ನಾಚಿಕೆ ಇಲ್ಲದ ಸಾಲುಗಳು-3
ಸಮುದ್ರದಲ್ಲಿ ಏರಿಳಿತಗಳೇ
ಇಲ್ಲವೆಂದರೆ,
ಅಲೆಗಳ ಸೌಂದರ್ಯವ
ಸವಿಯುವುದಾದರೂ ಹೇಗೆ ??
ಬದುಕಿನಲ್ಲಿ ಭಾವಗಳೇ
ಉಕ್ಕಿ ಬರಲಿಲ್ಲ ಎಂದರೆ,
ಬದುಕನ್ನು
ಆಸ್ವಾದಿಸುವುದಾದರೂ ಹೇಗೆ?
*****************************
ಕೆಲವೊಮ್ಮೆ ಸುಖದಷ್ಟೇ
ದುಃಖವೂ ಮುಖ್ಯ,
ಸಾಯುವ ಬದುಕನ್ನು
ಜೀವಂತವಾಗಿರಿಸಲು.
*****************************
ಕಾವಲಿ
ಬೆಂಕಿಯಲಿ ಕಾದಾಗಲೇ
ಹಿಟ್ಟನ್ನು ದೋಸೆಯಾಗಿಸುವ
ಶಕ್ತಿ ಪಡೆದುಕೊಳ್ಳುವುದು,
*****************************
ಉದ್ದ ರಸ್ತೆಯಲಿ
ಆಗಾಗ ಸಿಗುವ
"ಹಂಪ್" ಗಳೇ
ಚಾಲಕನ ತಾಳ್ಮೆಯನು
ತಿಳಿಸಿಕೊಡುವುದು
*****************************
ನೈತಿಕತೆಗೆ
"ಸರಿಯಾದ, ಜಗವ್ಯಾಪಿ
ವ್ಯಾಕ್ಯನ ಸಿಕ್ಕರೆ"
ಬಹುಷಃ
ಇಡೀ ಜಗದೊಳಗೆ
ಒಂದು ನರ-ಮಾನವನೂ
ನೈತಿಕವಾಗಿರಲಾರ
*****************************
ಅನ್ನದ ನೈಜ ರುಚಿಯನು
ಸವಿಯಬೇಕೆಂದರೆ,
ತಿನ್ನುವ ಮುನ್ನ
ಅತಿಯಾದ ಹಸಿವಿನಿಂದ
ಬಳಲಿರಬೇಕು,,
*****************************
ದಿನವೂ,,,,, ಸುಂದರ
ಸೂರ್ಯೋದಯವಾಗಬೇಕೆಂದರೆ,
ಆ ದಿನಕ್ಕೊಂದು, ಕೊನೆ
ಹಾಗು
ಒಂದು ಕರಾಳ ರಾತ್ರಿ
ಇರಲೇಬೇಕು!!!!
-- ಜೀ ಕೇ ನ
Comments
ಉ: ನಾಚಿಕೆ ಇಲ್ಲದ ಸಾಲುಗಳು-3
ನವೀನರವರಿಗೆ ವಂದನೆಗಳು
ಎಲ್ಲ ಹನಿಗವನಗಳೂ ಅರ್ಥಪೂರ್ಣವಾಗಿವೆ, ನೀವು ವ್ಯಕ್ತ ಪಡಿಸಿದ ಅಭಿಪ್ರಾಯಗಳು ನಮ್ಮ ಬದುಕನ್ನು ಸುಂದರವಾಗಿಸಿಕೊಳ್ಳಲು ಸಹಾಯ ಕಾರಿ. ಹೀಗೆಯೆ ಬರೆಯುತ್ತ ಇರಿ ಧನ್ಯವಾದಗಳು.
In reply to ಉ: ನಾಚಿಕೆ ಇಲ್ಲದ ಸಾಲುಗಳು-3 by H A Patil
ಉ: ನಾಚಿಕೆ ಇಲ್ಲದ ಸಾಲುಗಳು-3
ಪಾಟಿಲರಿಗೆ ನಮಸ್ತೆ, ಪ್ರತಿಕ್ರಿಯೆ ಶಕ್ತಿ ನೀಡಿತು, ಧನ್ಯವಾದಗಳು,