ಚರ್ಮ ಮೃದಂಗ,

ಚರ್ಮ ಮೃದಂಗ,

ಅವನ ಸಲಾಕೆಯಂತಹ
ಬೆರಳುಗಳಿಂದ
ನನ್ನ,,,
ಒಣಗಿ ಹದವಾದ ಚರ್ಮದ ಮೇಲ್ಮೈಗೆ
ಗುದ್ದಿ ಹೊರಡಿಸಿದ ಶಬ್ಧ,
ಅಲೆ ಅಲೆಯಾಗಿ ಸಾಗಿ.
ಕೇಳುತ್ತ ಕುಳಿತವರ 
ಕಿವಿ ತಮಟೆಗಳಿಗೆ ಬಡಿದು
ಅವರ ಮೈ ಜುಮ್ಮೆಂದಾಗ,,,,

ನನ್ನ ಸಾವು ಸಾರ್ಥಕ ಎಂದುಕೊಂಡೆ.

ಅಲ್ಲಿಗೆ ನಿಲ್ಲಲಿಲ್ಲ ಹತ್ಯಾಖಾಂಡ,

ನನ್ನ ಬಳಗದವರೆಲ್ಲರನು ಕೊಂದು,
ಚರ್ಮವನ್ನು ಹಿಸಿದು
ಬೆಂಕಿಯಲಿ ಬಿಸಿ ಮಾಡಿ,
ಸೂರ್ಯನ ಶಾಖಕ್ಕೆ ಒಣಗಿಸಿ,
ಉಳಿದ ತೊಗಲನ್ನು ನಾಯಿಗಳಿಗೆ 
ತಿನ್ನಲು ಕೊಟ್ಟು,,,,,
ಎಳೆದು ಬಿಗಿದು ಕಟ್ಟಿ 
ಬೆರಳುಗಳಲ್ಲಿ ಹೊಡೆದಾಗ 
ನಾದ ಹೊಮ್ಮದಿದ್ದರೆ,,,,

ನನ್ನ ಸಾವು ಸಾರ್ಥಕವಾದಿತಾದರೂ ಹೇಗೆ?

ಆದರೂ
ಅಲ್ಲಿಗೆ ನಿಲ್ಲಲಿಲ್ಲ ಹತ್ಯಾಖಾಂಡ,

ಅವರವರ ಕಿವಿಗೆ ತಂಪೆರೆದುಕೊಳ್ಳಲು
ನಮ್ಮ ಹತ್ಯಖಾಂಡ,,,,,,
ಈ ಮಾನವರೇ ಹೀಗಲ್ಲವೇ !

ಕೆಲವೊಮ್ಮೆ ಮುನಿಸಾಗಿ,
ಗತ ಅವ್ವನ ನೆನಪಾಗಿ 
ಶಬ್ಧವನೇ ನಿಲ್ಲಿಸೋಣ ಎನ್ನಿಸಿಬಿಡುತ್ತದೆ,
ಆದರೆ,
ಅವ್ವ ಹೇಳಿದ್ದಾಳೆ,
ಇದ್ದಾಗಲೂ, ಸತ್ತಾಗಲೂ,
ನಡೆಯುತ್ತಿರಬೇಕು ನಮಗೊಪ್ಪಿಸಿದ ಕಾರ್ಯ,,
ನನ್ನ ಚರ್ಮ ಮೃದಂಗದ ಶಬ್ಧ ನಿಲ್ಲುವುದಿಲ್ಲ.

-ಜೀ ಕೇ ನ,

Comments