ಸತ್ಯೆ ಕಥೆ ಹೇಳಿದ ಜೀವಂತ ಬೊಂಬೆ..!
ಬದುಕಿನ ಸತ್ಯವನ್ನ ಹೇಳ್ತಾ ಹೋದರೆ, ಅಲ್ಲಿ ಕೇಳುವವ ಕಣ್ಣಂಚಿನಲ್ಲಿ ಕಣ್ಣಿರ ಬಿಂದು ಬಂದು ನಿಲ್ಲುತ್ತವೆ. ಆದರೆ, ಕಥೆ ಹೇಳೋ ವ್ಯಕ್ತಿ, ಸಿನಿಮಾ ರೀತಿಯಲ್ಲಿ ಕಲರ್ ಪುಲ್ ಆಗಿಯೇ ಕಟ್ಟಿಕೊಟ್ಟರೆ. ಅಲ್ಲಿ ಆಗೋ ಅನುಭವವೇ ಬೇರೆ. ಅದು ಕಂಡಿತ ‘ಫೇರ್ ಅಂಡ್ ಲವ್ಲಿ’ ಚಿತ್ರ ನೋಡಿದವ್ರರಿಗೆ ಆಗುತ್ತದೆ...
----
ಫೇರ್ ಅಂಡ್ ಲವ್ಲಿ ಅಂತದ್ದೇ ಒಂದು ಸತ್ಯಕ್ಕೆ ಸಮೀಪದ ಕಥೆಯ ಚಿತ್ರ. ಪತ್ರಕರ್ತ ಯತಿರಾಜ್ ಕೊಟ್ಟ ಕಥೇನೆ ಈ ಫೇರ್ ಅಂಡ್ ಲವ್ಲಿ ಯಾಗಿದೆ. ವಿ.ನಾಗೇಂದ್ರ ಪ್ರಸಾದ್ ಸೋದರ ಆನಂದ ಪ್ರಿಯಾ ಅವರ ಸಂಭಾಷಣೆ ಮತ್ತು ಚಿತ್ರ ಕತೆ ಕುತೂಹಲ ಮೂಡಿಸುತ್ತವೆ. ಆದರೆ, ಇಲ್ಲಿ ಹೀರೋ ಆಗಿ ನಿಮ್ಮನ್ನ ಹೆಚ್ಚು ಕಾಡೋದು ಶ್ವೇತಾ. ಶ್ವೇತಾ ಪಾತ್ರದ ಫೋಷಣೆ ಮಜ್ವಾಗಿದೆ. ಕಹಿ ಸತ್ಯವನ್ನ ಅರೆದು,ಕುಡಿದು ಮೈತಳದ, ನಿರ್ಜಿವ ಬೊಂಬೆ ಥರ ಕಾಣುತ್ತದೆ ಭೂಮಿ ಎಂಬ ಶ್ವೇತಾ ಪಾತ್ರ. ನಿಮ್ಮನ್ನೂ ಹೆಚ್ಚು ಕಾಡೋದು ಇದೇ ಪಾತ್ರ ಅನ್ನೋದು ಅಷ್ಟೇ ಸತ್ಯ..
ಭೂಮಿ ಎಂಬ ಪಾತ್ರ ಇಲ್ಲಿ ಎಲ್ಲ ಹೆಣ್ಮಕ್ಕಳ ಪ್ರತಿನಿಧಿ ಅಂತ ಕಾಣುತ್ತದೆ. ನಾವು ಯಾವುದೋ ರೆಡ್ ಲೈಟ್ ನೆರಳಿರೊ, ಏರಿಯಾದಲ್ಲಿ ಪಾಸಾದಾಗ ದೇಹವನ್ನ ಮಾರಿಕೊಂಡೇ ಉಪಜೀವನ ಮಾಡೋ ಅನೇಕ ಆ ಚಮೇಲಿಗಳ ಕಥೆನೇ ಇದು. ಆದರೆ, ಬರೋ ಕಥೆಗಳೂ ವಿಶೇಷವಾಗಿವೆ. ಯಾವುದೋ ಒಬ್ಬ ವೇಶ್ಯ ಮನೆಗೆ ಹೋದಾಗ, ಆಕೆ ದು;ಖ ಕೇಳೋವಷ್ಟು ಸಹನಿ ಇದ್ದರೇ. ಕಂಡಿತ ಇಂತಹ ಸಾವಿರ..ಸಾವಿರ ನೋವಿನ ಕಥೆಗಳು ಹೊರ ಬೀಳುತ್ತವೆ. ಆದರೆ, ಅದನ್ನ ಯಥಾವತ್ತು ಮಾಡಿದರೇ, ಡಾಕ್ಯೂಮೆಂಟ್ರಿ ಆಗೋ ಭಯವೇ ಹೆಚ್ಚು. ಫೇರ್ ಅಂಡ್ ಲವ್ಲಿ, ಈ ವಿಷ್ಯದಲ್ಲಿ ಎಲ್ಲೂ ಎಡವಿಲ್ಲ ಅಂತ ಹೇಳಬಹುದು..
ಫೇರ್ ಅಂಡ್ ಲವ್ಲಿ ಶೀರ್ಷಿಕೆ ವೇರಿ ರೋಮ್ಯಾಂಟಿಕ್ ಅನಿಸುತ್ತದೆ. ಥಿಯೇಟರ್ಒಳಗೆ ಕಾಲಿಟ್ಟು ಕಥೆಯನ್ನ ಗಮನಿಸುತ್ತ ಹೋದಂತೆ,ಬೇರೆ ಸತ್ಯಗಳೇ ಎದುರಾಗುತ್ತವೆ. ಅದನ್ನ ವಿಶ್ಲೇಷಿಸುತ್ತದ ಹೋದರೇ, ನಮ್ಮ ಒಟ್ಟು ಅಭಿಪ್ರಾಯ ಬರೋದು ಒಂದೇ. ಇದು ವೇಶ್ಯಯೊಬ್ಬಳು, ತನ್ನದೇ ಕಥೆಗಳನ್ನ ಕಲರ್ ಪುಲ್ ಆಗಿ ಅಷ್ಟೇ ರೋಚಕವಾಗಿಯೇ ಹೇಳುತ್ತಾಳೆ ಎಂದು ಬಿಡುತ್ತವೇ. ಸತ್ಯ ಅಷ್ಟೇ ಅಲ್ಲ. ಅದು ಆಳವಾಗಿದೆ. ಮೈ ಮಾಡಿರಿಕೊಂಡು,ಜೀವನ ಮಾಡೋರ ನೋವುನ್ನ ಇದು ಪ್ರೇಕ್ಷಕರಿಗೆ ರಂಜನೀಯವಾಗಿ ಕಟ್ಟಿಕೊಡೋ ಕೆಲಸ ಇಲ್ಲಾಗಿದೆ..
ವಿಷ್ಯ ಇಷ್ಟೇ ಅಲ್ಲ. ತನ್ನ ಕಥೆ ಹೇಳ್ತಾ..ಹೇಳ್ತಾ. ತನ್ನ ಕಥೆಯನ್ನ ಕೇಳ್ತಿರೋ ಆ ವ್ಯಕ್ತಿಯೂ, ಇಲ್ಲಿ ತನ್ನ ಕಳೆದು ಹೋದ ಒಲವಿನ ಓಲೆಯನ್ನ ತೆರೆದಿಡುತ್ತಾನೆ. ಆಗ ಅಲ್ಲಿ ಬರೋದು ರಾಜೇಂದ್ರಬಾಬು ಪುತ್ರಿ ನಕ್ಷತ್ರ ಪಾತ್ರ. ಮಾಯಾ ಎಂಬೋದು ಈ ಬೆಡಗಿಯ ಪಾತ್ರ. ಕೆಲವೇ ಕೆಲವು ಸಮಯ ಬರೋ ಈ ಹುಡುಗಿ ಕಥೆಯಲ್ಲಿ ಒಂದು ಫ್ಲೇವರ್ ಮತ್ತು ಕಲರ್ ತಂದು ಬಿಡ್ತಾಳೆ. ಹಾಗೆ ತನ್ನದೇ ಕತೆ ಹೇಳೋ ಆ ಭೂಮಿ ಬದುಕಿನಲ್ಲೂ ಒನ್ ಲವ್ ಸ್ಟೋರಿ ಇದೆ ಎಂಬೋದು ಇಲ್ಲಿ ರೋಚಕವಾಗಿಯೇ ಹೇಳಲಾಗಿದೆ. ಈ ಪ್ರೇಮ ಕಥೆಯಲ್ಲಿ ಬರೋದು ನಟ ವಿಜಯ್ ರಾಘವೇಂದ್ರ, ಇಲ್ಲಿ ವಿಶೇಷವಾದ ಹಾಡಿನಿಂದಲೇ ಬಂದು ಹೋಗ್ತಾರೆ. ಆದರೆ, ಇದು ಗೆಸ್ಟ್ ಅಪಿಯರೆನ್ಸ್. ಅಪಿಯರ್ ಆದ ಸ್ವಲ್ಪ ಅವಧಿಯಲ್ಲಿಯೇ ವಿಜಯ್ ರಾಘವೇಂದ್ರ ಸಂಚ್ಯೂರಿ ಭಾರಿಸಿದ್ದಾರೆ.
ಲವ್ಲಿ ಕತೆಯ ಹಲವು ಕವಲುಗಳು ತೆರೆದುಕೊಂಡರೂ ಸಹ,ಎಲ್ಲವೂ ನಿರ್ದೇಶನದಲ್ಲಿ ಸಂಕೀರ್ಣತೆ ಕಂಡು ಬರೋದಿಲ್ಲ. ನಿರ್ದೇಶಕ ರಘು ರಾಮ್ ಎರಡನೇ ಪ್ರಯತ್ನದಲ್ಲಿ ಹೆಚ್ಚು ಕೆಲಸ ಮಾಡಿರೋದು ಎದ್ದು ಕಾಣುತ್ತದೆ. ನಿರ್ದೇಶಕರ ಮಾತನ್ನ ಚಾಚುತಪ್ಪದೆ ಪಾಲಿಸಿರೊ ನೆನಪಿರಲಿ ಪ್ರೇಮ್, ಲವ್ಲಿಯಾಗಿಯೇ ಇಷ್ಟ ಆಗ್ತಾರೆ.ಗುಡ್ ಬಾಯ್ ಫೀಲ್ ಕೊಡುತ್ತಲೇ, ಕೊನೆಯಲ್ಲಿ ರಿಯಲ್ ಹೀರೋ ಅನಿಸಿಬಿಡುತ್ತಾರೆ...
ಶ್ವೇತಾ ಶ್ರೀವಾತ್ಸವ. ಹೆಚ್ಚು ಹೇಳಲೇಬೇಕು.ಮಾತುಗಳು ಸಿಂಪಲ್ ಸಿನಿಮಾ ಥರೇ ಇರುತ್ತವೆ ಎಂದು ಬರೋರಿಗೆ ಇಲ್ಲಿ ಆ ಹೂರಣವೂ ಇದೆ. ಬದುಕಿನ ಗಣಗಾಂಭಿರ್ಯದ ಫಿಲಾಸಿಪಿಕಲ್ ಡೈಲಾಗಳೂ ಇವೆ. ಯಾವುದನ್ನ ಆಯ್ದುಕೊಳ್ಳಬೇಕೆಂಬೋದು ಅವರವರಿಗೆ ಬಿಟ್ಟದ್ದು. ವಿ.ಹರಿಕೃಷ್ಣರ ಸಂಗೀತದ ಸಿನಿಮಾದ ಆಡಿಯೋ ರಿಲೀಸ್ ಆದಾಗಿನಿಂದಲೂ ‘ರಿಂಗ್ ಆಗಿದೆ’ ಹಾಡು ಎಲ್ಲರನ್ನೂ ಆವರಿಸಿತ್ತು. ಚಿತ್ರವನ್ನ ನೋಡಿ ಹೊರ ಬರೋ ಪ್ರೇಕ್ಷಕರಿಗೆ ವಿಶೇಷವಾದ ಹಾಡು ವಿಶೇಷವಾಗಿಯೇ ಟಚ್ ಆಗುತ್ತದೆ. ಒಮ್ಮೆ ನೋಡಿ. ಫೇರ್ ಅಂಡ್ ಲವ್ಲಿ.ಚೆನ್ನಾಗಿದೆ...
ರೇವನ್ ಪಿ.ಜೇವೂರ್