ಒಂದರಲ್ಲಿ ಎರಡು

ಒಂದರಲ್ಲಿ ಎರಡು

ಹೀಗೊಂದು ಅಡ್ಡ ಕಥೆ:-

ಆಗತಾನೆ ಇಹಲೋಕ ತ್ಯಜಿಸಿದ ಭೂಲೋಕದ ಇಬ್ಬರು ಮಾನವರು ತಮ್ಮ ಪಾಪ-ಪುಣ್ಯದ ಲೆಕ್ಕ ತಿಳಿಯಲು ಚಿತ್ರಗುಪ್ತನ ಮುಂದೆ ನ್ಯಾಯಸ್ಥಾನದಲ್ಲಿ ನಿಂತಿದ್ದರು.ಅದರಲ್ಲೊಬ್ಬರು ಶ್ರೇಷ್ಠ ಸಾಹಿತಿಗಳಾಗಿದ್ದರು.ಹೀಗಾಗಿ ಸಹಜವಾಗಿಯೇ ಮತ್ತೊಬ್ಬನಿಗೆ ಇವರ ಪರಿಚಯವಿತ್ತು.ಅವನು ಸಾಹಿತಿಗಳನ್ನು ಕುರಿತು ಕುತೂಹಲಕ್ಕೆ ಹೀಗೆ ಕೇಳಿದ,ನೀವೊಬ್ಬರು ದೊಡ್ಡ ಚಿಂತಕರಾಗಿದ್ದಿರಂತೆ,ವಿಚಾರವಾದಿಯಾಗಿ ಒಳ್ಳೆಯ ಹೆಸರೂ ಗಳಿಸಿಕೊಂಡಿದ್ದಿರಂತೆ,ಸಾಹಿತ್ಯದ ಮೂಲಕ ಅನೇಕ ಪ್ರಶಸ್ತಿ ಧಕ್ಕಿಸಿಕೊಂಡಿದ್ದಿರಂತೆ,ಪುರೋಹಿತಶಾಹಿಗಳನ್ನು ವಿರೋಧಿಸುವ ಮೂಲಕ ಅನೇಕ ಜನರ ಅಭಿಮಾನ ಪಡೆದುಕೊಂಡಿದ್ದಿರಂತೆ,ಬ್ರಾಹ್ಮಣಿಕೆಯನ್ನು ಜೀವನದುದ್ದಕ್ಕೂ ವಿರೋಧಿಸಿ ಒಮ್ಮೆ 'ಮೂರ್ತಿ'ಯ ಮೇಲೆ ಉಚ್ಚೆ ಉಯ್ಯುವವರೆಗೂ ಹೋಗಿದ್ದಿರಂತೆ ಹೌದಾ ಎಂದ.ಆಮೇಲೆ ಮತ್ತೆ ಕೇಳಲು ಶುರು ಮಾಡಿದ.ಇಷ್ಟೆಲ್ಲಾ ಮಾಡಿದ ನೀವು ಸತ್ತ ನಂತರ ಇಲ್ಲಿಗೆ ಬರಲು ಅದೇ ಬ್ರಾಹ್ಮಣರ ಸಂಸ್ಕಾರ ಪಾಲಿಸಿದಿರಲ್ಲ?,ಪುರೋಹಿತರಿಂದ ಮಂತ್ರ ಹೇಳಿಸಿಕೊಂಡಿರಲ್ಲ?ಬದುಕ್ಕಿದ್ದಾಗ ನಿಮ್ಮ ತತ್ವ ಸಿದ್ದಾಂತದ ಹಿಂದೆ ಬಂದರಲ್ಲ ಅವರ ಕಥೆ ಏನಾಗಬೇಕು? ಹೀಗೇಕೆ ಮಾಡಿದಿರಿ ಎಂದು ಕೇಳಿದಾಗ ಅ ಸಾಹಿತಿ ಮಹಾಶಯರಂದರಂತೆ,'ಉಸಿರು ಇರುವಾಗ ಬದುಕೋಕೆ ಏನಾದರೂ ಮಾಡಬೇಕಲ್ಲಪ್ಪ 'ಎಂದು.ಇದನ್ನು ಕೇಳಿದ ಅವನು ಮತ್ತೆ ಅಲ್ಲಿ ಎರಡನೇ ಬಾರಿ ಸತ್ತನಂತೆ.
--ಎಸ್. ಕೆ

ಬುದ್ಧಿಜೀವಿಗಳೆಂದರೆ ಯಾರು?

ಒಮ್ಮೆ ಯಮ ತನ್ನ ಲೋಕದಲ್ಲಿ ಪಾಪಿಗಳಿಗೆ ಅವರವರ ಪಾಪಕರ್ಮದನುಸಾರ ಶಿಕ್ಷೆಯನ್ನು ವಿಧಿಸುತ್ತಿದ್ದ.ಇದನ್ನು ಅಲ್ಲೇ ಮೂಲೆಯಲ್ಲಿ ಕೂದಲು ಕೆದರಿಕೊಂಡು ಫ್ರೆಂಚ್ ಗಡ್ಡ ಬಿಟ್ಟುಕೊಂಡು ಕೈಯಲ್ಲಿ ಬಾಟಲಿ,ಬಾಯಿತುಂಬ ಹೊಗೆ ತುಂಬಿಕೊಂಡಿದ್ದ ಒಂದು ಗುಂಪಿನವರು ವಿರೋಧಿಸಲು ಯೋಚಿಸುತ್ತಾರೆ.ಹೀಗೆ ಯೋಚನೆ ಬಂದೊಡನೆ ಯಮನನ್ನು ಮಾನವ ಹಕ್ಕಿನ ಉಲ್ಲಂಘನೆಯ ಮೊಕದ್ದಮೆ ಹೂಡಿ ಒಳಗೆ ಹಾಕಿಸುವುದಾಗಿ ಬೆದರಿಸುತ್ತಾರೆ.ಅಲ್ಲದೇ ಅವನ ಹಣೆಯ ಮೇಲಿರುವ ತಿಲಕವನ್ನು ನೋಡಿ ಕೋಮುವಾದಿ ಎಂಬ ಪಟ್ಟನೂ ಕಟ್ಟುತ್ತಾರೆ.ಯಮ ಇವರು ಇಲ್ಲೇ ಇದ್ದರೆ ಎಲ್ಲಿ ತನ್ನ ಬುಡಕ್ಕೇ ಕೊಲ್ಲಿ ಇಡುತ್ತಾರೆಂದು ಭಾವಿಸಿ ಭೂಲೋಕದ ಜನರಿಂದ ಕಾಲಕಾಲಕ್ಕೆ ಉಗಿಸಿಕೊಳ್ಳುತ್ತಾ ಇರಲೆಂದು ಮತ್ತೆ ಅವರನ್ನು ಭೂಮಿಗೆ ಕಳುಹಿಸುತ್ತಾನೆ.
ಅವರೇ ಈ "ಬುದ್ಧಿಜೀವಿಗಳು."
-ಎಸ್. ಕೆ

Comments