ಮರಳಿ ಮಣ್ಣಿಗೆ

ಮರಳಿ ಮಣ್ಣಿಗೆ

ಪಟ್ಟಣದ ಬದುಕಿಗೆ ಬೇಸತ್ತ ನಾನು ಹಳ್ಳಿ ಜೀವನವನ್ನ ಬಯಸಿದ್ದೇನೆ. ಊರಿನ ಗಾಳಿ, ನೀರು, ಮಣ್ಣು, ಕಾಡು, ಗುಡ್ಡ, ಇವನ್ನ ಇನ್ನೂ ಅಷ್ಟು ದಿನ ಬಿಟ್ಟಿರುವುದು ಬೇಡ ಎನಿಸಿದೆ. ನಾನು ಓದಿದ್ದು ನನ್ನ ಮೆಚ್ಚಿನ ವಿಷಯ 'ಕಂಪ್ಯೂಟರ್ ಸೈನ್ಸ್'. ಬಿ. ಇ ಆದ ನಂತರ ಒಂದು ವರ್ಷ ದುಡಿಯುತ್ತಲೇ ಇಲ್ಲಿಗೆ ಸಾಕು ಈ ಪಟ್ಟಣದ ವಾಸ ಎನಿಸಿದೆ. ಊರಿನಲ್ಲಿ ತಂದೆ, ತಾಯಿ ಇಬ್ಬರೇ ಕೃಷಿಮಾಡುತಿದ್ದು ಅವರಿಂದ ದೂರ ಉಳಿದು ಕೆಲಸ ಮಾಡಲು ನಾನು ಬಯಸುವುದಿಲ್ಲ. ಎಲ್ಲವನ್ನು ಬಿಟ್ಟು ಕೃಷಿಮಾಡ ಬೇಕು ಎಂಬುದು ನನ್ನ ಆಸೆ ಮತ್ತು ಅಂತೆಯೇ ನಿರ್ಧರಿಸಿದ್ದೇನೆ. ಓದಿದವರು ಹೊರಗೆಯೇ ದುಡಿಯ ಬೇಕು, ಅದರಲ್ಲೂ ಹೆಚ್ಚು ಸಂಬಳದ ಎಮ್.ಎನ್.ಸಿ ಗಳಲ್ಲೇ ದುಡಿಯ ಬೇಕು ಎಂದೇನು ಇಲ್ಲ ಎಂಬುದು ನನ್ನ ಭಾವನೆ. ಕೃಷಿಮಾಡಿಕೊಂಡು ಸರಳ ಜೀವನ ನೆಡೆಸಬೇಕು, ಓದಿದ, ಬಳಸಿದ ವಿಷಯದ ಜ್ಞಾನವನ್ನು ಕೃಷಿಯಲ್ಲಿ ಸಾದ್ಯವಾದಷ್ಟು ಬಳಸಬಹುದು ಎಂಬುದು ನನ್ನ ನಂಬಿಕೆ. ನನ್ನ ಈ ನಿರ್ಧಾರ ತಡಮಾಡದೆ ತೆಗೆದುಕೊಂಡಿದ್ದೇನೆಂದು ನನ್ನ ಬಾವನೆ, ಈ ಸಂಕಲ್ಪವನ್ನ ಇದುವರೆಗೆ ಮನೆಯಲ್ಲಿ ಪ್ರಸ್ತಾಪಿಸಿಲ್ಲ, ಹೇಳಿದರೂ ಖುಷಿ ಪಡುತ್ತಾರೆಂದು ನನ್ನ ಭಾವನೆ. ಸಂಪದದಲ್ಲಿ ಇದನ್ನು ಬರೆದ ಉದ್ದೇಶ, ನಿಮ್ಮ ಸಲಹೆ, ಅಬಿಪ್ರಾಯಾವನ್ನು ದಯವಿಟ್ಟು ಬರೆಯಿರಿ ಎಂದು ಕೇಳಲು. ನನ್ನ ಮಿಂಚಂಚೆ: vidyakumargv209@gmail.com ದಯವಿಟ್ಟು ನಿಮ್ಮ ಅನಿಸಿಕೆಯನ್ನು ಇಲ್ಲೇ ಕಮೆಂಟ್ ಮಾಡಿ ಅಥವಾ ಮಿಂಚಂಚೆ ಕಳುಹಿಸಿ,, ಧನ್ಯವಾದಗಳೊಂದಿಗೆ

Rating
No votes yet

Comments