ಜಪಾನ್ ನಲ್ಲಿ ಮೋದಿ
ಸುದ್ದಿ:-
ಜಪಾನಿನಲ್ಲಿ ಮೀನುಗಳಿಗೆ ಆಹಾರ ತಿನ್ನಿಸಿದ ಮೋದಿ
ಇದಕ್ಕೆ ನಮ್ಮವರ ಪ್ರತಿಕ್ರಿಯೆಗಳು ಹೇಗಿರಬಹುದು....
ಕಾಂಗ್ರೆಸ್: 56 ಇಂಚಿನ ಎದೆಯಿರುವ ವ್ಯಕ್ತಿ ಶಾರ್ಕ್ ತಿಮಿಂಗಿಲ ಬಿಟ್ಟು ಕೊಳದಲ್ಲಿದ್ದ ಸಣ್ಣ ಮೀನುಗಳಿಗೆ ಆಹಾರ ತಿನ್ನಿಸಿರುವುದು ದುರದೃಷ್ಟಕರ.
ಮಾಧ್ಯಮ:ಭಾರತದಲ್ಲಿ ಬಡ ಮೀನುಗಳು ಆಹಾರವಿಲ್ಲದೆ ಸಾಯುತ್ತಿದ್ದರೆ ಪ್ರಧಾನಿಗಳು ಜಪಾನಿನ ಶ್ರೀಮಂತ ಮೀನುಗಳಿಗೆ ಆಹಾರ ತಿನ್ನಿಸಿದ್ದು ಖಂಡನೀಯ.
ಜಾತ್ಯಾತೀತರು:ಮೋದಿ ಒಬ್ಬ ಕೋಮುವಾದಿ.ಜಪಾನಿನ ಮೀನುಗಳಿಗೆ ಜಾತ್ಯಾತೀತ ತತ್ವದ ಮೇಲೆ ನಂಬಿಕೆ ಇದ್ದರೆ ಮೋದಿ ನೀಡಿದ ಆಹಾರವನ್ನು ವಾಂತಿ ಮಾಡಿಕೊಳ್ಳಲಿ.
ಎಎಪಿ:ಮೋದಿಜೀ ಮೀನುಗಳಿಗೆ ಆಹಾರವನ್ನು ನೀಡಿ ಅವುಗಳನ್ನು ಸೋಮಾರಿಗಳನ್ನಾಗಿ ಮಾಡಿದ್ದಾರೆ. ಇದನ್ನು ಖಂಡಿಸಿ ಧರಣಿ ಕೂಡುತ್ತೇವೆ.
ಮೋದಿಭಕ್ತರು:ಜಪಾನಿನ ಮೀನುಗಳಿಗೆ ಕೊನೆಗೂ ಒಳ್ಳೆಯ ದಿನಗಳು ಬಂದಿದೆ.
-@ಯೆಸ್ಕೆ