ಮೌನ--ಸಂಕ್ರಾಂತಿ

ಮೌನ--ಸಂಕ್ರಾಂತಿ

 

ನೆನಪಿನಾ ಪಿಠಾರಿ

ಯೊಳ ಹೊಕ್ಕು

ಜಾಲಾಡಿ ಸ್ಮೃತಿಗಳ

ಹೆಕ್ಕಿ ತೆಗೆದು

ಸಂಭಾಷಿಸುವಾ

ಮೌನ ಪರಿಭಾಷೆಗೇತಕೆ

ಮಾತಿನಾಡಂಬರ-

ದೊಡವೆಯಾ ಗೊಡವೆ....

 

ಬಿರಿದು ನಿಂತ

ಹೂವಿನ ಮೌನ-

ಘಮದ ಕಂಪು

ಹರಡದಿರುವುದೇ........

 

ಮಾತು ಉರಿವ

ಸೂರ್ಯನಂತೆ

ಪ್ರಖರ ;  ಮೌನ

ಕಾಡು ಬೆಳದಿಂಗಳಂತೆ

ಸುಮಧುರ ; ........

 

ಮಾತಿನಬ್ಬರಕೆ

ನಲುಗಿದಾ

ಮನ. ತಬ್ಬಿದೇ

ಮೌನ-ಸಾಂತ್ವನ......

 

ದೇಹವ ತೊರೆದಾ

ಆತ್ಮದ ತೆರದಿ

ಮೌನದ ಜಾಡು

ಬಂಧಿಸಲಾಗದು

ಮಾತಿನ ಗಾಳದಲೀ.......

ಕಮಲ ಬೆಲಗೂರ್.

 

 

 

 

 

     

 

 

 

 

 

 

 

 

 

 

 

 

 

 

 

 

 

 

Rating
No votes yet

Comments

Submitted by ಗಣೇಶ Thu, 11/13/2014 - 00:24

ಬಿರಿದು ನಿಂತ ಹೂವಿನ ಮೌನ- ಘಮದ ಕಂಪು ಹರಡದಿರುವುದೇ
.......
(ಮೌನದಲ್ಲೇ ಹೊಗಳಿದ್ದು..:)