ಕನ್ನಡ e-books - quillbooks.in - ಯಾರಾದರೂ ಬಳಸಿದ್ದೀರಾ?
quillbooks.in ಎಂಬ ತಾಣದಲ್ಲಿ ಕನ್ನಡ e-books ಅರ್ಧದಷ್ಟು ಬೆಲೆಗೆ ಸಿಗುತ್ತವೆ . ಮೊದಲ ಬಾರಿ ಪುಸ್ತಕ ಕೊಂಡಾಗ ಎರಡು ಪುಸ್ತಕಗಳು ಉಚಿತವಾಗಿ ಸಿಗುತ್ತವೆ. ನೀವು ಯಾರಾದರೂ ಇದನ್ನು ಬಳಸಿ ನೋಡಿದ್ದೀರಾ?
ಇದಕ್ಕಾಗಿ ನಾನು ನನ್ನ ಸ್ಯಾಮ್ಸಂಗ್ ಟ್ಯಾಬ್ಲೆಟ್ಟಿಗೆ quillbook android app ಅನ್ನು ಡೌನ್ಲೋಡ್ ಮಾಡಿ ಹಾಕಿಕೊಂಡೆ. ಯು. ಆರ್. ಅನಂತಮೂರ್ತಿ ಅವರ 'ಸಂಸ್ಕಾರ' ಕಾದಂಬರಿ - ಮುಖ ಬೆಲೆ ಎಪ್ಪತ್ತು ರೂಪಾಯಿ - ಇಲ್ಲಿ ಮೂವತ್ತೇ ರೂಪಾಯಿಗೆ ಸಿಕ್ಕಿತು ಜತೆಗೆ ವಸುಧೇಂದ್ರರ ' ನಮ್ಮಮ್ಮ ಅಂದ್ರೆ ನಮಗಿಷ್ಟ' ಮತ್ತು ನಾಗತಿಹಳ್ಳಿ ಚಂದ್ರಶೇಖರರ 'ಛಿದ್ರ' ಉಚಿತವಾಗಿ ಡೌನ್ಲೋಡ್ ಆದವು.
ಆದರೆ ಪುಟದ ಸಂಖ್ಯೆ ಎಲ್ಲೂ ಇಲ್ಲ ; ಯಾವದೇ ಸಂಖ್ಯೆಯ ಪುಟಕ್ಕೆ ಹೋಗಲೂ ಆಸ್ಪದ ಇಲ್ಲ ; ಮುಂದಿನ ಪುಟಕ್ಕೆ ಹೋಗಲು ಹುಷಾರಾಗಿ ತೆರೆಯನ್ನು ಮುಟ್ಟಬೇಕು. ಇಲ್ಲದಿದ್ದರೆ ಅದೆಷ್ಟೋ ಪುಟ ಮುಂದಕ್ಕೆ ಹೋಗಿ ಬಿಡುತ್ತದೆ. ನಾವು ಓದುತ್ತಿರುವ ಪುಟಕ್ಕೆ ಬರುವುದು ಟ್ರಯಲ್ ಅಂಡ್ ಎರರ್ ಮೂಲಕವೇ ! ಬೇಕೆಂದರೆ ಮೊಟ್ಟ ಮೊದಲ ಪುಟಕ್ಕೆ ನೇರವಾಗಿ ತಲುಪಬಹುದು ಅಲ್ಲಿಂದ ಮತ್ತೆ ಮುಂದಕ್ಕೆ ಹುಷಾರಾಗಿ ಬರಬೇಕು . ಇಲ್ಲದಿದ್ದರೆ ಮತ್ತದೇ ಗೋಳು. ಹೆಲ್ಪ್ ಅನ್ನು ಒದಗಿಸಿಲ್ಲ ; ಯಾವದೇ ಸೆಟ್ಟಿಂಗ್ಸ್ ನ ಮೆನು ಕೂಡ ಇಲ್ಲ ;
ಗೂಗಲ್ ಹುಡುಕಾಟವೂ ಉಪಯೋಗವಾಗಲಿಲ್ಲ ; ಇಳಿಸಿಕೊಂಡ ಪುಸ್ತಕಗಳನ್ನು ಬೇರೆ App ನಲ್ಲೂ ತೆರೆವಂತೆ ಇಲ್ಲ ಅಂತ ಕಾಣಿಸುತ್ತದೆ. quillpad.in ನಲ್ಲೂ ಈ ಬಗ್ಗೆ ಸಲಹೆ/ಸೂಚನೆ ನಿನ್ನೆ ಕೊಟ್ಟಿದ್ದೇನೆ . ಇನ್ನೂ ಯವದೇ ಉತ್ತರ ಬಂದಿಲ್ಲ; ಇವತ್ತೂ ಮತ್ತೆ ಮತ್ತೆ ಹಾಕಿದ್ದೇನೆ .
ಬಲ್ಲವರು ಯಾರಾದರೂ ನನಗೆ ಸಹಾಯ ಮಾಡುವಿರಾ?