ನಾ ಸೋಲಲಿಲ್ಲ ಗೆಳತಿ

ನಾ ಸೋಲಲಿಲ್ಲ ಗೆಳತಿ

ದಿನಗಳು ಲೆಕ್ಕಕ್ಕೆ ಸಿಲುಕವು .., ತಿರುಗಿ ನೋಡಿದರೆ ಬದುಕು ಎರಡೇ ಭಾಗ ಒಂದು ನಿನ್ನ ತೆಕ್ಕೆಯಲಿ ಕಳೆದದ್ದ್ದು ಮಾತೊಂದು ನಿನ್ನ ಕಳೆದು ಹೋದ  ತೆಕ್ಕೆಯನು ಹರಸಿದ್ದು ..,
ಆ ಊರಿನ ಬೀದಿಗಳಲೆಲ್ಲ ನನ್ನ ನಿನ್ನ ಮನೆಗೆ ತಲುಪಿಸಲೆಂದೇ ಹುಟ್ಟಿದವ ? ಗೊತ್ತಿಲ್ಲ , ಊರಿನ ಅಷ್ಟು ಪರಿಚಯಗಳೆಲ್ಲ ಮುಗಿಸಿ ನಿನೆಡೆಗೆ ಬಂದವನು ನಾನು , ಈಗ ನೀನಿರುವ  ಮನೆಯ ಅರಿಯದೆ ಬೀದಿಗಳೆಲ್ಲ ದಿಕ್ಕೆಟಿವೆ , ನಾ ಅವುಗಳ ಬೆನ್ನೇರಿ ಹೊರಟು  ಮತ್ತೆ ಮತ್ತೆ ದಾರಿ ತಪ್ಪುತೇನೆ ..,ಮತ್ತೆ ಮತ್ತೆ ಅರಸುತೇನೆ .. 
ಉರಿವ ಬೆಳಕಂತ ನಿನ್ನ ನಗುವ ಅರಸಿ ಅರಸಿ ಮತ್ತೆ ಮತ್ತೆ ಆ ಮನೆಯ ಗೋಡೆಗಳನ್ನು ದಿಟ್ತಿಸುತೇನೆ , ನಿನ್ನ ಕಣ್ಣ ಮಿಂಚಿನ ಬೆಳಕು ನನ್ನ ಮೊಗವ ಮತ್ತೆ ಅರಳೀಸಿತೆಂಬ ಆಕ್ರಂದನೆ...ಅನಂದವಲ್ಲಿ .., 
ಈ ದೇಹ ಮಂಡಿಯೂರಿ ಆ ಪರಿ ದೈವವನ್ನು ಬಯಸಲಿಲ್ಲ , 
ನಿನಗೂ  ಗೊತ್ತು ಉಸಿರ ಬಗೆದು ಎನ್ನ ಕದ್ದೊಯುವ ಸಾವಿಗೂ ನಾ  ಆ ಪರಿ  ಸೋಲುವುದಿಲ್ಲ ..,
ಅದಾವ ಕ್ರೌರ್ಯದ ಮೊನಪೋ ನಿನ್ನ ಮಾತಿನ ಬಿರುಸಿಗೆ , ಆ ಕೊನೆಯ ಚೂಪಿಗೆ ನಾ ಕೊರಗಿ ಸೊರಗಿ 
ನಲುಗಿ ಹೋದೆ .., 
ನಾ ಸೋಲಲಿಲ್ಲ ಗೆಳತಿ ನಿನ್ನ ಗೆಲ್ಲಿಸಿ ಹೊರಟೆ .., 
ನಿನಗೆಂದು ಬರೆದ , ಬರೆಯದೆ ಉಳಿಸಿದ ಅಷ್ಟು ಕವಿತೆಗಳು ಇಂದು ಎದೆ ಒಳಗೆ ಬೇಯುತ್ತವೆ , 
ನನ್ನ ಭಾವದ ತೆಕ್ಕೆಯ ಬಿಸಿ ಇದ್ದದ್ದು ನನ್ನ ಕಾವ್ಯದಲ್ಲಿ,   ನಾ ಕಾವ್ಯವಾಗಿ  ಹೊಮ್ಮಿದ್ದರೆ  ನೀನು ಕರಗುತ್ತಿದೆಯೇನೋ ..
ಉಳಿದು ಹೋದ ಎಲ್ಲ ಜೀವಗಳಂತೆ ನನ್ನಲು ಜನ್ಮಕಾಗುವಷ್ಟು ನೋವಿದೆ , ಮೋಸ ಹೋದ ದಣಿವಿದೆ ..,

ಚೆಲುವ ನಿನ್ನದು ? ನನ್ನ ಸಳದದ್ದು , ಮುಗ್ಧತೆಯ ? ಅದಾವ ಸಂಕೀರ್ಣ ಅಭೇದ್ಯ ಗಣಿತವೋ ಇನ್ನು ಉತ್ತರ ಅರಸಿ ತತ್ತರಿಸುತಿರುವೆ .., ಪ್ರತಿ ಬಾರಿ ಉಳಿದದ್ದು ಸೊನ್ನೆಯೆ ..,
ಬದುಕು ಹಿಂದೆ ಹೋಗುವ ಪಯಣವಲ್ಲ , ಮುಂದೆ ಸಾಗಲು ನನ್ನ ಗಾಲಿಗಳೆಲ್ಲ ಈ ಗಾಡಿ ಬಿಟ್ಟು ಹೋಗಿ ಅರ್ಧ ಆಯಸ್ಸಾಗಿದೆ.

ನಿನಗೆ ಹೇಳದ ಒಂದು ಸಂಗತಿ ಗೊತ್ತ , ತಿಂಗಳು ನಿನ್ನ ಕಾಣದೆ ನಾ ನೋವುಂಡು  ಕಾಯುತಿದದ್ದು ??
ಅಪರರೂಪಕ್ಕೆ ನಿನ್ನ  ಮನೆಯ ಬಾಗಿಲಿಗೆ  ಬಂದಾಗ   ನಿನ್ನಲ್ಲಿ   ನನ್ನ ಕಂಡೊಡನೆ ಮೂಡುವ ಸುಳ್ಳು ಆಶ್ಚರ್ಯದ್ದು ,
 ಗೆಳತಿ ನೀ ದೂರ ದೂಡುವೆಯೆಂಬ ಸಣ್ಣ ಸುಳಿವ ನನಗೆ ತೋರಬಾರದಿತ್ತೆ :(??
 ಆ ತಿಂಗಳು , ,ವಾರ  ವರುಷ ನಿನ್ನ ಉಸಿರಗಂಟಿ ನಿಂತು  ಬಿಡುತ್ತಿದೆ ,

 ಇರಲಿ ನಾನು ಕರುಣೆಗೆ ಅರ್ಹನಲ್ಲ ಎಂಬುದು ನೀನಿಟ್ಟ ತೀರ್ಪು , ನಾ  ಅರಿಯಬಲ್ಲೆ ...,

ನಮ್ಮೂರ   ಹೊಳೆಗೆ ಅಂಟಿದ ಮೆಟ್ಟಿಲ  ಮೇಲೆ , ಅ ದೇವಸ್ಥಾನದ ಹಜಾರದಲ್ಲಿ  ಕುಳಿತು ,  ಮತ್ತೆ  ಮತ್ತೆ ಅಳುತೇನೆ .
ನಿನಗೆ ಗೊತ್ತ ಆ ಬಸವನಿಗೆ   ನಮ್ಮ  ಪ್ರೀತಿ ಫಲಿಸಿದರೆ  ಸಣ್ಣ  ಕಿರೀಟ ಕೊಡುವ ಹರಕೆ ಇಟ್ಟಿದ್ದೆ ??
 ಈ ನಡುವೆ ಆ ಗುಡಿಯ   ಬಾಗಿಲಲ್ಲಿ ಕೂತು ಅಣಕಿಸುವ ಅವನಿಂದ  ಅವಿತು  ನಿಂತು ನಿಟ್ಟುಸಿರು ಬಿಡುತೇನೆ..

ಆ ಕೃಷ್ಣನ ಗುಡಿಯ ಬಕುತಿಯ ಅಲೆಗೆ ಸಿಕ್ಕಿ ಉನ್ಮಾದದಿ ತೇಲುತಿದ್ದ ನಾ , ನಿನ್ನ ಪ್ರೀತಿಯೂ  ಪ್ರಾಪಂಚಿಕ ವಿಚಾರದ , ಮೋಹಕ್ಕೆ ಮುಸುಕು  ಹಾಕಿದ ಸೆಳೆತ ಎಂದು ಭಾವಿಸಿದ ಮರುಕ್ಷಣಕ್ಕೆ   ಅಧ್ಯಾತ್ಮದ ಹಸಿವು ಮರೆಸಿ ಹೊರಗೆ ಬಂದೆ .

ಈಗ  ನೀನಿಲ್ಲ , ಆ ಗುಡಿಯ ಬಾಗಿಲು ನನ್ನ ವ್ಯಂಗ್ಯದಿ  ಕರೆಯುತಿದೆ , ಹೋಗಲಾರೆ  ...,

ದೈವ ಇಲ್ಲಿಂದ ಸೋತವರು ಅರಸುವ ಪಲಾಯನ ಸೂತ್ರವಲ್ಲ ಅದು ಗೆದ್ದವನಲ್ಲಿ ಹುಟ್ಟುವ ವೈರಾಗ್ಯ ..,
ನಾನು ಗೆದ್ದರೆ ದೈವಕ್ಕೆ ಕೈ ಚಾಚುವೆ ,  ಇಲ್ಲವಾದರೆ ದೈವಕ್ಕೆ ಅವಮಾನ , ಒಮ್ಮೆ ದಿಕ್ಕರಿಸಿರುವೆ ಮತ್ತೆ ದಿಕ್ಕರಿಸಲಾರೆ .
ನಾನು ತಿರಸ್ಕಾರಕ್ಕೆ ಸಿಲುಕಿ ಕೊಚ್ಚಿ ಹೋದ  ಆತ್ಮಾಬಿಮಾನವ ?
ಇಲ್ಲ ,
ನಿನ್ನ ಪ್ರೀತಿಯ ಹಳಸಿದ ನೆನಪ ,  ನಿನ್ನೆಗಳ , ನಿನ್ನ ಸಾ೦ಗತ್ಯದ ಮೆಲುಕಿನ ಸಣ್ಣ ಬಿಸಿಲಿಗೊಡ್ಡಿ ಒಣಗಿಸಿ ಒಣಗಿಸಿ ಎದೆಗಪ್ಪುವ,  ಮನಸ್ಸ  ಸುಟ್ಟಿ ಕೊಳ್ಳುವ  ಕಾವ ...,
ನನ್ನ ಪ್ರೀತಿ ಅತಿರೇಕ , ಮೌಡ್ಯ , ಹುಚ್ಚು , ನನ್ನ ಪ್ರೀತಿ  ಕಂಬನಿ , ನೋವು ,  ಸಂಕಟ
ನಾ ಬರೆವ ಪ್ರತಿ ಪದವು ನಿನ್ನ ಪಡೆಯದೇ ಹೋದ ಮನವು ಸಾವಿನೆಡೆಗೆ ಮುಖ ಮಾಡಿ ದೂಡಿದ ದಿನವ ,
 ಇಲ್ಲ ಬದುಕ ಗಾಡಿಗೆ ನಿನ್ನೊಡನೆ ಹೋದ ಗಾಲಿಯ ಅರಸುವ ಸೋಲುವ  ಪ್ರೀತಿಯ ..,

 ನನ್ನೆದೆ  ಸ್ಮಾಶನವಾಗಿದೆ , ನಾನು ಚಂಡಲ , ಇಲ್ಲಿ ದಿನ ಸಾಯುತ್ತೇನೆ , ನನ್ನನ್ನು ನಾ  ಸುಡುತೇನೆ , ನನ್ನ ನಿನ್ನೆಗಳ ಹೂಳುತೇನೆ ..ಮತ್ತೆ ಮೇಲೇರುವ ದೇಹವಿರದ ಆತ್ಮದಂತೆ ಗೊರಿಯಗಳಾಚೆ  ಹೊರಳುತೇನೆ , ನರಳುತೇನೆ ..,

 ನಾ  ವರುಷಗಳು  ಹಿಂದೆ ನೀ ಕೊಂದ ಆತ್ಮ , ಗೆಳತಿ .., ಮುಕ್ತಿ ನನಗೆ ಬೇಡವಾದ ವರ,
 ನನಗೆ ನಿನ್ನೊಡನೆ  ಮುಕ್ತನಾಗುವ ಬಯಕೆ .., ಮುಂದೆಲ್ಲೋ ಸಾವಿನಾಚೆಯ ಜನ್ಮದಲ್ಲಿ ನನ್ನ ತಪವು ಫಲಿಸಿ ನಿನ್ನ ಆರಾಧಿಸುವ ಜ್ವರ ....