ಕಪ್ಪು ಹಣ !!!
ದನ ಕಪ್ಪಾದರೇನು ಹಾಲು ಕಪ್ಪೇ?
ಹಣ ಕಪ್ಪದರೇನು ಮೌಲ್ಯ ಕಪ್ಪೇ?
------------------
ಮುಗ್ದರಿಂದ ದೋಚಿದ ಹಣವು ತನ್ನಲ್ಲಿ ತುಂಬ್ಕೊಂಡಿತ್ತು ಸ್ವಿಸ್
ಬ್ಯಾಂಕಿಗೆ ತುಂಬಿದೋರು ಕೊಡುವರೇನೀಗ ಕಬ್ಬಿಣದ್ ಕಂಬಿಗೆ ಕಿಸ್?
------------------
ಹಸಿರಾದ ಹಣವೂ ಕದ್ದ ಮಾಲು ಎಂದಾದ ಮೇಲೆ ಕಪ್ಪು
ಕಪ್ಪು ಹಣ ಹೊತ್ತವರ ಹೆಸರು ಇನ್ನು ಸದಾ ಹಚ್ಚ ಹಸಿರು
------------------
ಶುಚಿತ್ವವೇ ದೈವ ಎನ್ನುತ ಶುರುವಾಯ್ತು ಸ್ವಚ್ಚ ಭಾರತ
ಕಪ್ಪು ಹಣದ ಒಡೆಯರಿಂದ ಸುದ್ದಿಗಳಿಂದು ಕೊಳೆತನಾತ
-------------------
ಕೊನೆ ಹನಿ:
ಶುಚಿರ್ಭೂತನೆಂದು ಹೇಳಿ ಕೊರಳಿಗೆ ಕಟ್ಟಿದ್ದು ಭಾರತರತ್ನ
ಬರೀ ಭೂತವೆಂದರಿತ ಮೇಲೆ ನೆಡೆವುದೇ ಮರಳಿ ಪಡೆವ ಯತ್ನ?
Comments
ಉ: ಕಪ್ಪು ಹಣ !!!
ಶ್ರೀನಾಥ ಭಲ್ಲೆಯವರಿಗೆ ವಂದನೆಗಳು
ಕಪ್ಪು ಹಣ ನಮ್ಮ ದೇಶದ ವರ್ತಮಾನದ ಸ್ಥಿತಿಗೆ ಹಿಡಿದ ಕೈಗನ್ನಡಿ,