ಒಳ್ಳೆ ಕೆಲಸಕ್ಕೆ ತಣ್ಣನೆ ಸ್ಪರ್ಧೆ..!

ಒಳ್ಳೆ ಕೆಲಸಕ್ಕೆ ತಣ್ಣನೆ ಸ್ಪರ್ಧೆ..!

 ಹೈಲೈಟ್ಸ್...
        ಒಳ್ಳೆ ಕೆಲಸಕ್ಕೆ ತಣ್ಣನೆ ಸ್ಪರ್ಧೆ..!
        ಸಾಮಾಜಿಕ ಜಾಲದಲ್ಲಿ ಭಾರಿ ಸುದ್ದಿ
        ಬಾಲಿವುಡ್​ ನಟರೂ ಮಾಡ್ತಿದ್ದಾರೆ ಚಾಲೆಂಜ್
        ಏನಿದು ಐಸ್ ಬಕೆಟ್ ಚಾಲೆಂಜ್..!
         ರೋಗಗ್ರಸ್ತ ವ್ಯಕ್ತಿ ಸಹಾಯಕ್ಕೆ ಈ ಸ್ಪರ್ಧೆ

 ಭಾರತದಲ್ಲಿ ಅನೇಕ ಸ್ಪರ್ಧೆಗಳಿವೆ. ಆ ಸ್ಪರ್ಧೆಗಳಲ್ಲಿ,ಕೆಲವು ಒಳ್ಳೆ ಕೆಲಸಕ್ಕೂ ನಡೆಯುತ್ತವೆ. ಸದ್ಯ ಅಂತಹ ಒಂದು ಹೊಸ ಸ್ಪರ್ಧೆ ಅಥವಾ ಚಾಲೆಂಜ್ ಶುರುವಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಂತೂ ಇದ್ದರದ್ದೇ ಈಗ ಚರ್ಚೆ. ಎಲ್ಲರಿಗೂ ಇದರ ಬಗ್ಗೆ ಇನ್ನೂ ಹೆಚ್ಚು ತಿಳಿದಿಲ್ಲ. ಆದರೂ, ಅಮೆರಿಕದಿಂದ ಇದು ಇತ್ತ ಕಡೆ ಬರ್ತಾಯಿದೆ. ಅದಕ್ಕೆ ಬಾಲಿವುಡ್ ಸೆಲೆಬ್ರಿಟಿಗಳು ಸ್ಪಂದಿಸಿದ್ದಾರೆ.

ಐಸ್ ಬಕೆಟ್ ಚಾಲೆಂಜ್. ಏನಿದು. ಇದು ಎಲ್ಲರ ಸದ್ಯದ ಚಾಲೆಂಜಿಂಗ್ ಪ್ರಶ್ನೆ. ಸಾಮಾಜಿಕ ಜಾಲ ತಾಣದಲ್ಲಿ ಇದರದ್ದೇ ಬಹುವಾದ ಚರ್ಚೆ. ಆದರೂ, ಎಲ್ಲರೂ ಈ ಚಾಲೆಂಜ್ ಸ್ವೀಕರಿಸುತ್ತಿದ್ದಾರೆ. ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್,ಸೋನಾಕ್ಷಿ ಸಿನ್ಹಾ, ಗಾಯಕ ದಿಲೇರ್ ಮೆಹಂದಿ, ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಕೂಡ ಈ ಚಾಲೆಂಜ್ ಎಕ್ಸೆಪ್ಟ್ ಮಾಡಿದ್ದಾರೆ. ಒಂದಷ್ಟು ಮಾತು ಆಡಿದ್ದಾರೆ. ಒಳ್ಳೆ ಕೆಲಸಕ್ಕೆ ಸ್ಪಂದಿಸಿದ ಖುಷಿನೂ ಇವರಲ್ಲಿದೆ...

ಸಿನಿಮಾ ತಾರೆಯರು. ಕ್ರೀಡಾ ಕ್ಷೇತ್ರದವರು. ಇನ್ನುಳಿದ ಬೇರೆ..ಬೇರೆ ಕ್ಷೇತ್ರದವರೆಲ್ಲ ಈ ಚಾಲೆಂಜ್ ಸ್ವೀಕರಿಸುತ್ತಿದ್ದಾರೆ. ಹಾಲಿವುಡ್​ನ ಬಹು ತೇಕ ನಟರೆಲ್ಲ ಈ ಚಾಲೆಂಜ್ ಸ್ವೀಕರಿಸಿದವ್ರೇ...ಆದರೂ, ಏನಿದು. ಚಾಲೆಂಜ್..

ಐಸ್ ಬಕೆಟ್ ಚಾಲೆಂಜ್...?

- ಐಸ್ ಬಕೆಟ್ ಚಾಲೆಂಜ್ ಒಳ್ಳೆ ಕೆಲಸಕ್ಕೆ ಆರಂಭವಾದ ಸ್ಪರ್ಧೆ..!
- ‘ಲೌ ಗೆಹ್ರಿಗ್ನ ಡಿಸೀಸ್’ ಅನ್ನೋ ರೋಗಗ್ರಸ್ತ ವ್ಯಕ್ತಿ ಸಹಾಯಕ್ಕೆ ಈ ಆಟ
- ಈ ರೋಗಕ್ಕೆ ಮೆದುಳಿನ ನರಕೋಶ ಹಾಳಾಗುತ್ತದೆ.
- ಇಷ್ಟೇ ಅಲ್ಲ. ಸ್ಪೈನಲ್ ಕಾರ್ಡ್​ಹಾನಿಯಾಗಿ ವ್ಯಕ್ತಿ ನಡೆಯಲಾರ
- ವಿಶ್ವದ ಒಂದು ಲಕ್ಷ ಜನರಲ್ಲಿ ಇಬ್ಬರು ಈ ರೋಗದಿಂದ ಬಳಲುತ್ತಾರೆ.

ಈ ರೋಗದಿಂದ ಬಳಲುತ್ತಿದ್ದ ಅಮೆರಿಕದ ಬೇಸ್ ಬಾಲ್ ಆಟಗಾರ, ಪೀಟ್ ಪ್ರೇಟ್ಸ್, ಧನ ಸಹಾಯ ಪಡೆಯಲು ‘ಐಸ್ ಬಕೆಟ್ ಚಾಲೆಂಜ್’ ನಂತಹ ಐಡಿಯಾ ಆರಂಭಿಸಿದರು. ತನ್ನ ಗೆಳೆಯನಿಂದ ಪಡೆದಿರೋ ಈ ಐಡಿಯಾ, ಈಗ ವಿಶ್ವದಾದಂತ್ಯ ಹರಡಿದೆ. ಆದರೆ, ಈ ಆಟ ಹೇಗೆ...

ಆಟ ಸಿಂಪಲ್ ಆಗಿದೆ...

- ಐಸ್ ವಾಟರ್ ಸುರಿದುಕೊಂಡ ವ್ಯಕ್ತಿ ಚಾಲೆಂಜ್ ಮಾಡ್ತಾನೆ.
- ಚಾಲೆಂಜ್ ಸ್ವೀಕರಿದ ವ್ಯಕ್ತಿ 24 ಗಂಟೆಯಲ್ಲಿ ಚಾಲೆಂಜ್ ಬ್ರೇಕ್ ಮಾಡಬೇಕು
- ಒಂದು ವೇಳೆ ಐಸ್ ವಾಟರ್ ಹಾಕಿಕೊಳ್ಳು ಚಾಲೆಂಜ್ ಸ್ವೀಕರಿಸಿದ ವ್ಯಕ್ತಿ ನಿರಾಕರಿಸಿದರೇ.
- ಆತ ಇಂತಿಷ್ಟು ದುಡ್ಡು ಕೊಡಬೇಕು. ಆ ದುಡ್ಡು ಎ.ಎಲ್.ಎಸ್ ರೋಗಿಗೆ ಹೋಗುತ್ತದೆ

---
ಸದ್ಯ ಎಲ್ಲೆಡೆ ‘ಐಸ್ ಬಕೆಟ್ ಚಾಲೆಂಜ್ ’ ಆಟ ವೈರಲ್ ಆಗಿದೆ. ಹಾಲಿವುಡ್​ನ ನಟರು ಈ ಚಾಲೆಂಜ್ ಸ್ವೀಕರಿಸುತ್ತಿದ್ದಾರೆ. ಒಂದು ರೀತಿ ಇದು ಆಟವೂ ಆಯಿತು. ಸಹಾಯವನ್ನೂ ಮಾಡಿದ ಹಾಗೆ ಆಯಿತು ಎಂಬ ರೀತಿಯಲ್ಲಿ ಸಾಗುತ್ತಿದೆ. ಕರ್ನಾಟಕದಲ್ಲಿ ಇಂತಹ ಸಹಾಯ ಹಸ್ತ ಚಾಲೆಂಜ್​ಗಳು ಅದ್ಯಾವಾಗ ಶುರುವಾಗುತ್ತವೋ ನೋಡಬೇಕು...

-ರೇವನ್ ಪಿ.ಜೇವೂರ್