ್ಜನಿಗೆ "ರೀ ಸ್ವಾಮಿ ಏನ್ರಿ ನಿಮ್ಮ ಹುಡುಗನಿಗೆ ಹುಚ್ಚು ಗಿಚ್ಚು ಹಿಡಿದಿದಿಯ ಹೆಂಗೆ , ಏನು ಯಾವತು ಗಿಡ ಮರ ಪಕ್ಷಿ ನೋಡೇ ಇಲ್ಲವ , ಹಾಗೆ ಆಡುತ್ತ ಇದ್ದಾನೆ " ಅಂತ ಕಿಡಿಕಾರಿದರು. ಅದಕ್ಕೆ ಆ ಅಜ್ಜ " ಕೋಪ ಮಾಡಿಕೊಳಬೇಡಿ ಸ್ವಾಮಿ , ನನ್ನ ಮೊಮ್ಮಗ ಇವತ್ತೇ ಈ ಪ್ರಪಂಚನ ಕಣ್ಣಾರೆ ಕಾಣುತ ಇರುವನು "  ಅಂತ ಹೇಳಿದರು.

ಇದನ ಕಂಡ ನನ್ನಗೆ ಮನುಷ್ಯನ ಅವಿವೇಕ , ದುದುಕುತನ , ಸಿದುಕತನ ಎಲ್ಲವು ಅತಿಯಂತ ಬಾಲಿಶವಾಗಿ ಕಾಣಿಸಿತು

                 ಬರೆದ ಬಡಪಾಯಿ ,
                      ಹರೀಶ್ ಎಸ್ ಕೆ