೨೦೧೪ ರ ಇಗ್ನೊಬಲ್ ಪ್ರಶಸ್ತಿಗಳ ವಿವರ

೨೦೧೪ ರ ಇಗ್ನೊಬಲ್ ಪ್ರಶಸ್ತಿಗಳ ವಿವರ

ನೋಬೆಲ್ ಪ್ರಶಸ್ತಿಯಂತೆ ಇಗ್ನೊಬಲ್ ಪ್ರಶಸ್ತಿಯನ್ನೂ ಪ್ರತಿವರ್ಷ ಹಾರ್ವಾರ್ಡ್ ವಿಶ್ವವಿದ್ಯಾನಿಲಯದಲ್ಲಿ ಅಕ್ಟೋಬರ್ ಒಂದನೇ ತಾರೀಕಿನಂದು ನೀಡಲಾಗುತ್ತದೆ. ಜನತೆಯನ್ನು ನಗಿಸಿ ನಂತರ ಚಿಂತನೆಗೆ ಹಚ್ಚುವ ಸಂಶೋಧನೆಗಳಿಗೆ ಈ ಪ್ರಶಸ್ತಿ ಮೀಸಲು

ಈ ವರ್ಷದ ಸಾಧಕರು ಮತ್ತುಅವರ ಸಂಶೋಧನೆಯ ಪಟ್ಟಿ ಇಲ್ಲಿದೆ.

ವಿಭಾಗ: ಧ್ರುವ ಪ್ರದೇಶವಿಜ್ಞಾನ

ಸಾಧಕರು: ಐಗಿಲ್ ರೀಮರ್ಸ್ಮತ್ತರು ಸಿಂದ್ರೆ ಎಫ್ತೆಸ್ಟಾಲ್

ಹಿಮಸಾರಂಗವುಧ್ರುವ ಕರಡಿಯಂತೆ ವೇಷ ಧರಿಸಿದ ಮನುಜರನ್ನುನೋಡಿ ಹೇಗೆ ಪ್ರತಿಕ್ರಿಯಿಸುತ್ತವೆ ಎಂದುಅಭ್ಯಾಸ ಮಾಡಿದ್ದಕ್ಕೆ.

ವಿಭಾಗ: ಕಲೆ

ಸಾಧಕರು: ಮರಿಯಾನ ಡೆ ಟೊಮೊಸೊ, ಮೈಕೇಲ್ ಸರ್ದಾರೋ ಮತ್ತು ಪಾಲೋ ಲಿರಿಯಾ

ಉತ್ತಮವಾದಚಿತ್ರ ನೋಡುತ್ತಿರುವಾಗ ಲೇಸರ್ ಗನ್ ಹೊಡೆತಕ್ಕೆತುತ್ತಾದವರಿಗೂ, ಕೆಟ್ಟ (ಕುರೂಪಿ) ಚಿತ್ರನೋಡುತ್ತಿರುವಾಗ ಲೇಸರ್ ಗನ್ ಹೊಡೆತಕ್ಕೆತುತ್ತಾದವರಿಗೂ ಆಗುವ ನೋವಿನ ಪ್ರಮಾಣವನ್ನುಸಾಪೇಕ್ಷವಾಗಿ ಅಳತೆ ಮಾಡಿದ್ದಕ್ಕಾಗಿ

ವಿಭಾಗ: ಜೀವ ವಿಜ್ಞಾನ

ಸಾಧಕರು: ವ್ಲಸ್ತಿಮಿಲ್ ಹಾರ್ಟ್, ಪೆಟ್ರ ನೋವಕೋವ, ಎರಿಕ್ ಪಾಸ್ಕಲ್ ಮಾಲ್ಕೆಂಪರ್, ಸಬಿನ್ ಬೇಗಲ್, ವ್ಲಾಡಿಮಿರ್ ಹಂಜಲ್, ಮಿಲೋಸ್ ಜೆಸೆಕ್, ತೋಮಸ್ ಕುಸ್ತ, ವೆರೊನಿಕ ನೆಮ್ಕೋವ,ಜಾನ ಆದಂಕೊವ, ಕಾತೆರಿನಾ ಬೆನೆದಿಕ್ಟೋವ, ಜರಸ್ಲಾವ್ ಸೆರ್ವೆನಿ ಮತ್ತು ಹೈನೆಕ್ ಬುರ್ಡಾ

ನಾಯಿಗಳುಮಲ-ಮೂತ್ರ ವಿಸರ್ಜನೆಯ ಸಮಯದಲ್ಲಿತಮ್ಮ ದೇಹವನ್ನು ಕಾಂತೀಯ ಉತ್ತರ-ದಕ್ಷಿಣದಿಕ್ಕಿನತ್ತ ತಿರುಗಿಸಿಕೊಂಡಿರುತ್ತವೆಎನ್ನುವುದನ್ನು ಆಧಾರ ಸಮೇತ ದಾಖಲಿಸಿಕೊಂಡಿರುವುದಕ್ಕಾಗಿ

ವಿಭಾಗ: ಅರ್ಥಶಾಸ್ತ್ರ

ಸಾಧಕರು: ಇಟಲಿ ಸರ್ಕಾರದ ರಾಷ್ಟ್ರೀಯ ಅಂಕಿಶಾಸ್ತ್ರ ಸಂಸ್ಥೆ.

ರಾಷ್ಟ್ರೀಯ ಆದಾಯದಲೆಕ್ಕಕ್ಕೆ ವೇಶ್ಯಾವಾಟಿಕೆ, ಮಾದಕ ದ್ರವ್ಯ ಮಾರಾಟ,ಕಳ್ಳಸಾಗಣೆ ಮುಂತಾದ ಕಾನೂನು ಬಾಹಿರಕೃತ್ಯಗಳಿಂದ ಬರುವ ಆದಾಯವನ್ನು ಗಣನೆಗೆತೆಗೆದುಕೊಂಡು, ಯೂರೋಪಿನಇತರ ದೇಶಗಳಿಗೆಮಾದರಿಯಾಗುವಂತಹ ನಡೆಯನ್ನುರೂಪಿಸಿದ್ದಕ್ಕೆ

ವಿಭಾಗ: ವೈದ್ಯಕೀಯ

ಸಾಧಕರು: ಇಯಾನ್ ಹಂಪ್ರಿ, ಸೋನಾಲ್ ಸರಯ್ಯಾ, ವಾಲ್ಟರ್ ಬೆಲೆಂಕಿ ಮತ್ತು ಜೇಮ್ಸ್ ಡ್ವಾರ್ಕಿನ್

ಮೂಗಿನಿಂದಸುರಿಯುವ ರಕ್ತವನ್ನು ನಿಲ್ಲಿಸಲು, ಸಂಸ್ಕರಿಸಿದ ಹಂದಿ ಮಾಂಸದ ತುಣುಕನ್ನುಮೂಗಿನಲ್ಲಿ ಅಡ್ಡಲಾಗಿ ಹಿಡಿದು ಚಿಕಿತ್ಸೆ ಮಾಡಬಹುದೆಂದುತೋರಿಸಿದ್ದಕ್ಕೆ .

ವಿಭಾಗ: ನರವಿಜ್ಞಾನ

ಸಾಧಕರು: ಜಿಯಂಗಾಂಗ್ ಲಿ, ಜುನ್ ಲಿ, ಲು ಫೆಂಗ್, ಲಿಂಗ್ ಲಿ, ಜೀ ತಿಯಾನ್ ಮತ್ತು ಕಾಂಗ್ ಲಿ

ಬ್ರೆಡ್ಟೋಸ್ಟಿನ ತುಣುಕಿನಲ್ಲಿ ಜೀಸಸ್ ಮುಖ ನೋಡಿದವರಮಿದುಳಿನಲ್ಲಿ ನಡೆಯುವ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಕ್ಕಾಗಿ

ವಿಭಾಗ: ಪೌಷ್ಟಿಕ ವಿಭಾಗ

ಸಾಧಕರು: ರಾಕ್ವೆಲ್ ರುಬಿಯೋ, ಅನ್ನಾ ಜೋಫ್ರೆ, ಬೆಲೆನ್ ಮಾರ್ಟಿನ್,ತೆರೇಸಾ ಐಮೆರಿಕ್ ಮತ್ತು ಮಾರ್ಗರಿಟಾ ಗರಿಗಾ,

ಎಳೆಯ ಮಕ್ಕಳ ವಿಸರ್ಜನೆಯಿಂದ ಬೇರ್ಪಡಿಸಿದಲಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯವನ್ನು ಸಂಸ್ಕರಿಸಿದ ಸಾಸೇಜ್ ತಯಾರಿಸಲು ಪ್ರೇರಕವಾಗಿಬಳಸಬಹುದಾದ ಗುಣ ಲಕ್ಷಣ ಗಳನ್ನುಅಭ್ಯಾಸ ಮಾಡಿದ್ದಕ್ಕೆ.

ವಿಭಾಗ: ಭೌತ ಶಾಸ್ತ್ರವಿಭಾಗ

ಸಾಧಕರು: ಕಿಯೋಶಿ ಮಬೂಚಿ, ಕೆನ್ಸಿ ತನಾಕ, ಡೈಕಿ ಉಜ್ಜಿಮಾ ಮತ್ತು ರಿನಾ ಸಕಾಯಿ.

ಬಾಳೆಹಣ್ಣಿನಸಿಪ್ಪೆಯ ಮೇಲೆ ಕಾಲಿಟ್ಟಾಗ ಬಾಳೆಹಣ್ಣಿನಸಿಪ್ಪೆಗೂ ಪಾದರಕ್ಷೆಗೂ ನಡುವಿನ ಘರ್ಷಣೆಯನ್ನು ಹಾಗೂಬಾಳೆಯಣ್ಣಿನ ಸಿಪ್ಪೆಗೂ ನೆಲದನಡುವಿನ ಘರ್ಷಣೆಯನ್ನು ಅಳತೆ ಮಾಡಿದ್ದಕ್ಕೆ

ವಿಭಾಗ: ಮನಶಾಸ್ತ್ರ

ಸಾಧಕರು: ಪೀಟರ್ ಕೆ ಜೋನಾಸನ್, ಆಮಿ ಜೋನ್ಸ್ ಮತ್ತು ಮಿನ್ನಾ ಲಯನ್ಸ್

ರಾತ್ರಿಹೊತ್ತಾಗಿ ಮಲಗುವ ವ್ಯಕ್ತಿಗಳು ಬೆಳಿಗ್ಗೆಬೇಗ ಏಳುವ ವ್ಯಕ್ತಿಗಳಿಗಿಂತ, ಹೆಚ್ಚುಆತ್ಮರತಿಯವರೂ, ಹೆಚ್ಚು ಚಾಲಾಕಿನವರೂಮತ್ತು ಮಾನಸಿಕವಾಗಿ ಹೆಚ್ಚು ವಿಕಲ್ಪವಾದವರೂ ಆಗಿರುತ್ತಾರೆಎನ್ನುವುದನ್ನು ಪ್ರಮಾಣೀಕರಿಸಲು ಸಾಕ್ಷಿಗಳನ್ನು ಸಂಗ್ರಹಿಸಿದ್ದಕ್ಕಾಗಿ

ವಿಭಾಗ: ಸಾರ್ವಜನಿಕ ಆರೋಗ್ಯ

ಸಾಧಕರು: ಜರೋಸ್ಲಾವ್ ಫ್ಲೀಗರ್, ಜಾನ್ ಹ್ಯಾವ್ಲಿಸೆಕ್, ಜಿತ್ಕ ಹನುಸೋವಾ-ಲಿಂಡೋವಾ ಮತ್ತು ಡೇವಿಡ್ ಹನ್ಯೂರ್, ನರೇನ್ ರಾಮಕೃಷ್ಣನ್, ಲಿಸಾ ಸೇಫ಼್ರೇಡ್

ಬೆಕ್ಕನ್ನುಸಾಕುವುದು ಮಾನಸಿಕ ಆರೋಗ್ಯಕ್ಕೆ ಹಾನಿಕರವೇಎಂದು ಸಂಶೋಧನೆಯನ್ನು ಮಾಡಿದ್ದಕ್ಕಾಗಿ

ಆಧಾರ :

http://en.wikipedia.org/wiki/List_of_Ig_Nobel_Prize_winners#2014

www.improbable.com/ig/winners/

೨o೧೨ ನೇ ಸಾಲಿನ ಪ್ರಶಸ್ತಿಗಳಿಗೆ ಇಲ್ಲಿ ನೋಡಿ:

೨೦೧೦ ನೇ ಸಾಲಿನ ಪ್ರಶಸ್ತಿಗಳಿಗೆಇಲ್ಲಿ ನೋಡಿ

೨೦೦೯ ನೇ ಸಾಲಿನ ಪ್ರಶಸ್ತಿಗಳಿಗೆ ಇಲ್ಲಿ ನೋಡಿ

Rating
No votes yet