ಎರಡು ಸಂಗತಿ

ಎರಡು ಸಂಗತಿ

ಇದು ಎಂಥಾ ಕರ್ಮ ಮಾರ್ರೆ!
ಹಿಂದಿನ ಸರ್ಕಾರದಲ್ಲಿ ಖುದ್ದು ಸಚಿವರುಗಳೇ ವಿವಾದದಲ್ಲಿ ಭಾಗಿಯಾಗುತ್ತಿದ್ದರು.ಈ ಸರ್ಕಾರ ಬಂದ ಮೇಲೆ ಸಚಿವರ ಬದಲು ಅವರ ಮಕ್ಕಳ ಕವರ್ ಸ್ಟೋರಿಗಳು ಹೊರಬರುತ್ತಿವೆ.
ಮೋದಿಜೀ ಇಂತಹ ಅನಾಹುತಗಳನ್ನು ಮೊದಲೇ ಅರಿತು ಸರ್ಕಾರ ರಚಿಸಿದ ಮೊದಲ ದಿನವೇ ನಿಮ್ಮ ಬಂಧುಮಿತ್ರರು,ಕುಟುಂಬದ ವರ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಎಚ್ಚರಿಸಿದ್ದರು.ಬಹುಶಃ ಸಚಿವರು ಮತ್ತು ಸಂಸದರ ಮಕ್ಕಳನ್ನೂ ಕರೆಸಿ ಹೇಳಬೇಕಿತ್ತೇನೋ..ಸಾರ್ವಜನಿಕ ಜೀವನದಲ್ಲಿರುವವರು ತಮ್ಮ ಜೊತೆ ತಮ್ಮ ಮನೆಯವರ ಚಾರಿತ್ಯವನ್ನು ಶುದ್ಧವಾಗಿರುವಾಗೆ ನಿಗಾ ವಹಿಸಬೇಕು. ಅದು ಬಿಟ್ಟು ಎಲ್ಲಿ ಬೇಕು ಅಲ್ಲಿ ಮೇಯಲು ಬಿಟ್ಟರೆ ಈ ರೀತಿ ರಾಷ್ಟ್ರ ಮಟ್ಟದಲ್ಲಿ ಮುಜುಗರ ಅನುಭವಿಸಬೇಕಾಗುತ್ತದೆ.
ಕಾರ್ತಿಕ್-ಮೈತ್ರಿ ಪ್ರಕರಣದ ಸತ್ಯಾಸತ್ಯತೆ ಇನ್ನಷ್ಟೇ ಬಹಿರಂಗ ವಾಗಬೇಕು.ಆದರೆ ಜನರ ಕಣ್ಣಲ್ಲಿ ಸಣ್ಣವರಾಗಲೂ ಇಷ್ಟು ಸಾಕಲ್ಲವೇ? ಕಾಲೆಯಲು ಸಿದ್ಧವಾಗಿರುವ ರಾಜಕೀಯ ವಿರೋಧಿಗಳಿಗೆ ಇಂತಹ ಪ್ರಕರಣಗಳು ಹಸಿದವನ ಹೊಟ್ಟೆಗೆ ಮೃಷ್ಟಾನ್ನ ಹಾಕಿದಂತೆ ಆಗಲ್ಲವೇ?
-ಎಸ್. ಕೆ

ಸತ್ಯ ಸಾಲು:-

ತಂದೆ ತಾಯಿ ನಮ್ಮ ಪಾಲಿನ ನಿಜವಾದ ಬುದ್ಧಿಜೀವಿಗಳು. ಸಾತ್ವಿಕ ಜೀವನ ನಡೆಸಲು ಇವರ ಮಾತುಗಳನ್ನು ಆಲಿಸಿ ಪಾಲಿಸಿದರೆ ಸಾಕಾಗುತ್ತದೆ.ಯಾಕೆಂದರೆ ಅವರ ಮಾತುಗಳಲ್ಲಿ ನಮ್ಮ ಬಗೆಗಿನ ನಿಜವಾದ ಕಾಳಜಿ ತುಂಬಿರುತ್ತದೆ.ಇವರ ಜೀವನ ಅನುಭವದ ಮುಂದೆ ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆದು ಶಂಖ ಊದೊ ಬುದ್ಧಿಜೀವಿಗಳು ಏನೇನು ಅಲ್ಲ.ನಮ್ಮ ಹಿತ್ತಲಲ್ಲೇ ಮದ್ದಿನಗಿಡ ಇರೋವಾಗ ಯಾರದ್ದೋ ಯಾಕೆ ಬೇಕು ಅಲ್ಲವೆ?
-ಎಸ್. ಕೆ