ಗುರು ಉತ್ಸವಕ್ಕೆ ಇವರ ವಿರೋಧವೇಕೆ?

ಗುರು ಉತ್ಸವಕ್ಕೆ ಇವರ ವಿರೋಧವೇಕೆ?

ಗುರು ಉತ್ಸವಕ್ಕೆ ಇವರ ವಿರೋಧವೇಕೆ?

ಇತ್ತೀಚೆಗೆ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮ್ರತಿ ಇರಾನಿ ಶಿಕ್ಷಕರ ದಿನಾಚರಣೆಯನ್ನು ಗುರು ಉತ್ಸವವನ್ನಾಗಿ ಆಚರಿಸುವುದಾಗಿ ಸುಳಿವು ನೀಡಿದಾಗ ಕಾಂಗ್ರೆಸ್, ಎಡ ಮತ್ತು ಕೆಲವು ದ್ರಾವಿಡ ಪಕ್ಷಗಳ ಮೈಯಲ್ಲಿ ತುರಿಕೆ ಕಾಣಿಸಿಕೊಂಡು ಜೋರಾಗಿ ಕೆರೆಯಲು ಶುರುಮಾಡಿಕೊಂಡರು.ಇನ್ನು ಇವರ ಕೆರೆತ ಕ್ಯಾನ್ಸರ್ ಆಗಿ ಪರಿವರ್ತನೆಯಾದರೆ ಕಷ್ಟ ಅಂತ ತಿಳಿದು ಕೇವಲ ಪ್ರಬಂಧ ಸ್ಪರ್ಧೆಗೆ ಈ ಹೆಸರು ಎನ್ನುವ ಮೂಲಕ ಅವರಿಗೆ ಕ್ಯಾನ್ಸರ್ ಬರುವುದನ್ನು ತಪ್ಪಿಸಿದರು.
ಭಾರತಕ್ಕೆ ಶಿಕ್ಷಕರ ದಿನಾಚರಣೆ ಹೊಸದೇನಲ್ಲ.ಎಸ್.ರಾಧಾಕೃಷ್ಣನ್ರವರು ಹುಟ್ಟುವ ಮೊದಲೆ ನಮ್ಮ ಹಿರಿಯರು 'ಗುರುವಂದನೆ','ಗುರುದಕ್ಷಿಣೆ' ಎಂಬ ಹೆಸರಿನಲ್ಲಿ ಗುರುಗಳಿಗೆ ಗೌರವ ಸಲ್ಲಿಸುತ್ತಿದ್ದರು.ಕೆಲ ದಶಕಗಳಿಂದ ರಾಷ್ಟ್ರಮಟ್ಟದಲ್ಲಿ ನಮ್ಮ ಸರಕಾರಗಳು 'Teacher's Day' ಎಂಬುದಾಗಿ ಆಚರಿಸುಕೊಂಡು ಬರುತ್ತಿವೆ. ಈ' ಡೇ'ಗಳು ಎಂದಿಗೂ ನಮ್ಮ ಸಂಸ್ಕೃತಿಯ ಭಾಗವಾಗಿರಲಿಲ್ಲ.ಪಾಶ್ಚಿಮಾತ್ಯರಿಂದ ಬಳುವಳಿಯಾಗಿ ಪಡೆದಿರುವಂತದ್ದು.ಮೋದಿ ಸರಕಾರ ಆರಂಭದ ದಿನಗಳಲ್ಲೇ ಹಿಂದಿಯನ್ನು ಇಂಗ್ಲಿಷ್ಗಿಂತ ಪ್ರಧಾನ ಭಾಷೆಯಾಗಿಸುವ ನಿಟ್ಟಿನಲ್ಲಿ ಕೆಲವು ಸೂಚನೆಗಳನ್ನು ಹೊರಡಿಸಿದ್ದರು.ಇದರ ಹಿಂದೆ ಇದ್ದದ್ದು ಸ್ವದೇಶಿಯತೆ,ಭಾರತೀಯತೆಯನ್ನು ಮರುಕಳಿಸಿ ಗುಲಾಮಿತನಕ್ಕೆ ಮುಕ್ತಿ ಕಾಣಿಸುವ ಉದ್ದೇಶ. ಆದರೆ ವಿರೋಧಿಗಳಿಗೆ ಇದರಲ್ಲು ಕೇಸರೀಕರಣದ ಛಾಯೆ ಕಾಣಿಸಿದ್ದು ದೌರ್ಭಾಗ್ಯದ ಸಂಗತಿ.
ಇಷ್ಟಕ್ಕೂ 'ಶಿಕ್ಷಕರ ದಿನಾಚರಣೆ' ಮತ್ತು 'ಗುರು ಉತ್ಸವ' ಪದಗಳ ಮೂಲಾರ್ಥದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಎರಡು ಒಂದೇ ಅರ್ಥ ಕೊಡುತ್ತದೆ.ಹಾಗೆಯೇ ಹೆಸರು ಬದಲಾದ ಕೂಡಲೆ ಆಚರಣೆಯ ಮೂಲ ಆಶಯಕ್ಕೆ ಯಾವ ಧಕ್ಕೆನು ಆಗುವುದಿಲ್ಲ. ಆದರೂ ಗುರು ಉತ್ಸವಕ್ಕೆ ಇವರು ವಿರೋಧ ವ್ಯಕ್ತಪಡಿಸಲು ಇನ್ನೊಂದು ಕಾರಣವಿದೆ.ಈ ಪದದ ಮೂಲ ಸಂಸ್ಕೃತ ಭಾಷೆ. ವೈದಿಕ ಕಾಲ ಮತ್ತು ಅದರ ನಂತರವು ಭಾರತ ಸಮಾಜದಲ್ಲಿ ಬೆರೆತು ನಾಗರಿಕತೆಯ ಬೆಳವಣಿಗೆಗೆ ಕಾರಣವಾದ ಭಾಷೆ. ಕಾಲಾಂತರದಲ್ಲಿ ಜಾತ್ಯತೀತರ ಕೈಯಲ್ಲಿ ಈ ಭಾಷೆ ಪುರೋಹಿತಶಾಹಿತ್ವದ ರೂಪ ಪಡೆದು ಸಾಮಾನ್ಯರ ದೃಷ್ಟಿಯಲ್ಲಿ ಅಸ್ಪೃಶ್ಯವಾಯಿತು.ವೇದಗಳು,ಮಹಾಕಾವ್ಯಗಳನ್ನು ಹುಟ್ಟಿಸಿದ ಈ ಭಾಷೆಯ ಪದವನ್ನು ಒಪ್ಪಿಕೊಂಡರೆ ಎಲ್ಲಿ ತಮ್ಮ ವೋಟ್ ಬ್ಯಾಂಕ್ ಮುಚ್ಟುತ್ತೋ ಅನ್ನೋದು ಈ ಜಾತ್ಯತೀತರ ವಿರೋಧಕ್ಕೆ ಕಾರಣ.ಇನ್ನು ಮೊದಲಿನಿಂದಲೂ ತಾವು ದ್ರಾವಿಡರು ಎಂದು ಹೇಳಿಕೊಂಡು ಆರ್ಯ ಸಂಸ್ಕೃತಿಯನ್ನು ಹೀಯಾಳಿಸುತ್ತಿರುವ ದ್ರಾವಿಡ ಪಕ್ಷಗಳು ಈ ಹೆಸರನ್ನು ಒಪ್ಪಿಕೊಂಡರೆ ಎಲ್ಲಿ ತಮ್ಮ ಪ್ರಾದೇಶಿಕ ಭಾಷೆ ಸಂಸ್ಕೃತದ ಮುಂದೆ ಮಂಕಾಗುತ್ತದೋ ಅನ್ನೋ ಭಯ ಕಾಡಿತು.
ಒಟ್ಟಿನಲ್ಲಿ ಭಾರತದ ಸನಾತನ ಸಂಸ್ಕೃತಿ ಮತ್ತು ಪರಂಪರೆಯನ್ನು ಮೋದಿ ಎಲ್ಲಿ ಮರುಕಳಿಸಿ ಬಿಡುತ್ತಾರೋ ಎನ್ನುವ ದುರಾಲೋಚನೆಯೇ ಈ ವಿರೋಧಕ್ಕೆ ಕಾರಣ.

-@ಯೆಸ್ಕೆ

Comments