ಒಂದು ಘಟನೆ
ಒಂದು ಘಟನೆ
ಅದೊಂದು ಪ್ರತಿಷ್ಠಿತ ಖಾಸಗಿ ಪ್ರೌಢಶಾಲೆ.ಶಾಲಾ ಆವರಣದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಅ ಶಾಲೆಯ ಆಡಳಿತ ಮಂಡಳಿಯು ಹುಡುಗಿಯರಿಗೆ ಹಾಫ್ ಸ್ಕರ್ಟ್ ಬದಲು ಚೂಡಿದಾರ ಡ್ರೆಸ್ ಕೋಡ್ ಜಾರಿಗೆ ತರಲು ತೀರ್ಮಾನ ಕೈಗೊಂಡಿತು.ಶಾಲಾ ಆಡಳಿತ ಮಂಡಳಿಯ ಈ ನಡೆಯನ್ನು ವಿರೋಧಿಸಿ ಪಾಲಕರ ಗುಂಪೊಂದು ಆಡಳಿತ ಮಂಡಳಿಯ ಜೊತೆ ವಾಗ್ವಾದಕ್ಕೆ ಇಳಿಯಿತು.ಮಂಡಳಿಯ ಮುಖ್ಯಸ್ಥರು ಎಷ್ಟೇ ಸಮರ್ಥನೆ ಕೊಟ್ಟರು ಇವರು ಕೇಳಲಿಲ್ಲ.ನಮ್ಮ ಮಕ್ಕಳು ಮಾಡರ್ನ್ ಆಗಿರಲಿ ಅಂತ ನಿಮ್ಮ ಶಾಲೆಗೆ ಕಳಿಸಿದ್ದು...ನೀವು ವಸ್ತ್ರಸಂಹಿತೆಯ ನೆಪ ಒಡ್ಡಿ ನಮ್ಮ ಮಕ್ಕಳನ್ನು 18ನೆ ಶತಮಾನದ ಗೌರಮ್ಮನವರ ತರ ಮಾಡಲು ಹೊರಟ್ಟಿದ್ದೀರಾ...?ಎಂದು ಕಿಡಿ ಕಾರಿ ತಮ್ಮ ಅಸಮಾಧಾನ ಹೊರಹಾಕಿದರು.ಆಗ ಅಲ್ಲೇ ಇದ್ದ ಆಡಳಿತ ಮಂಡಳಿಯ ಸದಸ್ಯರೊಬ್ಬರು,'ಹುಡುಗರು ಕುತ್ತಿಗೆಯಿಂದ ಪಾದದವರೆಗೆ ದೇಹವನ್ನು ಮುಚ್ಚುವಂತಹ ಬಟ್ಟೆ ಹಾಕಬೇಕಾದರೆ ಹುಡುಗಿಯರಿಗೆ ಯಾಕೆ ಅಂತ ಬಟ್ಟೆ ಸಾಧ್ಯವಾಗಬಾರದು ಎಂದು ಕೇಳಿದರು.ನಂತರ ಹಾಫ್ ಸ್ಕರ್ಟ್ ಧರಿಸಿದರೆ ಹೆಣ್ಮಕ್ಕಳಿಗೆ ಆಗುವ ತೊಂದರೆಯನ್ನು ಮನವರಿಕೆ ಮಾಡಿಸಲು ಅವರು ಅಲ್ಲಿದ್ದ ಪಾಲಕರೊಬ್ಬರ ಮಗಳನ್ನು ಕರೆಯಿಸಿದರು. ಚಾಕ್ ಪೀಸೊಂದನ್ನು ನೆಲಕ್ಕೆ ಎಸೆದು ಅದನ್ನು ಎತ್ತಿ ಕೊಡುವಂತೆ ಅ ಪಾಲಕರ ಮಗಳಿಗೆ ಹೇಳಿದರು.ಅವಳು ಚಾಕ್ ಪೀಸನ್ನು ಬಾಗಿ ತೆಗೆಯಬೇಕಾದರೆ,ಇವರು ಪಾಲಕರ ಗುಂಪಿನತ್ತ ತಿರುಗಿ ...ಈ ರೀತಿಯ ದೃಶ್ಯ ನಿಮ್ಮ ಕಣ್ಣಿಗೆ ಸರಿ ಕಾಣಿಸುತ್ತಿದೆಯೇ. .? ಎಂದು ಕೇಳಿದರು.ಹಾಫ್ ಸ್ಕರ್ಟ್ ಹಾಕಿಕೊಂಡರೆ ಇಂತಹ ಆಭಾಸಗಳು ಆಗುತ್ತವೆ.ಹುಡುಗಿಯರು ತಮ್ಮ ಅರಿವಿಗೆ ಬಾರದಂತೆ ದೇಹವನ್ನು ಪ್ರದರ್ಶಿಸುತ್ತಾರೆ.ಹದಿಹರೆಯದ ವಯಸ್ಸಿನ ನಮ್ಮ ಹೈಸೂಲ್ ಹುಡುಗರು ಪ್ರಚೋದನೆಯಾಗಲು ಇಷ್ಟು ಸಾಕಾಗುತ್ತದೆ ಎಂದರು.ಸ್ವಲ್ಪ ಮುಂದುವರೆದು..ನಾಗರಿಕತೆಯ ಬಹುದೊಡ್ಡ ಕೊಡುಗೆಯೆಂದರೆ ಬಟ್ಟೆ.ಮಾನವ ಮಾನ ಮುಚ್ಚಲು ಬಟ್ಟೆಯ ಅನ್ವೇಷಣೆ ಮಾಡಿದ.ನಂತರ ಅದು ಸೌಂದರ್ಯ ವೃಧ್ಧಿಯ ಸಾಧನವಾಯಿತು.ಈಗ ಮಾನ ಪ್ರದರ್ಶಿಸಲು ಬಳಕೆಯಾಗುತ್ತಿದೆ.ಮಾಡರ್ನಿಟಿ ಎಂದರೆ ನಾಗರಿಕತೆಯಿಂದ ಅನಾಗರಿಕತೆಯೆಡೆಗೆ ಹೋಗೊದಲ್ಲ ಅಂದರು.ಇವರ ಮಾತು ಮುಗಿಯುತ್ತಿದ್ದಂತೆ ಈ ಘಟನೆಗೆ ಸಾಕ್ಷಿಯಾದ ಪಾಲಕರ ಗುಂಪಿನ ಅರ್ಧದಷ್ಟು ಜನರು ವಸ್ತ್ರಸಂಹಿತೆಯ ಪರವಾಗಿ ತಮ್ಮ ದನಿಗೂಡಿಸಲು ಸಿದ್ಧರಾಗಿದ್ದರು.
-@ಯೆಸ್ಕೆ
Comments
ಉ: ಒಂದು ಘಟನೆ
ಅನುಭವಕ್ಕೆ ಬಂದಾಗಲೇ ಅರಿವು ಮೂಡುವುದು! ಉತ್ತಮ ಬರಹ.
ಉ: ಒಂದು ಘಟನೆ
ಉತ್ತಮ ಪೋಷಣೆಯನ್ನು ನೀಡುವಂತಹ ಬರವಣಿಗೆ. ಸಮಾಜದ ಸುಸ್ಥಿತಿಗೆ ಇಂತಹ ಬರವಣಿಗೆಯ ಅಗತ್ಯವಿದೆ.