ಮಾಧ್ಯಮ ಮತ್ತು ಹುಲಿಯ ಕಥೆ

ಮಾಧ್ಯಮ ಮತ್ತು ಹುಲಿಯ ಕಥೆ

ಹುಲಿ ಮತ್ತು ಮಾಧ್ಯಮ:-

ಟಿವಿ ಮಾಧ್ಯಮದ ಪ್ರತಿನಿಧಿಯೊಬ್ಬ ರಜೆಯಲ್ಲಿ ಮಜಾ ಮಾಡಲು ಕಾಡಿಗೆ ಶಿಕಾರಿ ಹೊರಡುತ್ತಾನೆ .ಆಗ ತುಂಬಾನೇ ಹಸಿದಿದ್ದ ಹುಲಿಯೊಂದು ಅವನ ಮುಂದೆ ಪ್ರತ್ಯಕ್ಷವಾಗಿ ನಿನ್ನನು ತಿನ್ನುವುದಾಗಿ ಹೇಳುತ್ತದೆ.ಆಗ ಅವನು,ನೋಡು ನಾನೊಬ್ಬ ಟಿವಿ ಮಾಧ್ಯಮದವನು ನನ್ನನ್ನು ಕೊಂದು ತಿಂದರೆ ನನ್ನ ಮಾಧ್ಯಮ ಮಿತ್ರರು ನಿನ್ನನ್ನು ಸುಮ್ಮನೆ ಬಿಡುತ್ತಾರೆ ಅಂದುಕೊಂಡಿಯಾ?ನಿನ್ನ ಶತ್ರುಗಳಿಂದ ಹಣ ಪಡೆದು ನಿನ್ನ ವಿರುದ್ಧ ಒಂದು 'ಕವರ್ ಸ್ಟೋರಿ' ರೆಡಿ ಮಾಡಿ ನೀನು ಹುಲಿಯೇ ಅಲ್ಲ,ಹುಲಿಯ ವೇಷದಲ್ಲಿರುವ ಬೆಕ್ಕು ಎಂದು 24*7 ಹೇಳುವ ಮೂಲಕ ರಾಜ್ಯದ ಜನರನ್ನು ನಂಬಿಸುತ್ತಾರೆ.ಅಷ್ಟೇ ಅಲ್ಲ,ಆನಿಮೇಷನ್ ತಂತ್ರಜ್ಞಾನ ಬಳಸಿ ನೀನು ಹುಲ್ಲು ತಿನ್ನುವ ಹಾಗೆ ಮಾಡಿ,ಹುಲಿ ಎಷ್ಟೇ ಹಸಿದಿದ್ದರೂ ಹುಲ್ಲು ತಿನ್ನಲ್ಲ ಅನ್ನೋ ಗಾದೆಯನ್ನ ಸುಳ್ಳು ಮಾಡುತ್ತಾರೆ.ದೇಶದಲ್ಲಿ ಹುಲಿಗಳ ಸಂಖ್ಯೆ ಕಡಿಮೆ ಆಗಿಲ್ಲ,ಮರ ಹತ್ತಲು ಬರುವುದಿಲ್ಲವೆಂದು ಕೆಲವು ಹುಲಿಗಳು ಬೆಕ್ಕಿನ ಜಾತಿಗೆ,ಇನ್ನು ಕೆಲವು ಚಿರತೆಯ ಜಾತಿಗೆ ಸ್ವ ಇಚ್ಛೆಯಿಂದ ಮತಾಂತರವಾಗುತ್ತಿದೆ ಅಂತ ಬ್ರೇಕಿಂಗ್ ನ್ಯೂಸ್ ಬಿಡ್ತಾರೆ.ಜೊತೆಗೆ ಪುಣ್ಯಕೋಟಿ ಕಥೆಯನ್ನು ತಿರುಚಿ 'ನಿಜವಾಗಿ ನಡೆದಿದ್ದೇನು?'ಅನ್ನೋ ಶೀರ್ಷಿಕೆಯಡಿ ಹುಲಿ ತಾನಾಗಿ ಬೆಟ್ಟದಿಂದ ಬಿದ್ದು ಪ್ರಾಣ ಬಿಡಲ್ಲ ಪುಣ್ಯಕೋಟಿ ಹಸುವೇ ತನ್ನ ಕೊಂಬಿನಿಂದ ಪ್ರಪಾತಕ್ಕೆ ಬೀಳಿಸಿತು ಹಸುವಿನಿಂದ ಹತ್ಯೆಗೊಳಗಾದ ರಣಹೇಡಿ ಹುಲಿ ಅಂತ ಬಿಂಬಿಸುತ್ತಾರೆ.ಇಷ್ಟಲ್ಲದೆ ನೀನು ಬೇಟೆಯಾಡಿದ ದೃಶ್ಯಕ್ಕೆ ಕತ್ತರಿ ಹಾಕಿ ನೋಡಿ ಹುಲಿಯೊಂದು ಹಸಿವು ತಾಳಲಾರದೆ ಯಾವುದೋ ನರಿ ತಿಂದು ಉಳಿಸಿದ ದೇಹವನ್ನು ತಿನ್ನುತ್ತಿದೆ ಇದು ರಹಸ್ಯ ಕ್ಯಾಮರದಿಂದ ಸೆರಹಿಡಿದ ದೃಶ್ಯವೆಂದು ತೋರಿಸಿ ಹುಲಿ ಈಗ ಬೇಟೆಯಾಡಿ ತಿನ್ನುವುದನ್ನು ಬಿಟ್ಟು ಸೋಮಾರಿಯಾಗಿದೆ ಎಂದು ನಿನ್ನ ಮಾನ ಕಳೆಯುತ್ತಾರೆ.ಹೇಗೂ ನಿನ್ನ ದೇಹದಲ್ಲಿ ಕೆಂಪು ಮಿಶ್ರಿತ ಕೇಸರಿ ಬಣ್ಣವಿದೆ ಜಾತ್ಯತೀತವಾದಿಗಳಿಗೆ ಇಷ್ಟು ಸಾಕು ಅವರನ್ನು ಚರ್ಚೆಗೆ ಕರೆದು ನಿನ್ನನ್ನು ಕೋಮುವಾದಿ ಎಂದು ಬಿಂಬಿಸಿ ಅಲ್ಪಸಂಖ್ಯಾತರಾದ ಜಿಂಕೆಗಳ ಮೇಲೆ ದೌರ್ಜನ್ಯವೆಸಗುತ್ತಿದೆ ಈ ಮೂಲಕ ಕೋಮುಸೌಹಾರ್ದತೆಗೆ ಧಕ್ಕೆ ತರುತ್ತಿದೆ ಎಂದು ಹೇಳಿ ನಿನ್ನನ್ನು ಜೈಲಿಗೆ ಹಾಕಿಸುತ್ತಾರೆ.ಕೆಲವು ಹಿಂದೂ ದೇವತೆಗಳಿಗೆ ನೀನು ವಾಹನವಾಗಿರುವುದರಿಂದ ರಾಜ್ಯದ ಬುದ್ಧಿಜೀವಿಗಳು ಮತ್ತು ವಿಚಾರವಾದಿಗಳು ಕೂಡ ನಮ್ಮ ಬೆಂಬಲಕ್ಕೆ ಬರುತ್ತಾರೆ.ಅವರ ಬಾಯಿಗೆ ನೀನು ಆಹಾರವಾದರೆ ಅರ್ಧ ಸತ್ತಂತೆ.ಈಗ ಹೇಳು ನನ್ನನ್ನು ತಿನ್ತೀಯ ಎಂದು ಅ ಮಾಧ್ಯಮದವ ಹುಲಿಯನ್ನು ಪ್ರಶ್ನಿಸಿದ.ಹುಲಿ ಏನು ಮಾತಾಡದೆ ಅಲ್ಲಿಂದ ಓಡಿ ಬೆಟ್ಟದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತದೆ.
-ಎಸ್. ಕೆ

Comments