ನಾ ಬೆರಳಚ್ಚಿಸಿದ ಸಾಲುಗಳು

ನಾ ಬೆರಳಚ್ಚಿಸಿದ ಸಾಲುಗಳು

ಮಹಾರಾಷ್ಟ್ರದಲ್ಲಿ ಹೆಚ್ಚು ಸೀಟಿಗಾಗಿ ನಾಲ್ಕೂ ಪಕ್ಷಗಳು ಚೌಕಾಸಿ ಮಾಡುತ್ತಿರುವುದೇಕೆ?

ಏಕೆಂದರೆ. ..

ಇವರು ರಾಜಕೀಯವನ್ನು ವ್ಯಾಪಾರವೆಂದು ಭಾವಿಸಿದ್ದಾರೆ.ಒಂದುವೇಳೆ ರಾಜಕೀಯ ಸಮಾಜಸೇವೆಯ ಮಾಧ್ಯಮ ಎಂದುಕೊಂಡಿದ್ದರೆ ಅಲ್ಲಿ ಚೌಕಾಸಿ ನಡೆಯುತ್ತಿರಲಿಲ್ಲ.

-@ಯೆಸ್ಕೆ

ಚೀನಿ ವಸ್ತುಗಳಿಗೆ ಮಾತ್ರ ಅಲ್ಲ,ಚೀನೀಯರ ಮಾತಿಗೂ ಗ್ಯಾರಂಟಿ ಇಲ್ಲ:-

ಕಾರಣ ಓದಿ,

ಚೀನಿ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದಾಗ ಗಡಿ ಸಮಸ್ಯೆಯನ್ನು ಸರಿಪಡಿಸುವುದಾಗಿ ಹೇಳಿದ್ದರು.ಆದರೆ ಚೀನಿ ಸೈನ್ಯ ನಿನ್ನೆ ಮತ್ತೆ ಗಡಿ ದಾಟಿ ಬಂದಿದೆ.

ನೆಹರು ಚೀನಾ ನಂಬಿ ಕೆಟ್ಟಿದ್ದರು,ಮೋದಿಜೀನು ಅದೇ ತಪ್ಪು ಮಾಡದಿರಲಿ.

-@ಯೆಸ್ಕೆ

ಹೈಟೆಕ್ ಬದಲಾವಣೆ....

ಮೊದಲೆಲ್ಲ ಪರಿಚಯದವರು ಎದುರಿಗೆ ಸಿಕ್ಕಾಗ ನೀವು ಹೇಗಿದ್ದೀರಾ?ಚೆನ್ನಾಗಿದ್ದೀರಾ? ಅಂತ ಕೇಳುತ್ತಿದ್ದರು..

ಆದರೆ ಈಗ

ನೀವು ಫೇಸ್ಬುಕ್ ನಲ್ಲಿ ಇದ್ದೀರಾ?ವಾಟ್ಸಪ್ ನಲ್ಲಿ ಇದ್ದೀರಾ? ಅಂತ ಕೇಳುತ್ತಾರೆ.

-@ಯೆಸ್ಕೆ

ಒಂದು ಕಡೆ ಬರ,ಇನ್ನೊಂದು ಕಡೆ ನೆರೆಯಿಂದ ಜನರು ತತ್ತರಿಸಿ ಹೋಗಿರುವಾಗ ವಿದೇಶ ಪ್ರವಾಸಕ್ಕೆ ತೆರಳಿದ ಜನಪ್ರತಿನಿಧಿಗಳಿಗೆ ಜನರು ತಮ್ಮ ಕ್ಷೇತ್ರದಿಂದ ಅಂಥವರಿಗೆ ಬಹಿಷ್ಕಾರ ಹಾಕಬೇಕು.ಸಂವೇದನೆ ಇಲ್ಲದ ಶಾಸಕರು ನಾಗರಿಕ ಸಮಾಜಕ್ಕೆ ದೊಡ್ಡ ಕಳಂಕ.

-@ಯೆಸ್ಕೆ

ಪ್ರಧಾನಿಗಳೇ ಚೀನೀ ಅಧ್ಯಕ್ಷರಿಗೆ ಪೂರ್ತಿ ಗುಜರಾತ್ ತೋರಿಸದಿರಿ,ಮುಂದೆ ಅದನ್ನು ಅತಿಕ್ರಮಣ ಮಾಡಿಬಿಟ್ಟರೂ...

ಯಾಕೆಂದರೆ. ..

ಜಗತ್ತಿನ ಅತೀ ದೊಡ್ಡ ಭೂಗಳ್ಳರು ಅವರು.

-@ಯೆಸ್ಕೆ

ನಾವು ಫೇಸ್ಬುಕ್ಗೆ ಕೊಡೊ ಸಮಯವನ್ನು ಸ್ವಲ್ಪ ನಮ್ಮ ಸಂಬಂಧಗಳಿಗೂ ಕೊಟ್ಟಿದ್ದರೆ, ಎಷ್ಟೋ ಸಂಬಂಧಗಳು ಹಸಿರಾಗಿ ಉಳಿಯುತಿತ್ತು.

-@ಯೆಸ್ಕೆ