ನಿಮ್ಮ ಗೂಗಲ್ ಮೆದುಳಿಗೊಂದು ಕೈಪಿಡಿ

ನಿಮ್ಮ ಗೂಗಲ್ ಮೆದುಳಿಗೊಂದು ಕೈಪಿಡಿ

ಚಿತ್ರ

ಗೂಗಲ್ಲಿಗೆ ಇನ್ನೂ ಟೀನ್ ಏಜು. ಮೊನ್ನೆ ತಾನೆ ಹದಿನಾರು ವರ್ಷ ತುಂಬಿತು. ಈ ಅಲ್ಪಾವದಿಯಲ್ಲೇ ಗೂಗಲ್ ಎಲ್ಲರ ಮೆಚ್ಚಿನ ಹುಡುಗ ಮಾತ್ರ ಅಲ್ಲ ಎಲ್ಲರಿಗೂ ಬೇಕಾದವ! ಗೂಗಲ್ ಇಲ್ಲದೆ ಬದುಕುವುದನ್ನೊಮ್ಮೆ ಯೋಚಿಸಿನೋಡಿ. "ಏನ್ ಸ್ವಾಮಿ ಮೆದುಳೇ ಇಲ್ಲದೆ ಬದುಕುವುದುಂಟಾ?!" ಅಂತಾರೆ ಇವತ್ತಿನ ಜನ. ಮಕ್ಕಳ ಅಸಾಯಿನ್‍ಮೆಂಟು ಹುಡುಕಿ ಕೊಡುವುದರಿಂದ ಹಿಡಿದು, ಕಂದಮ್ಮಗಳಿಗೆ ನಾಮಕರಣಮಾಡಲು ಹೆಸರು ಹುಡುಕುವವರೆಗೆ ಗೂಗಲ್ ಕೆಲಸಮಾಡುತ್ತಿದೆ. "ಗೂಗಲ್ ಏನು ಬೇಕಾದ್ರು ಹುಡುಕಿಕೊಡುತ್ತೆ ಅಂತೀರಲ್ಲಾ, ನನ್ನ್ ಚಪ್ಪಲ್ ಹುಡುಕ್ಲಿ ನೋಡಣ" ಹೀಗಂತ ಅಪಹಾಸ್ಯ ಮಾಡಿದ್ದುಂಟು. ಆದ್ರೇ ಇವತ್ತು ಅದೇ ಜನ "ಹೇಳ್ ಗುರು ಯಾವ್ ದೇವಸ್ಥಾನ್ದ್ ಹತ್ರ ಚಪ್ಲಿ ಬಿಟ್ಟಿದ್ದಿ, ಗೂಗಲ್ ಮ್ಯಾಪ್ ನಲ್ಲಿ ಹುಡ್ಕೋಣ ಅಂತಾರೆ". ಅಂದ್ರೆ ಅಸ್ಟರಮಟ್ಟಿಗೆ ಗೂಗಲ್ಲ್ ನಮ್ಮ ಜನ ಜೀವನದಲ್ಲಿ ಹಾಸುಹೊಕ್ಕಾಗಿದೆ. 'ಗೂಗಲ್' 'ಗೂಗ್ಲಿಂಗ್' ಅನ್ನೊ ಪದಗಳು ಈಗ ಆಕ್ಸ್ ಫರ್ಡ್ ಆಂಗ್ಲ ನಿಘಂಟಿನಲ್ಲೂ ನೋಂದಾಣಿ ಆಗಿವೆ. ನಾಳೆ ಯಾರಾದ್ರೂ ನಿಮ್ಮನ್ನ 'ಪ್ಲೀಸ್ ಗೂಗಲ್ ಮೈ ಗರ್ಲ್ ಫ್ರಂಡ್ ಡೂಡ್' ಅಂದ್ರೇ ತಬ್ಬಿಬ್ ಆಗ್ಬೇಡಿ. 'ಗೂಗಲ್' ಅಂದ್ರೆ 'ಸರ್ಚ್', 'ಫೈನ್ಡ್' ಅನ್ನೊಕೆ ಸಿನೊನಿಮ್, ಒಟ್‍ನಲ್ಲಿ ಗೂಗಲ್ ಅಂತಂದ್ರೆ ಹುಡುಕು 'ಹುಡುಕು' ಅಂತಂದ್ರೆ 'ಗೂಗಲ್'.

How boys google?
PC overheated solutions

How girls google?
My PC is overheated how do I get it to cool down because this pc is my life

ಈ ತಮಾಷೆ ನಿಮ್ಗೆ ಮೊದಲೇ ತಿಳಿದಿತ್ತು ಅನ್ಸುತ್ತೆ ಅಲ್ವಾ? ಹಾಗಾದ್ರೆ ಬನ್ನಿ ನಾವು ಇವತ್ತು ಈ ಎರೆಡೂ ರೀತಿಯಲ್ಲಿ ಗೂಗಲಿಸುವುದನ್ನು ಬಿಟ್ಟು ಇನ್ನೂ ಉತ್ತಮ ವಾದ ತಂತ್ರಗಳನ್ನ ಕಲಿಯೂಣ.

೧. ನಿಮ್ಮ ಇಸ್ಟದ ವೆಬ್ ತಾಣದಲ್ಲಿ, ಯಾವುದೂ ಒಂದು ಲೇಖನ ಅತವಾ ಪ್ರತಿಕ್ರಿಯೆಯನ್ನು ಹುಡುಕುವುದು ಹೇಗೆ? ಇದು ಸರಳ ಉದಾಹರಣೆಗೆ ನನಗೆ 'ಸಂಪದ' ತಾಣದಲ್ಲಿ ದೀಪಾವಳಿಗೆ ಸಂಬಂದಿಸಿದ ವಿಷಗಳನ್ನು ಹುಡುಕಬೇಕು ಎಂದಿಟ್ಟು ಕೊಳ್ಳಿ ಆಗ ಈ ಕೆಳಗಿನಂತೆ ಗೂಗಲಿಸಬೇಕು!
site:sampada.net ದೀಪಾವಳಿ
ತಾಣದ ಹೆಸರನ್ನು ಮತ್ತು ಹುಡುಕಬೇಕಾಗಿರುವ ಕೀಲಿ ಪದವನ್ನು ನಿಮ್ಮ ಅವಶ್ಯಕತೆಗೆ ತಕ್ಕಂತೆ ಸಂಪದ.ನೆಟ್ ಮತ್ತು ದೀಪಾವಳಿ ಇರುವ ಜಾಗದಲ್ಲಿ ಕ್ರಮವಾಗಿ ಬದಲಿಸಬಹುದು.

೨. ಒಂದು ವಿಷಯದ ಮೇಲೆ ನಿಮಗೆ 'ಪವರ್ ಪಾಯಿಂಟ್ ಪ್ರೆಸೆಂಟೇಷನ್' ಬೇಕಿದೆ ಎಂದಿಟ್ಟು ಕೊಳ್ಳಿ, ಉದಾಹರಣೆಗೆ ನಿಮ್ಮ ಮಗುವಿಗೆ ಶಾಲೆಯಲ್ಲಿ 'Environment' (ಪರಿಸರ) ಬಗ್ಗೆ ಪಿ.ಪಿ.ಟಿ ಮಾಡಿತರಲು ಹೇಳಿದ್ದಾರೆ ಎಂದೆಣಿಸಿ. ಗೂಗಲ್ಲಿನಲ್ಲಿ ಯಾವುದೇ ಒಂದು ನಿರ್ದಿಷ್ಟ ರೀತಿಯ ಖಡತವನ್ನು ಮಾತ್ರವೇ ಹುಡುಕುವುದು ಸರಳ.
Environment filetype:ppt
ಒಂದು ವೇಳೆ ನಿಮಗೆ ಮಂಕುತಿಮ್ಮನ ಕಗ್ಗ ಪುಸ್ತಕ ಪಿ.ಡಿ.ಎಫ್ ನಲ್ಲಿ ಓದಬೇಕಿದೆ ಎಣಿಸಿ ಆಗ ಈ ಕೆಳಗಿನಂತೆ ಹುಡುಕಿ

೩. ಗೂಗಲ್ ತನ್ನದೇ ಆದ ತಾಣಗಳ ಸಂಗ್ರಹಕವನ್ನು ಹೊಂದಿದ್ದು ವೆಬ್ ತಾಣಗಳು ಬದಲಾವಣೆ ಹೊಂದಿದ್ದರೂ ಅದನ್ನು ಸಂರಕ್ಷಿಸಿ ಇಟ್ಟುಕೊಂಡಿರುತ್ತದೆ. ಇದಕ್ಕೆ ಗೂಗಲ್ ಕ್ಯಾಶಿಂಗ್ ಎನ್ನುತ್ತಾರೆ.
cache:http://yahoo.com
ಈ ಮೇಲಿನಂತೆ ಸರ್ಚ್ ಮಾಡುವುದರಿಂದ ನಿಮಗೆ 'ಯಾಹು.ಕಾಮ್' ಈ ಹಿಂದೆ ಹೇಗಿತ್ತು ಎನ್ನುವುದನ್ನು ಗೂಗಲ್ ಕಾಶ್ ಮೂಲಕ ನೂಡಬಹುದು. ತಾಣದಲ್ಲಿ ಹೊಸ ಬದಲಾವಣೆ ಆಗಿದ್ದರೂ ಇದರಲ್ಲಿ ಹಿಡಿದಿಟ್ಟ ಹಳೆಯ ಪುಟನೋಡ ಸಿಗುತ್ತದೆ.

೪. ಗೂಗಲ್ ನಲ್ಲಿ ಲೆಕ್ಕ ಮಾಡುವುದು ಸುಲಭ.  
cos(pi)+4
ಈ ಮೇಲಿನಂತೆ ಗೂಗಲಿಸುವುದರಿಂದ ನಿಮಗೆ '3' ಎಂಬ ಉತ್ತರ ಸಿಗುತ್ತದೆ

೫. ಒಂದು ಪದದ ಅರ್ಥವನ್ನು ಗೂಗಲ್ ನಲ್ಲಿ ತಿಳಿಯುವುದು ಹೇಗೆ? ಇದು ಸುಲಭ ಗೂಗಲ್ ನಲ್ಲಿ ನಿಮಗೆ ಯಾವ ಭಾಷೆಯಿಂದ ಯಾವ ಭಾಷೆಗೆ ಬೇಕಾದರೂ ಅನುವಾದ ಮಾಡಿಕೊಳ್ಳ ಬಹುದು.
translate love into kannada
ಇದು ನಿಮಗೆ 'ಪ್ರೀತಿ' ಎಂದು ಉತ್ತರಿಸುತ್ತದೆ
translate love into chinese
'爱' ಇದು ಚೈನಿಸ್ ನಲ್ಲಿ ಪ್ರೀತಿಯ ಅರ್ಥ.
translate ಪ್ರೀತಿ into english
ಹೀಗೆ ಬರೆದಲ್ಲಿ ನಿಮಗೆ ಪುನಃ ಆಂಗ್ಲಪದ love ಸಿಗುತ್ತದೆ

೬. ನಿಮಗೆ ಕರೆನ್ಸಿ ಕನ್ವರ್ಟ್ ಮಾಡ್ ಬೇಕಾಗಿದೆ ಎಂದೆಣಿಸಿ. ನಿಮ್ಮ ಗೆಳೆಯ ನೀಡಿದ ೧೦೦ ಡಾಲರ್ ಅನ್ನು ಭಾರತೀಯ ರುಪೀಸಿಗೆ ಬದಲಿಸ ಬೇಕಿದೆ ಆಗ
1000 usd to inr
ಇದು ನಿಮಗೆ '1000 US Dollar equals 61305.00 Indian Rupee' ಎಂಬ ಉತ್ತರ ನೀಡುತ್ತದೆ. ಮೇಲೆ usd ಎಂದರೆ 'ಯು.ಎಸ್ ಡಾಲರ್' inr ಎಂದರೆ 'ಇಂಡಿಯನ್ ರುಪೀಸ್'.
20 inr to eur
ಇದು ನಿಮ್ಮ ೨೦ ರೂ ನೂಟಿನ ಮೌಲ್ಯವನ್ನು ಯೂರೋಗೆ ಬದಲಿಸಿ '20 Indian Rupee equals0.258 Euro' ಎಂದು ಹೇಳುತ್ತದೆ.

೭. ಯುನಿಟ್ ಕನ್ವರ್ಷನ್
1 km in meter
೧ ಕಿ.ಮೀ ಎಂದರೆ ೧೦೦೦ ಮೀಟರ್ಗಳು ಎಂದು ಹೇಳುತ್ತದೆ
1 pound in kg
ಒಂದು ಪೌಂಡ್ ಎಂದರೆ ೦.೪೫೩೫೯೨ ಕಿಲೋ ಗ್ರಾಂ

ಹೀಗೆ ನಿಮ್ಮ ಹುಡುಕಾಟವನ್ನು ಸುಗಮ ಗೊಳಿಸುವ ಇನ್ನೂ ಅನೇಕ ಉಪಾಯಗಳು ಗೂಗಲ್ಲ್ ನೀಡುತಿದ್ದು.
ಹೆಚ್ಚಿನಮಾಹಿತಿಗೆ 'ಗೂಗಲ್ಲಿ ನಲ್ಲಿ ಗೂಗಲಿಸುವುದು ಹೇಗೆ' ಅಂತ ಗೂಗಲಿಸ ಬೇಕು.
ಹ್ಹ ಹ್ಹ ಹ್ಹ

 

 

Rating
No votes yet

Comments

Submitted by ಗಣೇಶ Wed, 10/15/2014 - 00:05

>>"ಹೇಳ್ ಗುರು ಯಾವ್ ದೇವಸ್ಥಾನ್ದ್ ಹತ್ರ ಚಪ್ಲಿ ಬಿಟ್ಟಿದ್ದಿ, ಗೂಗಲ್ ಮ್ಯಾಪ್ ನಲ್ಲಿ ಹುಡ್ಕೋಣ ಅಂತಾರೆ". :) :)
ವಿದ್ಯಾಕುಮಾರ್ ಅವರೆ, >> translate love into chinese -ಭಾಷಾಂತರಿಸುವುದೂ ಅಲ್ಲದೇ ಉಚ್ಚಾರಣೆ ಸಹ ತಿಳಿಸಿಕೊಡುವುದು!
ಎಲ್ಲಾ ಮಾಹಿತಿಗಳಿಗಾಗಿ ಧನ್ಯವಾದಗಳು.