ಧರ್ಮರಾಯನ ಮಾತು ಮತ್ತು ಈಗಿನ ರಾಜಕಾರಣ

ಧರ್ಮರಾಯನ ಮಾತು ಮತ್ತು ಈಗಿನ ರಾಜಕಾರಣ

ಧರ್ಮರಾಯನ ಮಾತು ಮತ್ತು ಈಗಿನ ರಾಜಕಾರಣ. ..

ಒಮ್ಮೆ ಕೌರವರು ಗಂಧರ್ವರ ದ್ವೈತವನವನ್ನು ಹಾಳುಗೆಡಹಿದಕ್ಕೆ ಚಿತ್ರಸೇನನು ದುರ್ಯೋಧನನ ಸಹಿತ ಹಲವು ಕೌರವರನ್ನು ಬಂಧನದಲ್ಲಿಡುತ್ತಾನೆ.ಇದರಿಂದ ಆತಂಕಕ್ಕೆ ಒಳಗಾದ ದುರ್ಯೋಧನನ ಪತ್ನಿ ಭಾನುಮತಿ ತನ್ನ ಪತಿಯನ್ನು ಬಿಡಿಸಿಕೊಡುವಂತೆ ಧರ್ಮರಾಯನಲ್ಲಿ ಬೇಡಿಕೊಳ್ಳುತ್ತಾಳೆ.ಧರ್ಮರಾಯ ಮೊದಲೇ ಕರುಣಾಳು,ಬಾನುಮತಿಯ ಕಣ್ಣೀರಿಗೆ ಕರಗಿ ಒಪ್ಪಿಗೆ ಸೂಚಿಸುತ್ತಾನೆ. ಆದರೆ ಕೌರವರ ಮೇಲೆ ಅತೀವ ಕ್ರೋಧವಿದ್ದ ಭೀಮ ಅಣ್ಣನ ಈ ನಿರ್ಧಾರವನ್ನು ವಿರೋಧಿಸಿದಾಗ ಧರ್ಮರಾಯ ಭೀಮನಿಗೆ ಹೇಳುತ್ತಾನೆ,'ಭೀಮ. .., ನಾವು-ನಾವು ಹೋರಾಡುವಾಗ ಕೌರವರು ನೂರು.. ನಾವು ಐವರು ಆದರೆ ನಮ್ಮ ಮೇಲೆ ಹೊರಗಿನವರು ಹೋರಾಡಲು ಬಂದರೆ ನಾವು ನೂರೈವರು' ಎಂದು.
ಧರ್ಮರಾಯ ದ್ವಾಪರಯುಗದಲ್ಲಿ ಆಡಿದ ಈ ಮಾತುಗಳು ಕಲಿಯುಗದ ರಾಜಕೀಯಕ್ಕೆ ಬಹಳವಾಗಿ ಹೊಂದಿಕೆಯಾಗುತ್ತದೆ.ನಮ್ಮ ದೇಶದ ಮೇಲೆ ಶತ್ರುರಾಷ್ಟ್ರದಿಂದ ತೊಂದರೆಯಾದಾಗ ಈ ರಾಜಕೀಯ ಪಕ್ಷಗಳು ಶತ್ರುಗಳ ವಿರುದ್ಧ ಕಾದಾಡುವ ಬದಲು ತಾವು ತಾವೆ ಕಾದಾಡಿಕೊಂಡು ದೇಶವನ್ನು ಮತ್ತಷ್ಟು ದುರ್ಬಲಗೊಳಿಸುತ್ತಾರೆ.ಹೀಗಾಗಿ ರಾಜಕೀಯ ಪಕ್ಷಗಳು ಧರ್ಮರಾಯನ ಈ ತತ್ವವನ್ನು ಅರ್ಥಮಾಡಿಕೊಂಡಿದ್ದರೆ ನಮ್ಮ ದೇಶ ಸುರಕ್ಷಿತವಾಗಿರುತಿತ್ತು.

-@ಯೆಸ್ಕೆ

Comments

Submitted by ಗಣೇಶ Thu, 11/13/2014 - 00:18

ಧರ್ಮ ತತ್ವಗಳೆಲ್ಲಾ ಈಗಿನ ರಾಜಕಾರಣಿಗಳಿಗೆ ಸಂಬಂಧಿಸಿದ್ದಲ್ಲ. ದೇಶ ಹಾಳುಬಿದ್ದುಹೋಗಲಿ, ತಾವು ಸುರಕ್ಷಿತರಾಗಿದ್ದರೆ ಸಾಕು...ಅನ್ನುವ ಕೌರವ ಸಂತಾನ.:(

Submitted by keshavmysore Fri, 11/21/2014 - 18:21

ಗಣೇಶರೇ!
ಕೌರವರು ಕೆಟ್ಟವರೋ ಒಳ್ಳೆಯವರೋ ಆದರೆ ತಮ್ಮ ರಾಜ್ಯದ ರಕ್ಷಣೆಗಾಗಿಯೋ ಅಥವಾ ದುರ್ಯೋಧನನ ಪ್ರತಿ ನಿಷ್ಠೆಗಾಗಿಯೋ ರಣರಂಗದಲ್ಲಿ ಹೋರಾಡಿ ಸತ್ತರಲ್ಲವೇ? ಅಂತಹ ಕೌರವ ಸಂತಾನವನ್ನು ಇಂದಿನ ರಾಜಕಾರಣಿಗಳಿಗೆ ಹೋಲಿಸಿ ಕೌರವ ಸಂತಾನವನ್ನು ಅವಮಾನಿಸಿದ್ದೀರ! ಇದು ಅಕ್ಷಮ್ಯ! ದೇಶಕ್ಕಾಗಿ ಮಡಿದ ಒಬ್ಬ ರಾಜಕಾರಣಿಯನ್ನಾದರೂ ತೋರಿಸಿ - ಇಂದು ಯುದ್ಧದಲ್ಲಿ ಸಾಯುವವರು ಬರೇ ಸೈನಿಕರಲ್ಲವೇ?

- ಕೇಶವ ಮೈಸೂರು

Submitted by ಗಣೇಶ Sat, 11/22/2014 - 00:34

In reply to by keshavmysore

ಹೌದಲ್ವಾ! ಛೇ..ನನ್ನ ಅಕ್ಷಮ್ಯ ಅಪರಾಧವನ್ನು ಮನ್ನಿಸಿ, ಕ್ಷಮ್ಯ ಮಾಡಿ ಎಂದು (ಕೌರವರಲ್ಲಿ ಕೇಳಲಸಾಧ್ಯ) ಕೇಶವರಲ್ಲಿ ಕೇಳುವೆ. :)
ಇಂದಿನ ರಾಜಕಾರಣಿಗಳು ಅದ್ಯಾವ ಲೋಕದಿಂದ ಬಂದರೋ...ಥತ್..
ದೇಶಕ್ಕಾಗಿ ಮಡಿದ ಅಲ್ಲ ದುಡಿದ ರಾಜಕಾರಣಿಗಳೂ ಕಾಣಿಸುವುದಿಲ್ಲ. :(
ರೇಪ್ ವಿಷಯದಲ್ಲಿ ಪಕ್ಷಭೇದವಿಲ್ಲದೇ ಕೊಳಕು ಮಾತುಗಳನ್ನು ಕೇಳಿಯಾಯಿತು.
ಈಗ ಕಿಸ್ ಆಫ್ ಲವ್- ಮೋದಿ ಅಲ್ಲಿ ನಮ್ಮ ಯುವ ಜನ ಹಾಗೆ ಹೀಗೆ ಎಂದು ಹೊಗಳುತ್ತಿದ್ದಾರೆ. ಇಲ್ಲಿ ಕೆಲ ಮೂರ್ಖ ಫೇಸ್ಬುಕ್ ಯುವಕ/ಯುವತಿಯರ ಹುಡುಗಾಟವನ್ನು ಖಡಾಖಂಡಿತವಾಗಿ ಸಾಧ್ಯವಿಲ್ಲ ಎನ್ನಬೇಕಾದ ಮಂತ್ರಿಗಳು ಮೀನಮೇಷ ಎಣಿಸುತ್ತಿದ್ದಾರೆ. "ಮಂತ್ರಿ" ಶಬ್ದ ಸಹ ಇವರಿಗೆ ಉಪಯೋಗಿಸುವುದು "ಮಂತ್ರಿ" ಪದಕ್ಕೆ ಅಪಮಾನ.