ನದಿಯೆ೦ಬ ನಗು

ನದಿಯೆ೦ಬ ನಗು

ಕವನ

ನದಿಯೆ೦ಬ ನಗು,
ನಿರ್ಮಲ ಪ್ರಶಾ೦ತದ ದಡ,
ಉತ್ತರದಿ ಬೋರ್ಗೆರೆಯುತ ಬರುತಿಹುದು,
ಜುಳು ಜುಳು ನಾದವ ಮಾಡುತಿಹುದು,
ಬೋರ್ಗೆರೆಯುತ ಕಲ್ಲುಬ೦ಡೆ, ಜಲಚರಗಳನು ಮುತ್ತಿಕ್ಕುತಿಹುದು,
ಪಶ್ಚಿಮ ದಡದ ತೆ೦ಗು ಗರಿಗಳು ಬೀಸುತ,
ಮಗಳಿಗೆ ಜೋಗುಳ ಹಾಡುತಿಹುದು,
ನೇಸರ ತನ್ನ ಕಿರಣಗೈಗಳಿ೦ದ ಮಗಳನು ಮುತ್ತಿಕ್ಕುತಿಹನು,

ನದಿಯಲಿ ದೋಣಿಗಾರರ ಪಯಣವು,
ಅಲ್ಲೆ ಮರದಲಿ ಕೂತ ಕೋಗಿಲೆ ಗಾನವ ಹಾಡುತಿಹುದು,
ನದಿಯಲಿ ಇಜುತ, ನೀರ ಎರುಚುತಲಿರುವ ಮಾನವನು,
ನೆರೆದ ಜೀವಿಗೆ ಇದ ಕ೦ಡು ಸ೦ತಸ ಪುಲಕಿತ,
ಇದ ಕ೦ಡು ಸ್ವರ್ಗ ನಾಚುತಿಹುದು,
ಕವಿಗೆ ಇದು ಸ್ವರ್ಗಸುಖ. ಬರೆಯುತ ಕವನಗಳನು ಕಟ್ಟುತಿಹನು.